ಉರಿಗೌಡ, ನಂಜೇಗೌಡ ಸಿನೆಮಾ ನಿರ್ಮಾಣ ಕೈಬಿಟ್ಟ ಸಚಿವ ಮುನಿರತ್ನ

ಮಂಡ್ಯ : ಆದಿಚುಂಚನಗಿರಿ ನಿರ್ಮಲಾನಂದನಾಥ ಶ್ರೀಗಳನ್ನ ಭೇಟಿಯಾಗಿ ಚರ್ಚಿಸಿದ ಬಳಿಕ ಉರಿಗೌಡ ನಂಜೇಗೌಡ ಕುರಿತು ಸಿನಿಮಾ ನಿರ್ಮಾಣ ಮಾಡುವುದಿಲ್ಲ ಎಂದು ತೋಟಗಾರಿಕೆ ಸಚಿವ ಮುನಿರತ್ನ ಹೇಳಿದ್ದಾರೆ.
ಉರಿಗೌಡ ನಂಜೇಗೌಡ ಕುರಿತು ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದ ಸಚಿವ ಮುನಿರತ್ನ ಶ್ರೀಗಳ ಭೇಟಿ ಬಳಿಕ ಸಿನಿಮಾ ಮಾಡುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಈ ಕುರಿತು ಮಾತನಾಡಿರುವ ಸಚಿವ ಮುನಿರತ್ನ, ಶ್ರೀಗಳ ಸಲಹೆ ಮೇರೆಗೆ ಚಿತ್ರ ನಿರ್ಮಾಣ ಕೈಬಿಟ್ಟಿರುವುದಾಗಿ ತಿಳಿಸಿದರು. ಉರಿಗೌಡ ನಂಜೇಗೌಡ ಕುರಿತು ಸಿನಿಮಾ ನಿರ್ಮಾಣ ಮಾಡುವುದಿಲ್ಲ. ಮೇ 14ರಂದು ಸಿನಿಮಾ ನಿರ್ಮಾಣ ಆರಂಭಿಸಬೇಕೆಂದುಕೊಂಡಿದ್ದೆ. ದೊಡ್ಡ ನಂಜೇಗೌಡ ಬಗ್ಗೆ ಕೆಲ ದಾಖಲೆಗಳಿವೆ. ಉರಿಗೌಡ ಬಗ್ಗೆ ಒಂದಷ್ಟು ದಾಖಲೆಗಳಿಲ್ಲ ಎಂದರು.
ರಾಜ್ಯ ರಾಜಕೀಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಉರಿಗೌಡ, ನಂಜೇಗೌಡ ಅವರನ್ನು ಆಧರಿಸಿದ ಸಿನಿಮಾ ಮಾಡುವುದಾಗಿ ನಿರ್ಮಾಪಕ ಹಾಗೂ ಸಚಿವ ಮುನಿರತ್ನ ಘೋಷಣೆ ಮಾಡಿದ್ದರು ಮತ್ತು ಟೈಟಲ್ ರಿಜಿಸ್ಟರ್​ಗೆ ಅರ್ಜಿ ಹಾಕಿದ್ದರು. ಸಿನಿಮಾದ ಮುಹೂರ್ತ ದಿನಾಂಕವನ್ನೂ ಪ್ರಕಟಿಸಿದ್ದರು. ಆದರೆ ಈ ಬಗ್ಗೆ ಆದಿಚುಂಚನಗಿರಿ ಮಠದ ನಿರ್ಮಾಲಾನಂದ ಶ್ರೀಗಳಿಂದ ಕರೆಬಂದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ಶ್ರೀಗಳನ್ನ ಭೇಟಿ ಮಾಡಿ ಚರ್ಚೆ ನಡೆಸಿದ ಬಳಿಕ ಸಚಿವ ಮುನಿರತ್ನ ಈಗ ಉರಿಗೌಡ, ನಂಜೇಗೌಡ ಚಲನಚಿತ್ರ ನಿರ್ಮಾಣವನ್ನು ಕೈಬಿಟ್ಟಿದ್ದಾರೆ.
ನಿರ್ಮಲಾನಂದನಾಥ ಶ್ರೀಗಳ ಜೊತೆ ಮಾತನಾಡಿದ್ದೇನೆ. ಅವರು ಯಾರ ಮನಸ್ಸನ್ನೂ ನೋಯಿಸುವ ಕೆಲಸ ಮಾಡಬೇಡಿ ಹಾಗೂ ಪದೇ ಪದೇ ಉರಿಗೌಡ ನಂಜೇಗೌಡ ಬಗ್ಗೆ ಮಾತಾಡಬೇ ಎಂದು ಸಲಹೆ ನೀಡಿದ ನಂತರ ಈ ನಿರ್ಧಾರ ಬಂದಿದೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement