ಕಡಬ: ಇಬ್ಬರನ್ನು ಸಾಯಿಸಿದ್ದ ಕಾಡಾನೆ ಕೊನೆಗೂ ಸೆರೆ

ಮಂಗಳೂರು : ಕಳೆದ ಸೋಮವಾರ ಬೆಳಿಗ್ಗೆ ಇಬ್ಬರನ್ನು ಸಾಯಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಕಾರ್ಯಾಚರಣೆ ತಂಡ ಗುರುವಾರ ಸಂಜೆ ವೇಳೆ ಯಶಸ್ವಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಂಬಾರು ಭಾಗದಲ್ಲಿ ನಾಲ್ಕು ಕಾಡಾನೆಗಳಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ತಕ್ಷಣವೇ ಕಾರ್ಯಚರಣೆಗೆ ಇಳಿದ ತಂಡ ಸುಂಕದಕಟ್ಟೆ ಬಳಿಯ ಕೊಂಬಾರು ಗ್ರಾಮದ ಮಂಡೆಕರ ಅರಣ್ಯ ಪ್ರದೇಶದಲ್ಲಿ ಪತ್ತೆ ಕಾರ್ಯ ನಡೆಸಿತು. ಈ ವೇಳೆ ಒಂದು ಕಾಡಾನೆಯನ್ನು ಪತ್ತೆ ಹಚ್ಚಿದ ತಂಡ ಅದರ ಮೇಲೆ ನಿಗಾ ಇಟ್ಟಿದೆ. ಬಳಿಕ ಸೆರೆ ಹಿಡಿಯಲು ಎಲ್ಲ ವ್ಯವಸ್ಥೆ ಮಾಡಿಕೊಂಡು ಸಂಜೆ ಸುಮಾರು 4:30ರ ವೇಳೆ ಗನ್ ಮೂಲಕ ಅರಿವಳಿಕೆ ಇಂಜೆಕ್ಷನ್‌ ಅನ್ನು ಕಾಡಾನೆಗೆ ಚುಚ್ಚಲಾಯಿತು. ಸ್ವಲ್ಪ ಸಮಯದಲ್ಲೇ ಪ್ರಜ್ಞೆ ತಪ್ಪಿ ಬಿದ್ದ ಕಾಡಾನೆಯ ಕಾಲಿಗೆ ಸೆಣಬಿನ ಹಗ್ಗದಿಂದ ಕಟ್ಟಲಾಯಿತು. ಪ್ರಜ್ಞೆ ಬಂದ ಬಳಿಕ ಕಾಡಾನೆ ಎದ್ದು ನಿಂತಿದೆ. ಬಳಿಕ ಶಿಬಿರದ ಐದು ಸಾಕಾನೆಗಳ ಸಹಕಾರದಲ್ಲಿ ಅದನ್ನು ಲಾರಿಯಲ್ಲಿ ತುಂಬಿ ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ಆನೆ ಶಿಬಿರಕ್ಕೆ ತರಲಾಗಿದೆ.
ಸೆರೆ ಹಿಡಿಲಾದ ಕಾಡಾನೆ ಸೋಮವಾರ ಇಬ್ಬರನ್ನು ಬಲಿ ಪಡೆದ ಕಾಡಾನೆ ಎಂಬುದು ಖಚಿತವಾಗಿದೆ. ಇದು ಸುಮಾರು 40 ವರ್ಷ ಪ್ರಾಯದ ಗಂಡಾನೆ ಆಗಿದ್ದು, ಬಂಧಿತ ಆನೆಯ ಕಾಲು ಹಾಗೂ ದಂತ ಭಾಗದಲ್ಲಿ ರಕ್ತದ ಕಲೆಗಳು ಕಂಡುಬಂದಿದೆ ಎನ್ನಲಾಗಿದೆ.
ಶುಕ್ರವಾರ ಸಂಜೆ ವರೆಗೆ ಬಂಧಿತ ಕಾಡಾನೆ ಮೇಲೆ ನಿಗಾ ಇರಿಸಿ ಬಳಿಕ ಬಂಧಿತ ಕಾಡಾನೆಯನ್ನು ಆನೆಗಳ ಮೀಸಲು ಅರಣ್ಯಕ್ಕೆ ಸಾಗಿಸಲಾಗುತ್ತದೆ. ಬಳಿಕ ಉಳಿದ ಕಾಡಾನೆಗಳ ಸೆರೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಮೊಬೈಲ್ ಬೆಳಕಿನಲ್ಲಿ ಸಿಸೇರಿಯನ್ ಹೆರಿಗೆ : ತಾಯಿ-ಮಗು ಸಾವು

ಸ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement