ಹಿಂದೂ ದೇವಾಲಯಗಳ ಮೇಲಿನ ದಾಳಿಯನ್ನು ಆಸ್ಟ್ರೇಲಿಯಾದಲ್ಲಿ ಸಹಿಸುವುದಿಲ್ಲ : ಮೋದಿಗೆ ಆಸ್ಟ್ರೇಲಿಯಾದ ಪ್ರಧಾನಿ ಅಲ್ಬನೀಸ್ ಭರವಸೆ

ನವದೆಹಲಿ: ಧಾರ್ಮಿಕ ಸ್ಥಳಗಳ ಮೇಲಿನ ದಾಳಿಯನ್ನು ಆಸ್ಟ್ರೇಲಿಯಾ ಸಹಿಸುವುದಿಲ್ಲ ಮತ್ತು ಅಂತಹ ಚಟುವಟಿಕೆಗಳಿಗೆ ಕಾರಣವಾದ ಯಾರಾದರೂ “ಕಾನೂನಿನ ಕ್ರಮ” ಎದುರಿಸಬೇಕಾಗುತ್ತದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭರವಸೆ ನೀಡಿದ್ದಾರೆ.
ಆಸ್ಟ್ರೇಲಿಯದಲ್ಲಿನ ಹಿಂದೂ ದೇವಾಲಯಗಳ ಮೇಲಿನ ಇತ್ತೀಚಿನ ದಾಳಿಗಳ ಬಗ್ಗೆ ಪ್ರಧಾನಿ ಮೋದಿ ಅವರು ಅಲ್ಬನೀಸ್‌ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ ಒಂದು ದಿನದ ನಂತರ ಅವರ ಕಾಮೆಂಟ್‌ಗಳು ಬಂದಿವೆ.
ಆಸ್ಟ್ರೇಲಿಯಾವು ಜನರ ನಂಬಿಕೆಯನ್ನು ಗೌರವಿಸುವ ದೇಶವಾಗಿದ್ದು, ಹಿಂದೂ ದೇವಾಲಯಗಳು, ಮಸೀದಿಗಳು, ಸಿನಗಾಗ್‌ಗಳು ಅಥವಾ ಚರ್ಚ್‌ಗಳು ಧಾರ್ಮಿಕ ಕಟ್ಟಡಗಳ ಮೇಲೆ ಯಾವುದೇ ದಾಳಿಯನ್ನು ಸಹಿಸುವುದಿಲ್ಲ ಎಂದು ಅಲ್ಬನೀಸ್ ಮೋದಿಗೆ ಭರವಸೆ ನೀಡಿದ್ದಾರೆ.
ಧಾರ್ಮಿಕ ಕಟ್ಟಡಗಳ ಮೇಲಿನ ದಾಳಿಯಂತಹ ಚಟುವಟಿಕೆಗಳಿಗೆ ಹೊಣೆಗಾರರಾಗಿರುವ ಯಾರಾದರೂ ಕಾನೂನಿನ ಕ್ರಮ ಎದುರಿಸುತ್ತಾರೆ ಎಂದು ದೇಶದ ಭದ್ರತಾ ಏಜೆನ್ಸಿಗಳು ಖಚಿತಪಡಿಸುತ್ತವೆ ಎಂದು ಭಾರತಕ್ಕೆ ಭೇಟಿ ನೀಡುವ ಮೊದಲು, ಅಲ್ಬನೀಸ್ ಅವರು ಆಸ್ಟ್ರೇಲಿಯನ್ ಪತ್ರಕರ್ತರ ಗುಂಪಿಗೆ ತಿಳಿಸಿದ್ದರು.
ಆಸ್ಟ್ರೇಲಿಯಾವು ಜನರ ನಂಬಿಕೆಯನ್ನು ಗೌರವಿಸುವ ದೇಶವಾಗಿದೆ ಎಂದು ನಾನು ಅವರಿಗೆ (ಪ್ರಧಾನಿ ಮೋದಿ) ಭರವಸೆ ನೀಡಿದ್ದೇನೆ. ನಾವು ಹಿಂದೂ ದೇವಾಲಯಗಳು, ಮಸೀದಿಗಳು, ಅಥವಾ ಚರ್ಚುಗಳು ಆಗಿರಬಹುದು.. ಯಾವುದೇ ಧಾರ್ಮಿಕ ಕಟ್ಟಡಗಳ ಮೇಲೆ ದಾಳಿಗಳನ್ನು ನಾವು ಸಹಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಶುಕ್ರವಾರ ನಡೆದ ಭಾರತ-ಆಸ್ಟ್ರೇಲಿಯಾ ಮೊದಲ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಅಲ್ಬನೀಸ್ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ದೇವಾಲಯಗಳ ಮೇಲಿನ ಇತ್ತೀಚಿನ ದಾಳಿಗಳ ವಿಷಯವನ್ನು ಪ್ರಸ್ತಾಪಿಸಿದ್ದರು.
ಕಳೆದ ಕೆಲವು ವಾರಗಳಿಂದ ಆಸ್ಟ್ರೇಲಿಯದಲ್ಲಿ ದೇವಾಲಯಗಳ ಮೇಲಿನ ದಾಳಿಯ ವರದಿಗಳನ್ನು ಮೋದಿ ಅವರು “ವಿಷಾದದ ವಿಷಯ” ಎಂದು ಬಣ್ಣಿಸಿದರು.

ಪ್ರಮುಖ ಸುದ್ದಿ :-   ಪ್ರಮುಖ ಮಾವೋವಾದಿ ನಾಯಕ ಸೇರಿ 29 ಮಂದಿ ಮಾವೋವಾದಿಗಳನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದ ಭದ್ರತಾ ಪಡೆಗಳು

ಭಾರತೀಯ ಸಮುದಾಯವು ಆಸ್ಟ್ರೇಲಿಯಾದ ಸಮಾಜ ಮತ್ತು ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿದೆ. ಕಳೆದ ಕೆಲವು ವಾರಗಳಿಂದ ಆಸ್ಟ್ರೇಲಿಯಾದಲ್ಲಿ ದೇವಾಲಯಗಳ ಮೇಲಿನ ದಾಳಿಗಳು ನಿಯಮಿತವಾಗಿ ವರದಿಯಾಗುತ್ತಿರುವುದು ವಿಷಾದದ ಸಂಗತಿ” ಎಂದು ಮೋದಿ ಹೇಳಿದ್ದರು.
ಇಂತಹ ಸುದ್ದಿಗಳು ಭಾರತದಲ್ಲಿನ ಜನರನ್ನು ಚಿಂತೆಗೀಡುಮಾಡುವುದು ಮತ್ತು ನಮ್ಮ ಮನಸ್ಸನ್ನು ಕದಡುವುದು ಸಹಜ. ನಾನು ಈ ಭಾವನೆಗಳನ್ನು ಮತ್ತು ಕಳವಳಗಳನ್ನು ಪ್ರಧಾನಿ ಅಲ್ಬನೀಸ್ ಅವರೊಂದಿಗೆ ಹಂಚಿಕೊಂಡಿದ್ದೇನೆ ಮತ್ತು ಭಾರತೀಯ ಸಮುದಾಯದ ಸುರಕ್ಷತೆಯು ಅವರಿಗೆ ವಿಶೇಷ ಆದ್ಯತೆಯಾಗಿದೆ ಎಂದು ಅವರು ನನಗೆ ಭರವಸೆ ನೀಡಿದ್ದಾರೆ. . ನಾವು ಈ ವಿಷಯದ ಬಗ್ಗೆ ನಿಯಮಿತವಾಗಿ ಸಂಪರ್ಕದಲ್ಲಿರುತ್ತೇವೆ ಮತ್ತು ಸಾಧ್ಯವಾದಷ್ಟು ಸಹಕರಿಸುತ್ತೇವೆ ಎಂದು ಮೋದಿ ಹೇಳಿದರು.
ಆಸ್ಟ್ರೇಲಿಯಾ ಮತ್ತು ಭಾರತವು ಉತ್ತಮ ಸ್ನೇಹವನ್ನು ಹೊಂದಿದೆ. ನಾವು ಪೂರಕ ಆರ್ಥಿಕತೆಗಳನ್ನು ಹೊಂದಿದ್ದೇವೆ. ಭವಿಷ್ಯದಲ್ಲಿ ನಾವು ಆ ಆರ್ಥಿಕತೆಗಳನ್ನು ಒಟ್ಟಿಗೆ ಇನ್ನಷ್ಟು ಬೆಳೆಸಬಹುದು” ಎಂದು ಅವರು ಹೇಳಿದರು. “ನನ್ನೊಂದಿಗೆ 25 ಕ್ಕೂ ಹೆಚ್ಚು ಹಿರಿಯ ಉದ್ಯಮಿಗಳು ಮತ್ತು ನಮ್ಮ ಶುದ್ಧ ಇಂಧನ ಉದ್ಯಮಗಳ 34 ಲೀಡರ್ಸ್‌ ಬಂದಿರುವುದು ಅಲ್ಲಿನ ಅವಕಾಶಗಳನ್ನು ತೋರಿಸುತ್ತದೆ. ಭಾರತವು ಶುದ್ಧ ಇಂಧನಕ್ಕೆ ಪರಿವರ್ತನೆಯಾಗುತ್ತಿದ್ದಂತೆ ಆಸ್ಟ್ರೇಲಿಯಾದೊಂದಿಗೆ ಕೆಲಸ ಮಾಡಬಹುದು ಎಂದು ಅವರು ಹೇಳಿದರು.
ನಿರ್ಣಾಯಕ ಖನಿಜಗಳ ಉದ್ಯಮದಲ್ಲಿ ಸಹಕಾರವು ಅತ್ಯಗತ್ಯವಾಗಿರುತ್ತದೆ ಎಂದು ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಹೇಳಿದರು.

ಪ್ರಮುಖ ಸುದ್ದಿ :-   ನೀವು ಅಮಾಯಕರಲ್ಲ : ಬಾಬಾ ರಾಮದೇವ, ಆಚಾರ್ಯ ಬಾಲಕೃಷ್ಣಗೆ ಸುಪ್ರೀಂ ಕೋರ್ಟ್‌ ಮತ್ತೆ ತರಾಟೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement