ದೆಹಲಿಯಲ್ಲಿ ಮೋದಿ ವಿರೋಧಿ ಪೋಸ್ಟರ್‌ಗಳು : 100 ಎಫ್‌ಐಆರ್‌ಗಳು, 6 ಬಂಧನಗಳು-ಇದು ‘ಸರ್ವಾಧಿಕಾರ’ ಎಂದ ಎಎಪಿ

ನವದೆಹಲಿ: ಪ್ರಧಾನಿ ʼಮೋದಿ ಹಠಾವೋ ದೇಶ್ ಬಚಾವೋ’ ಎಂಬ ಸಾವಿರಾರು ಪೋಸ್ಟರ್‌ಗಳು ರಾಷ್ಟ್ರ ರಾಜಧಾನಿಯಲ್ಲಿ ಕಂಡುಬಂದ ನಂತರ ದೆಹಲಿ ಪೊಲೀಸರು 100 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ. ಎರಡು ಪ್ರಿಂಟಿಂಗ್ ಪ್ರೆಸ್‌ಗಳಿಗೆ ಇಂತಹ ಒಂದು ಲಕ್ಷ ಪೋಸ್ಟರ್‌ಗಳಿಗೆ ಆರ್ಡರ್ ನೀಡಲಾಗಿದೆ ಎಂದು ವರದಿಯಾಗಿದೆ.
ಮಂಗಳವಾರ, ದೆಹಲಿ ಪೊಲೀಸರು ವ್ಯಾನ್ ಅನ್ನು ತಡೆದರು ಮತ್ತು 10,000 ಕ್ಕೂ ಹೆಚ್ಚು ಪೋಸ್ಟರ್‌ಗಳನ್ನು ವಶಪಡಿಸಿಕೊಂಡರು. ಆದರೆ ಈ ಯಾವುದೇ ಪೋಸ್ಟರ್‌ಗಳಲ್ಲಿ ಮುದ್ರಣಾಲಯದ ಹೆಸರಿಲ್ಲ. ರಾಷ್ಟ್ರ ರಾಜಧಾನಿಯ ಕೆಲವು ಭಾಗಗಳಲ್ಲಿ ಗೋಡೆಗಳ ಮೇಲೆ ಅಂಟಿಸಲಾಗಿದ್ದ ‘ಮೋದಿ ಹಠಾವೋ ದೇಶ್ ಬಚಾವೋ’ ಪೋಸ್ಟರ್‌ಗಳನ್ನು ತೆಗೆದುಹಾಕಲಾಗಿದೆ.
“ದೆಹಲಿ ಪೊಲೀಸರು ಈ ಸಂಬಂಧ 100 ಎಫ್‌ಐಆರ್‌ಗಳನ್ನು ದಾಖಲಿಸಿದ್ದು, ನಗರದಾದ್ಯಂತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಆಕ್ಷೇಪಾರ್ಹ ಪೋಸ್ಟರ್‌ಗಳನ್ನು ಅಂಟಿಸಿದ್ದಕ್ಕಾಗಿ 6 ಜನರನ್ನು ಬಂಧಿಸಲಾಗಿದೆ.

ಪೋಸ್ಟರ್‌ಗಳಲ್ಲಿ ಪ್ರಿಂಟಿಂಗ್ ಪ್ರೆಸ್‌ನ ವಿವರಗಳಿಲ್ಲ. ಪ್ರಿಂಟಿಂಗ್ ಪ್ರೆಸ್ ಆಕ್ಟ್ ಮತ್ತು ಆಸ್ತಿ ವಿರೂಪಗೊಳಿಸುವಿಕೆಯ ಕಾಯ್ದೆ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಿಶೇಷ ಸಿಪಿ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ.
ಆಮ್ ಆದ್ಮಿ ಪಕ್ಷದ (ಎಎಪಿ) ಕಚೇರಿಯಿಂದ ಹೊರಬಂದ ತಕ್ಷಣ ವ್ಯಾನ್ ಅನ್ನು ತಡೆಹಿಡಿಯಲಾಯಿತು ಮತ್ತು ಕೆಲವರನ್ನು ಬಂಧಿಸಲಾಯಿತು ಎಂದು ವಿಶೇಷ ಸಿಪಿ ದೀಪೇಂದ್ರ ಪಾಠಕ್ ತಿಳಿಸಿದ್ದಾರೆ.
ಮೋದಿ ವಿರೋಧಿ ಪೋಸ್ಟರ್‌ಗಳ ದಮನಕ್ಕೆ ಪ್ರತಿಕ್ರಿಯಿಸಿದ ಎಎಪಿ, ಕೇಂದ್ರ ಸರ್ಕಾರದ್ದು “ಸರ್ವಾಧಿಕಾರ” ಎಂದು ಆರೋಪಿಸಿದೆ ಮತ್ತು ಪೋಸ್ಟರ್‌ಗಳಲ್ಲಿ ಆಕ್ಷೇಪಾರ್ಹತೆ ಏನಿದೆ ಎಂದು ಕೇಳಿದೆ.ಮೋದಿ ಸರ್ಕಾರದ ಸರ್ವಾಧಿಕಾರವು ಉತ್ತುಂಗದಲ್ಲಿದೆ. ಈ ಪೋಸ್ಟರ್‌ನಲ್ಲಿ ಮೋದಿಜಿ ಆಕ್ಷೇಪಾರ್ಹವಾದುದು ಏನಿದೆ? ಪ್ರಧಾನಿ ಮೋದಿಯವರೇ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಒಂದು ಪೋಸ್ಟರ್‌ಗೆ ತುಂಬಾ ಹೆದರುತ್ತಿರುವುದೇಕೆ ಎಂದು ಎಎಪಿ ಟ್ವೀಟ್‌ನಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   ಜಾರ್ಖಂಡ್ ಸಚಿವರ ಆಪ್ತ ಕಾರ್ಯದರ್ಶಿ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ, ಹಣದ ರಾಶಿ ನೋಡಿ ಇ.ಡಿ.ಯೇ ದಂಗು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement