ಮಾರ್ಚ್ 20 ರಿಂದ ಹುಬ್ಬಳ್ಳಿ-ಬೆಂಗಳೂರು ನಡುವೆ 2 ವಿಶೇಷ ರೈಲು ಸಂಚಾರ

ಹುಬ್ಬಳ್ಳಿ: ಪ್ರಯಾಣಿಕರ ದಟ್ಟಣೆಯ ಮಾರ್ಗವಾಗಿರುವ ನೈರುತ್ಯ ರೈಲ್ವೆಯ ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಎರಡು ಹೊಸ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಇದೇ ಮಾರ್ಚ್ 20 ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತು ಫೇಸ್‌ಬುಕ್‌ನಲ್ಲಿ ಮಾಹಿತಿ ಹಣಚಿಕೊಂಡಿರುವ ಅವರು, ಪ್ರಯಾಣಿಕರ ಬೇಡಿಕೆ ಹಿನ್ನಲೆಯಲ್ಲಿ ಕಾಯ್ದಿರಿಸುವ ವಿಶೇಷ ಸೇವೆಯ ಈ ರೈಲುಗಳು ಮಾರ್ಚ್ 20 ರಿಂದ ಸಂಚಾರ ಆರಂಭಿಸಲಿವೆ. ರಾತ್ರಿ 11:15ಕ್ಕೆ ಹುಬ್ಬಳ್ಳಿಯಿಂದ ( ರೈಲು ಸಂಖ್ಯೆ : 07339) ಹೊರಡುವ ರೈಲು ಬೆಳಗ್ಗೆ 6:50ಕ್ಕೆ ಬೆಂಗಳೂರು ತಲುಪಲಿದೆ ಹಾಗೂ ಬೆಂಗಳೂರಿನಿಂದ (ರೈಲು ಸಂ : 07340) ರಾತ್ರಿ 11:15ಕ್ಕೆ ಹೊರಡುವ ರೈಲು ಬೆಳಗ್ಗೆ 7:30ಕ್ಕೆ ಹುಬ್ಬಳ್ಳಿ ತಲುಪಲಿದೆ’ ಎಂದು ತಿಳಿಸಿದ್ದಾರೆ.
ಮತ್ತೊಂದು ರೈಲು ಬೆಳಿಗ್ಗೆ 7:45ಕ್ಕೆ ಬೆಂಗಳೂರಿನಿಂದ (ರೈಲು ಸಂಖ್ಯೆ : 07353) ಹೊರಟು ಮಧ್ಯಾಹ್ನ 2:30ಕ್ಕೆ ಹುಬ್ಬಳ್ಳಿ ತಲುಪಲಿದೆ ಹಾಗೂ ಹುಬ್ಬಳ್ಳಿಯಿಂದ (ರೈಲು ಸಂ : 07354) ಮಧ್ಯಾಹ್ನ 3:15ಕ್ಕೆ ಹೊರಡುವ ರೈಲು ರಾತ್ರಿ 11:10ಕ್ಕೆ ಬೆಂಗಳೂರು ತಲುಪಲಿದೆ ಎಂದು ತಿಳಿಸಿದ್ದಾರೆ.
ಈ ಎರಡು ರೈಲುಗಳು ಹಾವೇರಿ, ದಾವಣಗೆರೆ, ಬೀರೂರು, ತುಮಕೂರು ಹಾಗೂ ಯಶವಂತಪುರ ಮಾರ್ಗವಾಗಿ ಸಂಚರಿಸಲಿವೆ ಎಂದು ಮಾಹಿತಿ ನೀಡಿದ್ದಾರೆ. ಈ ಕುರಿತು ರೈಲ್ವೆ ಇಲಾಖೆ ಸಹ ಮಾಹಿತಿ ಹಂಚಿಕೊಂಡಿದೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement