ಕಾಶ್ಮೀರಿ ಪಂಡಿತ ಸಂಜಯ ಶರ್ಮಾ ಹಂತಕ ಸೇರಿ ಇಬ್ಬರು ಉಗ್ರರನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸಮನ್ವಯತೆಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಪಡಗಂಪೋರಾದಲ್ಲಿ ರಾತ್ರಿಯ ಗುಂಡಿನ ಕಾಳಗದಲ್ಲಿ ಕಾಶ್ಮೀರಿ ಪಂಡಿತ ಸಂಜಯಕುಮಾರ ಶರ್ಮಾ ಅವರನ್ನು ಭಾನುವಾರ ಗುಂಡಿಕ್ಕಿ ಕೊಂದ ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
ಮಂಗಳವಾರ ಮಧ್ಯಾಹ್ನ ಇಬ್ಬರು ಉಗ್ರರನ್ನು ಹತ್ಯೆ ಮಾಡುವ ಮೂಲಕ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ರಾತ್ರಿ ಕಾರ್ಯಾಚರಣೆಯ ಆರಂಭದಲ್ಲಿಯೇ ಇಬ್ಬರು ಸೈನಿಕರಿಗೆ ಗಾಯಗಳಾಗಿವೆ. ವಿಶೇಷ ಚಿಕಿತ್ಸೆಗಾಗಿ ಅವರನ್ನು ಶ್ರೀನಗರದಲ್ಲಿರುವ ಸೇನೆಯ 92 ಮೂಲ ಆಸ್ಪತ್ರೆಗೆ ರವಾನಿಸಲಾಗಿದೆ. ಎಂದು ಅವರು ಹೇಳಿದರು.
ಎನ್‌ಕೌಂಟರ್‌ನಲ್ಲಿ ಹತರಾದ ಇಬ್ಬರು ಭಯೋತ್ಪಾದಕರಲ್ಲಿ ಒಬ್ಬನನ್ನು ಭಾರತೀಯ ವಾಯುಪಡೆಯ ಅವಂತಿಪೋರಾ ಬೇಸ್‌ನ ಸಮೀಪದಲ್ಲಿರುವ ಪುಲ್ವಾಮಾದ ಮಲಂಗ್‌ಪೋರಾ ಗ್ರಾಮದ ಆಕಿಬ್ ಮುಷ್ತಾಕ್ ಭಟ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುಟುಂಬದಿಂದ ದೃಢೀಕರಣವನ್ನು ಇನ್ನೂ ನಿರೀಕ್ಷಿಸಲಾಗಿದೆ.

ಕಾಶ್ಮೀರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ವಿಜಯಕುಮಾರ ಅವರು ಟ್ವಿಟರ್ ಮೂಲಕ ಆಕಿಬ್ ಮುಷ್ತಾಕ್ ಭಟ್ ಹತ್ಯೆಯ ಮಾಹಿತಿ ನೀಡಿದ್ದು, ಆಕಿಬ್ ಮುಷ್ತಾಕ್ ಭಟ್ ‘ಎ’ ವರ್ಗದ ಭಯೋತ್ಪಾದಕನಾಗಿದ್ದು, ಅವರು ಆರಂಭದಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ಗೆ ಸೇರಿದ್ದ. ಆದರೆ ನಂತರ ದಿ ರೆಸಿಸ್ಟೆನ್ಸ್ ಫೋರ್ಸ್ (ಟಿಆರ್‌ಎಫ್) ಗೆ ವರ್ಗಾವಣೆಗೊಂಡಿದ್ದ. “ದಿವಂಗತ ಸಂಜಯ ಶರ್ಮಾ ಕೊಲೆಗಾರ ಸತ್ತಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ.
ಭಯೋತ್ಪಾದಕ ದಾಳಿಯ ನಂತರ ಪೊಲೀಸರು ಮತ್ತು ಭದ್ರತಾ ಪಡೆಗಳು ಭಾನುವಾರದಂದು ಪುಲ್ವಾಮಾ ಜಿಲ್ಲೆಯ ಅವರ ಹಳ್ಳಿ ಅಚೆನ್‌ನಲ್ಲಿ ಗುಂಡಿಕ್ಕಿ ಕೊಲ್ಲಲ್ಪಟ್ಟ ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ ಎಟಿಎಂ ಗಾರ್ಡ್ ಸಂಜಯ ಶರ್ಮಾ ಅವರ ಹಂತಕರನ್ನು ಹುಡುಕಲು ಪ್ರಾರಂಭಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

ಮಾನವ ಮತ್ತು ವಿದ್ಯುನ್ಮಾನ ಕಣ್ಗಾವಲಿನ ಸಹಾಯದಿಂದ, ಸೋಮವಾರ ಮಧ್ಯರಾತ್ರಿಯ ಸುಮಾರಿಗೆ ಪುಲ್ವಾಮಾದ ಅವಂತಿಪೋರಾ ಪೊಲೀಸ್ ಜಿಲ್ಲೆಯ ಪಡಗಂಪೋರಾದ ಮಸೀದಿಯಲ್ಲಿ ಹಂತಕರನ್ನು ಪತ್ತೆಹಚ್ಚಲಾಯಿತು ಮತ್ತು ಸಿಕ್ಕಿಬಿದ್ದರು.
ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿರುವಾಗ, ಅಡಗಿದ ಭಯೋತ್ಪಾದಕರು ಸೈನಿಕರತ್ತ ಗುಂಡು ಹಾರಿಸಿದರು ಮತ್ತು ತಪ್ಪಿಸಿಕೊಳ್ಳಲು ವಿಫಲ ಪ್ರಯತ್ನಗಳನ್ನು ಮಾಡಿದರು. ಆದಾಗ್ಯೂ, ಪೊಲೀಸ್ ಮತ್ತು ಭದ್ರತಾ ಪಡೆಗಳು ಅವರ ಪ್ರಯತ್ನಗಳನ್ನು ವಿಫಲಗೊಳಿಸಿದವು. ಆಕಿಬ್ ಮುಷ್ತಾಕ್ ಮಸೀದಿಯಿಂದ ಪಕ್ಕದ ಮನೆಗೆ ತಪ್ಪಿಸಿಕೊಳ್ಳುವಾಗ ಆತನನ್ನು ಹೊಡೆದುರುಳಿಸಲಾಗಿದೆ. ಆತನ ಸಹಚರ ಹಲವಾರು ಗಂಟೆಗಳ ಕಾಲ ಬೇರೆ ಮನೆಯಲ್ಲಿ ಅಡಗಿಕೊಳ್ಳಲು ಯಶಸ್ವಿಯಾದ. ಆದರೆ ಮಂಗಳವಾರ ಮಧ್ಯಾಹ್ನ ಹತನಾಗಿದ್ದಾನೆ.

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement