ನಾಲ್ಕು ತಿಂಗಳ ಹಸುಳೆಯೊಂದಿಗೆ ವಿಧಾನಸಭೆ ಕಲಾಪದಲ್ಲಿ ಭಾಗವಹಿಸಿದ ಶಾಸಕಿ…!

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಬಜೆಟ್ ಅಧಿವೇಶಕ್ಕೆ ಶಾಸಕಿಯೊಬ್ಬರು ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ಭಾಗವಹಿಸಿ ಗಮನ ಸೆಳೆದಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ದಿನವಾದ ಇಂದು, ಸೋಮವಾರ ಮುಂಬೈಗೆ ಆಗಮಿಸಿದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‍ಸಿಪಿ) ಶಾಸಕಿ ಸರೋಜ್ ಅಹಿರೆ ತಮ್ಮ ನಾಲ್ಕು ತಿಂಗಳ ಮಗನೊಂದಿಗೆ ಕಾಣಿಸಿಕೊಂಡರು. ಕಳೆದ ವರ್ಷ ಡಿಸೆಂಬರ್‌ನಲ್ಲಿ ನಾಗ್ಪುರದಲ್ಲಿ ನಡೆದ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲೂ ಅಹಿರೆ ಮಗುವಿನೊಂದಿಗೆ ಭಾಗವಹಿಸಿದ್ದರು.
ವಿಧಾನ ಭವನದಲ್ಲಿ ಹಿರ್ಕಾನಿ ಘಟಕವಿದ್ದು, ಇದನ್ನು ಮಹಿಳೆಯರು ತಮ್ಮ ಮಕ್ಕಳಿಗಾಗಿ ಬಳಸಬಹುದು. ವಿಧಾನಭವನದ ಎಲ್ಲಾ ಮಹಿಳೆಯರು ಇದನ್ನು ಬಳಸಿಕೊಳ್ಳಬಹುದು ಎಂದು ಅಧಿಕಾರಿ ತಿಳಿಸಿದ್ದಾರೆ.
ಮಗುವಿನೊಂದಿಗೆ ಭಾಗವಹಿಸಿದ್ದ ಅಹಿರೆ ಅವರು, ಹಿರ್ಕಾನಿ ಘಟಕದಲ್ಲಿರುವ ಧೂಳಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಬಾಣಂತಿಯರು ಮತ್ತು ಮಕ್ಕಳು ತಂಗುವ ಕೊಠಡಿಯನ್ನು ಸ್ವಚ್ಛಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.
ಕಾರು ಅಪಘಾತದಲ್ಲಿ ಗಾಯಗೊಂಡಿದ್ದ ಬಿಜೆಪಿ ಶಾಸಕ ಜಯಕುಮಾರ ಗೋರ್ ಅವರು ವಾಕರ್ ಹಿಡಿದು ಬಜೆಟ್ ಅಧಿವೇಶನಕ್ಕೆ ಆಗಮಿಸಿ ಗಮನ ಸೆಳೆದರು. ಈ ಹಿಂದಿನ ಹಣಕಾಸು ಸಚಿವ ಜಯಂತ ಪಾಟೀಲ ಗಾಲಿಕುರ್ಚಿಯಲ್ಲಿ ಕುಳಿತು ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ್ದು ಸ್ಮರಣೀಯವಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

3 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement