ಹೆಚ್ಚಿನ ಪಿಂಚಣಿ ಆಯ್ಕೆ ಮಾಡಲು ಇದ್ದ ಕಾಲಾವಕಾಶ ವಿಸ್ತರಿಸಿದ ಇಪಿಎಫ್‌ಒ

ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸೋಮವಾರ ಚಂದಾದಾರರಿಗೆ ಹೆಚ್ಚಿನ ಪಿಂಚಣಿ ಆಯ್ಕೆ ಮಾಡಲು ಮೇ 3ರ ವರೆಗೆ ಗಡುವನ್ನು ವಿಸ್ತರಿಸಿದೆ. ಈ ಹಿಂದೆ, ಅಧಿಕ ಪಿಂಚಣಿಯನ್ನು ಆಯ್ಕೆ ಮಾಡಲು ಮಾರ್ಚ್ 3 ಕೊನೆಯ ದಿನಾಂಕ ಎಂದು ಇಪಿಎಫ್‌ ಹೇಳಿತ್ತು.
2022ರ ನವೆಂಬರ್ 4 ರಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಎಲ್ಲ ಅರ್ಹ ಸದಸ್ಯರಿಗೆ ಹೆಚ್ಚಿನ ಪಿಂಚಣಿ ಆಯ್ಕೆ ಮಾಡಲು 4 ತಿಂಗಳ ಕಾಲಾವಕಾಶವನ್ನು ನೀಡುವಂತೆ ಆದೇಶಿಸಿತ್ತು.
ಅದರಂತೆ ಗಡುವು ಮಾರ್ಚ್ 3 ರಂದು ಕೊನೆಗೊಳ್ಳಬೇಕಿತ್ತು. ಆದರೆ ಇಪಿಎಫ್‌ಒ(EPFO) ಕಳೆದ ವಾರವಷ್ಟೇ ನೌಕರರ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಇಪಿಎಫ್‌ಒ ​​ಚಂದಾದಾರರು ಮತ್ತು ಅವರ ಉದ್ಯೋಗದಾತರು ಉದ್ಯೋಗಿಗಳ ಪಿಂಚಣಿ ಯೋಜನೆ (EPS) ಅಡಿಯಲ್ಲಿ ಹೆಚ್ಚಿನ ಪಿಂಚಣಿಗಾಗಿ ಜಂಟಿಯಾಗಿ ಅರ್ಜಿ ಸಲ್ಲಿಸುವ ಒಂದು ಕಾರ್ಯವಿಧಾನವನ್ನು ಪ್ರಕಟಿಸಿದೆ. ಹೀಗಾಗಿ ಈಗ ಗಡುವುದನ್ನು ಮೇ 3ರ ವರೆಗೆ ವಿಸ್ತರಿಸಿದೆ.

ಸುಪ್ರೀಂ ಕೋರ್ಟ್ ನೌಕರರ ಪಿಂಚಣಿ (ತಿದ್ದುಪಡಿ) ಯೋಜನೆ 2014 ಅನ್ನು ಕಳೆದ ವರ್ಷ ನವೆಂಬರ್‌ನಲ್ಲಿ ಎತ್ತಿಹಿಡಿದಿದೆ. 2014ರ ಆಗಸ್ಟ್ 22ರ ಇಪಿಎಸ್ ತಿದ್ದುಪಡಿಯು ಪಿಂಚಣಿ ವೇತನದ ಮಿತಿಯನ್ನು ತಿಂಗಳಿಗೆ 6,500 ರೂ.ಗಳಿಂದ 15,000 ರೂ.ಗಳಿಗೆ ಹೆಚ್ಚಿಸಿದೆ. ಇಪಿಎಸ್‌ಗೆ ಅವರ ನಿಜವಾದ ಸಂಬಳದ (ಅದು ಮಿತಿಯನ್ನು ಮೀರಿದ್ದರೆ) ಶೇಕಡ 8.33 ಕೊಡುಗೆ ನೀಡುವುದಕ್ಕೆ ಉದ್ಯೋಗದಾತರೊಂದಿಗೆ ಸದಸ್ಯರಿಗೂ ಅವಕಾಶ ನೀಡಿದೆ.
ಪ್ರಸ್ತುತ, ಉದ್ಯೋಗಿಗಳು ಮತ್ತು ಉದ್ಯೋಗದಾತರು ಉದ್ಯೋಗಿಗಳ ಮೂಲ ವೇತನ, ತುಟ್ಟಿಭತ್ಯೆ ಮತ್ತು ಉಳಿಸಿಕೊಳ್ಳುವ ಭತ್ಯೆಯ ಶೇಕಡಾ 12 ರಷ್ಟನ್ನು ಉದ್ಯೋಗಿ ಭವಿಷ್ಯ ನಿಧಿ ಅಥವಾ ಇಪಿಎಫ್‌ಗೆ ಕೊಡುಗೆ ನೀಡುತ್ತಾರೆ. ಉದ್ಯೋಗಿಯ ಸಂಪೂರ್ಣ ಕೊಡುಗೆಯು ಇಪಿಎಫ್‌ಗೆ ಹೋಗುತ್ತದೆ, ಆದರೆ ಉದ್ಯೋಗದಾತರಿಂದ ಶೇಕಡಾ 12 ರಷ್ಟು ಕೊಡುಗೆಯನ್ನು ಇಪಿಎಫ್‌ಗೆ ಶೇಕಡಾ 3.67 ಮತ್ತು ಇಪಿಎಸ್‌ಗೆ ಶೇಕಡಾ 8.33 ಎಂದು ವಿಂಗಡಿಸಲಾಗಿದೆ. ಭಾರತ ಸರ್ಕಾರವು ಉದ್ಯೋಗಿಯ ಪಿಂಚಣಿಗೆ ಶೇಕಡಾ 1.16 ರಷ್ಟು ಕೊಡುಗೆ ನೀಡುತ್ತದೆ, ಆದರೆ ನೌಕರರು ಪಿಂಚಣಿ ಯೋಜನೆಗೆ ಕೊಡುಗೆ ನೀಡುವುದಿಲ್ಲ.
ಈ ಹಿಂದೆ, ಹೆಚ್ಚಿನ ಪಿಂಚಣಿ ಆಯ್ಕೆಗೆ ಮಾರ್ಚ್ 3, 2023 ಕೊನೆಯ ದಿನಾಂಕವಾಗಿದೆ ಎಂಬ ಆತಂಕಗಳು ಇದ್ದವು. ಈಗ ಅದನ್ನು ಮೇ 3ರ ವರೆಗೆ ಗಡುವನ್ನು ವಿಸ್ತರಿಸಿದೆ.

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement