ಹಣ್ಣು- ತರಕಾರಿ ತಾಜಾ ಇಡಲು ರಾಸಾಯನಿಕ ಬಳಕೆ: ರಾಸಾಯನಿಕ ನೀರಿನಲ್ಲಿ ಅದ್ದಿದ ನಂತರ ಬಾಡಿದ ಕೊತ್ತಂಬರಿ ಸೊಪ್ಪು ಹೇಗೆ ತಾಜಾ ಆಗುತ್ತದೆ ನೋಡಿ | ವೀಡಿಯೊ

ಹಿಟ್ಟಿನಿಂದ ಧಾನ್ಯಗಳವರೆಗೆ ಮತ್ತು ಹಣ್ಣುಗಳಿಂದ ತರಕಾರಿಗಳವರೆಗೆ, ಹಣ್ಣುಗಳು ಮತ್ತು ತರಕಾರಿಗಳು ತಾಜಾ ಕಾಣುವಂತೆ ಮಾಡಲು ಅವುಗಳನ್ನು ರಾಸಾಯನಿಕಗಳೊಂದಿಗೆ ಬೆರೆಸಲಾಗುತ್ತದೆ ಅಥವಾ ರಾಸಾಯನಿಕ ಬಳಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಮೂಲ ಮತ್ತು ಕಲಬೆರಕೆ ಉತ್ಪನ್ನದ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟ, ಯಾಕೆಂದರೆ ಕಲಬೆರಕೆ ಮಾಡುವವರು ಯಾವುದೇ ಸುಳಿವು ಸಹ ಸಿಗದಂತೆ ಮಾಡುತ್ತಾರೆ. ಈಗ ಟ್ವಿಟ್ಟರ್ ಮತ್ತು ಲಿಂಕ್ಡ್‌ಇನ್‌ನಲ್ಲಿ ಅಂತಹ ಒಂದು ವೀಡಿಯೊ ವೈರಲ್ ಆಗಿದೆ, ಇದು ಬಾಡಿದ ಕೊತ್ತಂಬರಿ ಸೊಪ್ಪನ್ನು ರಾಸಾಯನಿಕಗಳೊಂದಿಗೆ ಬೆರೆಸಿ ಈಗ ತಾನೇ ಕಿತ್ತು ತಂದ ತಾಜಾ ಕೊತ್ತುಬರಿಯಿಂತೆ ಕಾಣುವಂತೆ ಮಾಡುವುದು ಹೇಗೆ ಎಂಬುದನ್ನು ವ್ಯಕ್ತಿಯೊಬ್ಬರು ತೋರಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಅಮಿತ್ ಥಡಾನಿ ಅವರು ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಮತ್ತು ಅವರು ದೇವರಾಜನ್ ರಾಜಗೋಪಾಲನ್ ಅವರ ಲಿಂಕ್ಡ್‌ಇನ್ ಪೋಸ್ಟ್‌ನ ಮೂಲವನ್ನು ಉಲ್ಲೇಖಿಸಿದ್ದಾರೆ.“ಇದು ತರಕಾರಿಗಳು ಮತ್ತು ಹಣ್ಣುಗಳನ್ನು ರಾಸಾಯನಿಕಗಳಲ್ಲಿ ತೊಳೆಯುವ ಮೂಲಕ ಹೇಗೆ ತಾಜಾಗೊಳಿಸಲಾಗುತ್ತದೆ ಎಂಬುದರ  ಕುರಿತ 105-ಸೆಕೆಂಡ್  ವೀಡಿಯೊವಾಗಿದೆ ಎಂದು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಕೇವಲ ಒಂದು ನಿಮಿಷದಲ್ಲಿ, ಹಳೆಯ ಬಾಡಿದ ಅಥವಾ ಒಣಗಿದ ತರಕಾರಿಗಳು ತಾಜಾ ಕಾಣುತ್ತವೆ. ಇದು ಇಂದಿನ ದಿನಗಳಲ್ಲಿ ಗಂಭೀರ ಕಾಯಿಲೆಗಳ ಹೆಚ್ಚಳಕ್ಕೆ ಕಾರಣವಾಗಿದೆ. ಹಳೆಯ ಹಾಗೂ ಬಾಡಿದ ಕೊತ್ತಂಬರಿ ಸೊಪ್ಪನ್ನು ರಾಸಾಯನಿಕಗಳಲ್ಲಿ ಬೆರೆಸಿದ ನಂತರ, ಊದಿಕೊಳ್ಳಲು ಒಂದೆರಡು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಮತ್ತು ನಂತರ ಅವು ತಾಜಾ ಆಗಿ ಕಾಣಲು ಪ್ರಾರಂಭಿಸುತ್ತವೆ ಎಂಬುದನ್ನು ವೀಡಿಯೊ ತೋರಿಸುತ್ತದೆ.
ಈ ವಿಡಿಯೋ ಟ್ವಿಟರ್‌ನಲ್ಲಿ 4.68 ಲಕ್ಷ ವೀಕ್ಷಣೆಗಳನ್ನು ಮತ್ತು ಲಿಂಕ್ಡ್‌ಇನ್‌ನಲ್ಲಿ 2.6 ಸಾವಿರ ಪ್ರತಿಕ್ರಿಯೆಗಳನ್ನು ಸಂಗ್ರಹಿಸಿದೆ. ಟ್ವಿಟರ್‌ನಲ್ಲಿನ ಕಾಮೆಂಟ್ ವಿಭಾಗದಲ್ಲಿ ಅನೇಕರು ಕಾಮೆಂಟ್‌ ಮಾಡಿದ್ದಾರೆ.

ಆದರೆ ಬಳಕೆದಾರರೊಬ್ಬರು, “ಇದರಲ್ಲಿ ತಪ್ಪೇನಿಲ್ಲ! ಇದು ಸಿಲಿಕಾನ್ ಆಧಾರಿತ ಸಂಯುಕ್ತವಾಗಿದ್ದು, ಕೀಟನಾಶಕಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ಸಂಯೋಜಕವಾಗಿ ಬಳಸಲಾಗುತ್ತದೆ. ಇದು ನಿರುಪದ್ರವಕಾರಿಯಾಗಿದೆ.. ಇದನ್ನು ಸಾವಯವದಲ್ಲಿಯೂ ಬಳಸಲು ಅನುಮೋದಿಸಲಾಗಿದೆ. ಆದರೆ, ಉತ್ಪನ್ನಗಳನ್ನು ತಾಜಾ ಕಾಣುವಂತೆ ಮಾಡಲು ಬಳಸಲಾಗುವುದಿಲ್ಲ ಎಂದು ಹೇಳಿದ್ದಾರೆ.
ತರಕಾರಿ ಕಲಬೆರಕೆಯ ಸಂಭಾವ್ಯತೆಯ ಬಗ್ಗೆ ತಿಳಿದಿರುವುದು ಮತ್ತು ಸೇವಿಸುವ ತರಕಾರಿಗಳು ಸುರಕ್ಷಿತ ಮತ್ತು ಹಾನಿಕಾರಕ ರಾಸಾಯನಿಕಗಳು ಅಥವಾ ಕಲ್ಮಶಗಳಿಂದ ಮುಕ್ತವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ.   ವಿಶ್ವಾಸಾರ್ಹ ಮೂಲಗಳಿಂದ ತರಕಾರಿಗಳನ್ನು ಖರೀದಿಸುವುದು, ಅವುಗಳನ್ನು ಸೇವಿಸುವ ಮೊದಲು ಅವುಗಳನ್ನು ಚೆನ್ನಾಗಿ ತೊಳೆಯುವುದು  ಸಹ ಮುಖ್ಯವಾಗುತ್ತದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement