ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ-ಉಕ್ಕಿನ ಕಾರ್ಖಾನೆ ಮುಚ್ತೇವೆ: ಕೇಂದ್ರ ಸರ್ಕಾರದ ಉತ್ತರ

ನವದೆಹಲಿ: ಚುನಾವಣೆ ಸನಿಹದಲ್ಲಿ ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದ್ದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (VISL) ಮುಚ್ಚುವುದಾಗಿ ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ.
ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲಿದ್ದೇವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದೆ. ಈ ಬಗ್ಗೆ ಕರ್ನಾಟಕ ಮೂಲದವರೇ ಆದ ರಾಜ್ಯಸಭಾ ಸದಸ್ಯ ಜೈರಾಂ ರಮೇಶ ಟ್ವೀಟ್‌ ಮಾಡಿದ್ದು, ತೀವ್ರ ಅಸಮಾಧಾನ ಹೊರಹಾಕಿದ್ದಾರೆ.ಇಂದು, ಸೋಮವಾರ ರಾಜ್ಯಸಭೆಯಲ್ಲಿ ಸರ್ಕಾರ, ಭದ್ರಾವತಿಯ ವಿಐಎಸ್‍ಎಲ್ ಅನ್ನು ಶಾಶ್ವತವಾಗಿ ಮುಚ್ಚಲಿದೆ ಎಂದು ಹೇಳಿದ್ದು, ಅದಕ್ಕೆ ಕಾರಣ ಸಹ ನೀಡಿದೆ ಎಂದು ಹೇಳಿದ್ದಾರೆ.

ಕಾರ್ಖಾನೆಗೆ ಕಬ್ಬಿಣದ ಅದಿರಿನ ಮೂಲ ಇಲ್ಲ ಎಂಬ ಕಾರಣ ನೀಡಿದೆ. ರಾಜ್ಯದಲ್ಲಿ ಖಾಸಗಿ ಕಾರ್ಖಾನೆಗಳು ಗಣಿಗಳನ್ನು ಹೊಂದಿದ್ದರೂ, ಎಸ್‍ಎಐಎಲ್‍ಗೆ ಮಾತ್ರ ಗಣಿಗಳಿಲ್ಲ ಎಂಬುದು ಆಶ್ಚರ್ಯದ ಸಂಗತಿಯಾಗಿದೆ. ಭದ್ರಾವತಿಯು ಕಬ್ಬಿಣ ಅದಿರು ಸಂಪತ್ಭರಿತ ಬಳ್ಳಾರಿಯಿಂದ ಕೇವಲ 250 ಕಿಮೀ ನಷ್ಟು ಅಂತರದಲ್ಲಿದ್ದರೂ ಈ ಕಾರಣ ನೀಡಲಾಗಿದೆ. ವಿಐಎಸ್‍ಎಲ್‍ಗೆ ಗಣಿ ಪರವಾನಗಿಯನ್ನು 2011ರಲ್ಲಿ ನೀಡಿದರೂ ಮೋದಿ ಸರ್ಕಾರ ಈವರೆಗೂ ಏನನ್ನೂ ಮಾಡಿಲ್ಲ ಎಂದು ಜೈರಾಂ ರಮೇಶ ಆರೋಪಿಸಿದ್ದಾರೆ.

ಶಿವಮೊಗ್ಗದ ಐಬಿಯಲ್ಲಿ ಇತ್ತೀಚೆಗೆ ವಿಐಎಸ್ಎಲ್ ಕಾರ್ಮಿಕ ಮುಖಂಡರ ಜೊತೆ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದರು. ಹಾಗೂ ಈ ವೇಳೆ ಕಾರ್ಖಾನೆ ಮುಚ್ಚಲು ಬಿಡದೆ ಅದನ್ನು ಪುನಶ್ಚೇತನಗೊಳಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಭರವಸೆ ನೀಡಿದ್ದರು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement