ವಿಧಾನಸಭೆಯಲ್ಲಿ ಆರು ಖಾಸಗಿ ವಿವಿಗಳ ವಿಧೇಯಕ ಅಂಗೀಕಾರ

ಬೆಂಗಳೂರು: ಆರು ಖಾಸಗಿ ವಿಶ್ವವಿದ್ಯಾಲಯಗಳ ವಿಧೇಯಕಗಳು ಮಂಗಳವಾರ ವಿಧಾನಸಭೆಯಲ್ಲಿ ಅಂಗೀಕಾರಗೊಂಡಿತು. ಕಿಷ್ಕಿಂದ ಖಾಸಗಿ ವಿಶ್ವವಿದ್ಯಾಲಯ, ಆಚಾರ್ಯ ಖಾಸಗಿ ವಿಶ್ವವಿದ್ಯಾಲಯ, ಸಪ್ತಗಿರಿ ಖಾಸಗಿ ವಿಶ್ವವಿದ್ಯಾಲಯ, ರಾಜ್ಯ ಒಕ್ಕಲಿಗರ ಸಂಘದ ಖಾಸಗಿ ವಿಶ್ವವಿದ್ಯಾಲಯ, ಜಿ.ಎಂ ಖಾಸಗಿ ವಿಶ್ವವಿದ್ಯಾಲಯ, ಟಿ.ಜಾನ್ ವಿಶ್ವವಿದ್ಯಾಲಯ ಮಸೂದೆ ಅಂಗೀಕಾರ ಪಡೆಯಿತು.
ಬೆಳಗಾವಿ ಅಧಿವೇಶನದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಆರು ಖಾಸಗಿ ವಿವಿಗಳ ಮಸೂದೆಯನ್ನು ಮಂಡಿಸಿದ್ದರು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಾಪಸ್ ಪಡೆಯಲಾಗಿತ್ತು. ಫೆಬ್ರವರಿ 16ರಂದು ನಡೆದ ಬಜೆಟ್ ಅಧಿವೇಶನದಲ್ಲಿ ಈ ಮಸೂದೆಗಳನ್ನು ಮಂಡಿಸಲಾಗಿತ್ತು. ಈ ವೇಳೆ ಸದನದಲ್ಲಿ ಸದಸ್ಯ ಬಲ ಕೇವಲ 13 ಇದ್ದಿದ್ದರಿಂದ ಅಂಗೀಕಾರ ಪಡೆಯಲು ಸಾಧ್ಯವಾಗಿರಲಿಲ್ಲ. ಕೋರಂ ಸಹ ಇರಲಿಲ್ಲ. ಹೀಗಾಗಿ ಕೆಲ ವಿರೋಧ ಪಕ್ಷದ ಸದಸ್ಯರು ಮತ್ತೊಂದು ದಿನ ಮಂಡಿಸುವಂತೆ ತಿಳಿಸಿದ್ದರು. ಹೀಗಾಗಿ ಮಂಗಳವಾರ ಮಂಡಿಸಲಾಯಿತು. ಆದರೆ ವಿಶೇಷ ಚರ್ಚೆಯೇ ನಡೆಯದೆ ಮಸೂದೆಗಳು ಅಂಗೀಕಾರಗೊಂಡವು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement