ಬಿಎಂಟಿಸಿ ಬಸ್ಸಿನಲ್ಲಿ ಬೆಂಕಿ ಅನಾಹುತ: ಮಲಗಿದ್ದಲ್ಲೇ ಕಂಡಕ್ಟರ್ ಸಜೀವ ದಹನ

ಬೆಂಗಳೂರು: ಬೆಂಗಳೂರಿನಲ್ಲಿ ಶುಕ್ರವಾರ ಮುಂಜಾನೆ ಬಿಎಂಟಿಸಿ ಬಸ್‌ಗೆ ಬೆಂಕಿ ಹೊತ್ತಿಕೊಂಡ ನಂತರ ಬಸ್‌ನೊಳಗೆ ಮಲಗಿದ್ದ ಕಂಡಕ್ಟರ್ ಸುಟ್ಟು ಕರಕಲಾದ ಘಟನೆ ನಡೆದ ವರದಿಯಾಗಿದೆ.
ಮಾಧ್ಯಮಗಳ ವರದಿ ಪ್ರಕಾರ ಬೆಂಗಳೂರಿನ ಲಿಂಗಧೀರನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಾತ್ರಿ ರೂಟ್ ಮುಗಿಸಿ ಲಿಂಗಧೀರನಹಳ್ಳಿ ನಿಲ್ದಾಣ ದಲ್ಲಿ ಬಸ್‌ ಹಾಲ್ಟ್‌ ಮಾಡಿತ್ತು. ಕಂಡಕ್ಟರ್‌ ಬಸ್ಸಿನ ಸೀಟ್‍ನಲ್ಲಿಯೇ ಮಲಗುವುದಾಗಿ ಹೇಳಿ ಬಸ್‌ನೊಳಗೆ ಮಲಗಿದ್ದರು. ಚಾಲಕ ಪಕ್ಕದಲ್ಲಿದ್ದ ಬಸ್ ನಿಲ್ದಾಣದಲ್ಲಿ ಮಲಗಿದ್ದ ಎಂದು ಹೇಳಲಾಗಿದೆ. ಹಾಗೂ ಬಸ್‌ಗೆ ಬೆಂಕಿ ಹೊತ್ತಿಕೊಂಡ ವೇಳೆ ಚಾಲಕ ಶೌಚಕ್ಕೆಂದು ಹೋಗಿದ್ದ. ಈ ವೇಳೆ ಬೆಂಕಿ ಅನಾಹುತ ಸಂಭವಿಸಿದೆ ಎಂದು ಹೇಳಲಾಗಿದೆ.

ಮೃತ ಬಸ್ ಕಂಡಕ್ಟರ್ ಅವರನ್ನು 45 ವರ್ಷದ ಮುತ್ತಯ್ಯ ಸ್ವಾಮಿ ಎಂದು ಗುರುತಿಸಲಾಗಿದೆ. ಅವರ ದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸಮೀಪದ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದ ಪೊಲೀಸರು ಬೆಂಕಿಯನ್ನು ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ತುರ್ತು ಸೇವೆಗೆ ಕರೆ ಮಾಡಿದ್ದಾರೆ. ಬೆಂಕಿ ನಂದಿಸಲು ಅಧಿಕಾರಿಗಳು ಹರಸಾಹಸ ಪಟ್ಟರೂ ಕಂಡಕ್ಟರ್‌ನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ.
ಬಿಎಂಟಿಸಿ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ನಂತರ ಹೇಳಿಕೆ ನೀಡಿದ್ದು, “ಈ ಘಟನೆ ಶುಕ್ರವಾರ ಮುಂಜಾನೆ 4:45ರ ಸುಮಾರಿಗೆ ನಡೆದಿದೆ. ಘಟನೆ ನಡೆದಾಗ ಚಾಲಕ ಪ್ರಕಾಶ್ ಮತ್ತು ನಿರ್ವಾಹಕ ಮುತ್ತಯ್ಯ ಲಿಂಗಧೀರನಹಳ್ಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಮಲಗಿದ್ದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಸಿನಿಮಾ ಚಿತ್ರೀಕರಣದ ವೇಳೆ ನಟ ಶ್ರೀಮುರಳಿಗೆ ಗಾಯ : ಆಸ್ಪತ್ರೆಗೆ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement