ಮಂಗಳೂರು – ಹುಬ್ಬಳ್ಳಿ ನಡುವೆ ವಿಮಾನಯಾನ ಸೇವೆ ಸ್ಥಗಿತ

ಮಂಗಳೂರು: ಮಂಗಳೂರು -ಹುಬ್ಬಳ್ಳಿ ವಿಮಾನಯಾನವು ಇದೇ ತಿಂಗಳು ಸ್ಥಗಿತಗೊಳ್ಳಲಿದೆ. ಏರ್‌ ಇಂಡಿಗೋ ಸಂಸ್ಥೆಯವರು ಈ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣಕ್ಕೆ ಮಾರ್ಚ್‌ 12ರಂದು ಮಂಗಳೂರು-ಹುಬ್ಬಳ್ಳಿ ವಿಮಾನಯಾನ ಸೇವೆ ಕೊನೆಗೊಳಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ ವರ್ಷದ ಮೇ ತಿಂಗಳಿನಲ್ಲಿ ಮಂಗಳೂರು ಹಾಗೂ ಹುಬ್ಬಲ್ಳಿ ನಡುವೆ ವಿಮಾನಯಾನ ಆರಂಭವಾಗಿತ್ತು.
ಮಂಗಳೂರು ಹಾಗೂ ಹುಬ್ಬಳ್ಳಿ ನಡುವೆ ವಾರದಲ್ಲಿ ಮೂರು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ವಿಮಾನ ಹಾರಾಟ ನಡೆಸುತ್ತಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಇರದ ಹಿನ್ನೆಲೆಯಲ್ಲಿ ಹಾಗಾಗಿ ಈ ವಿಮಾನ ಹಾರಾಟ ನಿಲ್ಲಿಸಲಾಗುತ್ತಿದೆ ಎಂದು ಹೇಳಲಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬೆಳಗಾವಿ | ಮಸೀದಿಯಲ್ಲಿದ್ದ ಕುರಾನ್ ಕದ್ದೊಯ್ದು ಸುಟ್ಟು ಹಾಕಿದ ಕಿಡಿಗೇಡಿಗಳು ; ಪ್ರತಿಭಟನೆ

ನಿಮ್ಮ ಕಾಮೆಂಟ್ ಬರೆಯಿರಿ

advertisement