ಏಕನಾಥ ಶಿಂಧೆ ಬಣದ ವಿರುದ್ಧದ ಹೋರಾಟದಲ್ಲಿ ಶಿವಸೇನೆಯ ಹೆಸರು, ಚಿಹ್ನೆ ಕಳೆದುಕೊಂಡ ಉದ್ಧವ್ ಠಾಕ್ರೆ: “ಪ್ರಜಾಪ್ರಭುತ್ವದ ಕೊಲೆ ಎಂದ ಉದ್ಧವ್‌, ಸತ್ಯ-ಜನರ ವಿಜಯ ಎಂದ ಏಕನಾಥ ಶಿಂಧೆ

ಮುಂಬೈ: ಶಿವಸೇನೆ ಹೆಸರು ಹಾಗೂ ಪಕ್ಷದ ಬಿಲ್ಲು ಬಾಣ ಚಿಹ್ನೆ ಇಟ್ಟುಕೊಳ್ಳಲು ಶಿಂಧೆ ತಂಡಕ್ಕೆ ಚುನಾವಣಾ ಆಯೋಗ ಅನುಮತಿ ನೀಡಿದ ನಂತರ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ತಮ್ಮ ಪ್ರತಿಸ್ಪರ್ಧಿ ಏಕನಾಥ್ ಶಿಂಧೆ ಅವರನ್ನು “ಬದಲಾಗದ ದೇಶದ್ರೋಹಿ” ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಪ್ರಸ್ತುತ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಏಕನಾಥ ಶಿಂಧೆ ಸುಮಾರು 8 ತಿಂಗಳ ನಂತರ 40 ಕ್ಕೂ ಹೆಚ್ಚು ಶಿವಸೇನಾ ಶಾಸಕರೊಂದಿಗೆ ಬಂಡಾಯವೆದ್ದರು ಮತ್ತು ಕಾಂಗ್ರೆಸ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದೊಂದಿಗಿನ ಉದ್ಧವ್‌ ಠಾಕ್ರೆಯವರ ಮೈತ್ರಿ ಸರ್ಕಾರ ಈ ಕಾರಣದಿಂದ ಅಧಿಕಾರ ಕಳೆದುಕೊಂಡಿತು. ಹಾಗೂ ಏಕನಾಥ ಶಿಂಧೆ ಬಣವು ಬಿಜೆಪಿ ಜೊತೆ ಕೈಜೋಡಿಸಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿತು. ನಂತರ ಏಕನಾಥ ಶಿಂಧೆ ಬಣ ಹಾಗೂ ಉದ್ಧವ್‌ ಠಾಕ್ರೆ ಬಣ ಶಿವಸೇನಾ ಹೆಸರು ಮತ್ತು ಚಿಹ್ನೆಗಾಗಿ ಚುನಾವಣಾ ಆಯೋಗದ ಮುಂದೆ ವಾದ ಮಂಡಿಸಿದ್ದವು.. ಈಗ ಚುನಾವಣಾ ಆಯೋಗದಿಂದ ಈ ನಿರ್ಧಾರ ಬಂದಿದೆ.
ಚುನಾವಣಾ ಆಯೋಗ ಶಿವಸೇನೆ ಹೆಸರು ಹಾಗೂ ಚಿಹ್ನೆಯನ್ನು ಏಕನಾಥ ಶಿಂಧೆ ಬಣಕ್ಕೆ ನೀಡಿ ಆದೇಶಿಸಿದ ನಂತರ ಉದ್ಧವ್‌ ಠಾಕ್ರೆ ಪ್ರತಿಕ್ರಿಯಿಸಿದ್ದು,
“ಅವರು (ಏಕನಾಥ ಶಿಂಧೆ) ಶಿವಸೇನೆಯ ಚಿಹ್ನೆಯನ್ನು ಕದ್ದಿದ್ದಾರೆ. ನಾವು ಹೋರಾಡುತ್ತಲೇ ಇರುತ್ತೇವೆ ಮತ್ತು ಭರವಸೆ ಕಳೆದುಕೊಳ್ಳುವುದಿಲ್ಲ. ಸದ್ಯಕ್ಕೆ ಶಿಂಧೆ ಅವರ ಕಳ್ಳತನದಿಂದ ಸಂತೋಷವಾಗಿರಲಿ. ಒಮ್ಮೆ ದೇಶದ್ರೋಹಿ, ಯಾವಾಗಲೂ ದೇಶದ್ರೋಹಿ ಎಂದು ಠಾಕ್ರೆ ಹೇಳಿದ್ದಾರೆ.
ಏಕನಾಥ ಶಿಂಧೆ ತಂಡವು ಶಿವಸೇನೆ ಮತ್ತು ಬಿಲ್ಲು ಬಾಣದ ಚಿಹ್ನೆಯನ್ನು ಉಳಿಸಿಕೊಳ್ಳಬಹುದು ಎಂದು ಚುನಾವಣಾ ಆಯೋಗವು ಶುಕ್ರವಾರದ ಆದೇಶದಲ್ಲಿ ತಿಳಿಸಿದೆ, ಉದ್ಧವ್ ಠಾಕ್ರೆ ಬಣವು “ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ” ಎಂಬ ಹೆಸರು ಮತ್ತು “ಉರಿಯುತ್ತಿರುವ ಜ್ಯೋತಿ (ಮಶಾಲ್‌)” ಎಂಬ ಚಿಹ್ನೆ ಇರಿಸಿಕೊಳ್ಳಬಹುದು ಎಂದು ಹೇಳಿದೆ. ಇದನ್ನು ಉಲ್ಲೇಖಿಸಿದ ಉದ್ಧವ್‌ ಠಾಕ್ರೆ, ಈ ನಿರ್ಧಾರವು “ಪ್ರಜಾಪ್ರಭುತ್ವಕ್ಕೆ ಮಾರಕ” ಎಂದು ಹೇಳಿದ್ದಾರೆ.
“ಪ್ರಧಾನಿ ಈಗ ಕೆಂಪು ಕೋಟೆಯಿಂದ ಪ್ರಜಾಪ್ರಭುತ್ವ ಸತ್ತಿದೆ ಎಂದು ಘೋಷಿಸಬೇಕು” ಎಂದು ಠಾಕ್ರೆ ತಮ್ಮ ಮುಂಬೈನ ಮನೆ ಮಾತೋಶ್ರೀಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. “ನಿಜವಾದ ಬಿಲ್ಲು ಮತ್ತು ಬಾಣವು ನಮ್ಮೊಂದಿಗಿದೆ. ಅವರು (ತಂಡ ಶಿಂಧೆ) ಇವುಗಳನ್ನು ಕಾಗದದಲ್ಲಿ ಮಾತ್ರ ಹೊಂದಿದ್ದಾರೆ” ಎಂದು ಠಾಕ್ರೆ ಹೇಳಿದರು, ಉದ್ಧವ್‌ ಅವರ ತಂದೆ ಬಾಳಾ ಠಾಕ್ರೆ ಅವರು ಶಿವಸೇನೆಯನ್ನು ಸ್ಥಾಪಿಸಿದರು.
ಕಳೆದ ವರ್ಷ ತನ್ನ ವಿರುದ್ಧ ಬಂಡಾಯವೆದ್ದ 16 ಶಿವಸೇನಾ ಶಾಸಕರನ್ನು ಅನರ್ಹಗೊಳಿಸುವಂತೆ ಠಾಕ್ರೆ ತಂಡ ಮಾಡಿದ ಮನವಿಯ ಕುರಿತು ಸುಪ್ರೀಂ ಕೋರ್ಟ್ ಇನ್ನೂ ತೀರ್ಪು ನೀಡಿಲ್ಲ, ಆದರೂ ಪಕ್ಷದ ಹೆಸರು ಮತ್ತು ಚಿಹ್ನೆಯ ಕುರಿತು ಚುನಾವಣಾ ಆಯೋಗದ ಆದೇಶ ಬಂದಿದೆ, ಇದು “ಅನ್ಯಾಯ ಎಂದು ಅವರು ಹೇಳಿದರು.
ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಕಾಯಲು ಚುನಾವಣಾ ಆಯೋಗಕ್ಕೆ ನಾನು ಮನವಿ ಮಾಡಿದ್ದೆ. ಇದು ಅತ್ಯಂತ ದುರದೃಷ್ಟಕರ. ಭವಿಷ್ಯದಲ್ಲಿ, ಯಾರಾದರೂ ಶಾಸಕರು ಅಥವಾ ಸಂಸದರನ್ನು ಖರೀದಿಸಬಹುದು ಮತ್ತು ಮುಖ್ಯಮಂತ್ರಿ ಅಥವಾ ಪ್ರಧಾನಿಯಾಗಬಹುದು” ಎಂದು ಠಾಕ್ರೆ ಹೇಳಿದರು.
ಮುಖ್ಯಮಂತ್ರಿ ಶಿಂಧೆ ಅವರು ತಮ್ಮ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಸತ್ಯ ಮತ್ತು ಜನರ ವಿಜಯ ಎಂದು ಕರೆದರು. ಪ್ರಜಾಪ್ರಭುತ್ವದಲ್ಲಿ ಸಂಖ್ಯೆಗಳು ಮುಖ್ಯ ಮತ್ತು ಅದು ತಮ್ಮ ಬಳಿ ಇವೆ ಎಂದು ಹೇಳಿದರು. “ಇದು ಸತ್ಯ ಮತ್ತು ಜನರ ಗೆಲುವು ಮತ್ತು ಬಾಳಾಸಾಹೇಬ್ ಠಾಕ್ರೆ ಅವರ ಆಶೀರ್ವಾದ. ನಾನು ಚುನಾವಣಾ ಆಯೋಗಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಶಿಂಧೆ ಹೇಳಿದರು.
ಶಿವಸೇನೆಯ ಹಿಡಿತದ ಸುದೀರ್ಘ ಹೋರಾಟದ ಕುರಿತು 78 ಪುಟಗಳ ಆದೇಶದಲ್ಲಿ, ಬಂಡಾಯದ ನಂತರ ಮುಖ್ಯಮಂತ್ರಿಯಾದ ಶಿಂಧೆ ಅವರನ್ನು 2019 ರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಆಯ್ಕೆಯಾದ ಪಕ್ಷದ ಶೇಕಡಾ 76 ರಷ್ಟು ಶಾಸಕರು ಬೆಂಬಲಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement