ಈ ಮೆಸೇಜ್‌ ನಿಮಗೂ ಬರಬಹುದು ಎಚ್ಚರ : ಮೊಬೈಲಿಗೆ ಬಂದ ವಿದ್ಯುತ್ ಬಿಲ್ ಸಂದೇಶಕ್ಕೆ ಉತ್ತರಿಸಿ ಲಕ್ಷಾಂತರ ರೂ.ಕಳೆದುಕೊಂಡ ಮಹಿಳೆ

ಕಳೆದ ಕೆಲವು ವಾರಗಳಲ್ಲಿ ಸೈಬರ್ ವಂಚನೆ ಪ್ರಕರಣಗಳು ಗಣನೀಯವಾಗಿ ಹೆಚ್ಚಿವೆ. ದೇಶಾದ್ಯಂತ ಅನೇಕರು ಆನ್‌ಲೈನ್ ವಂಚಕರಿಂದ ಮೊಬೈಲ್ ಫೋನ್‌ಗಳ ಮೂಲಕ ಸ್ವೀಕರಿಸಿದ ಎಸ್‌ಎಂಎಸ್‌ (SMS) ಅಥವಾ ಸಂದೇಶಗಳಿಗೆ ಪ್ರತಿಕ್ರಿಯಿಸಿದ ನಂತರ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಈ ಆನ್‌ಲೈನ್‌ ವಂಚಕರು ಈಗ ವಿದ್ಯುತ್ ಬಿಲ್ ವಿಚಾರವಾಗಿ ಎಸ್‌ಎಂಎಸ್‌ ಕಳುಹಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ.ಗಳನ್ನು ವಂಚಿಸಿರುವುದು ಬೆಳಕಿಗೆ ಬಂದಿದೆ.
ಮುಂಬೈನ ಪ್ರಕರಣವೊಂದರಲ್ಲಿ, 65 ವರ್ಷದ ಮಹಿಳೆಯೊಬ್ಬರು ವಿದ್ಯುತ್ ಬಿಲ್‌ಗೆ ಸಂಬಂಧಿಸಿದ ನಕಲಿ ಎಸ್‌ಎಂಎಸ್‌ಗೆ ಪ್ರತಿಕ್ರಿಯಿಸಿದ ನಂತರ 7 ಲಕ್ಷ ರೂ.ಗಳಿಗೂ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ವರದಿಯ ಪ್ರಕಾರ, ಮುಂಬೈನ ಅಂಧೇರಿ ಪ್ರದೇಶದಲ್ಲಿ ವಾಸಿಸುವ ಮಹಿಳೆಯ ಪತಿಯ ಮೊಬೈಲ್‌ ಫೋನಿಗೆ ಹಣ ಪಾವತಿಸದ ವಿದ್ಯುತ್ ಬಿಲ್‌ಗೆ ಸಂಬಂಧಿಸಿದ ಎಸ್‌ಎಂಎಸ್ ಬಂದಿದೆ. ನಿಗದಿತ ಸಮಯದಲ್ಲಿ ಬಿಲ್ ಪಾವತಿಸದಿದ್ದರೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಎಸ್‌ಎಂಎಸ್‌ನಲ್ಲಿ ವಿದ್ಯುತ್ ಇಲಾಖೆಯ ಹೆಸರಿನಲ್ಲಿ ಎಚ್ಚರಿಕೆಯನ್ನೂ ನೀಡಲಾಗಿತ್ತು. ಎಸ್‌ಎಂಎಸ್ (SMS) ಜೊತೆಗೆ, ಪಾವತಿ ಮಾಡಲು ಸಂಪರ್ಕಿಸಬೇಕಾದ ಫೋನ್ ಸಂಖ್ಯೆಯನ್ನೂ ನೀಡಲಾಗಿತ್ತು.ಇದು ವಿದ್ಯುತ್ ಇಲಾಖೆಯ ಸೂಚನೆ ಎಂದು ಭಾವಿಸಿದ ಮಹಿಳೆ ನಮೂದಿಸಿದ ಸಂಖ್ಯೆಗೆ ಕರೆ ಮಾಡಿದ್ದಾರೆ. ಈ ಕರೆಯನ್ನು ಅಪರಿಚಿತ ವ್ಯಕ್ತಿಯೊಬ್ಬ ಸ್ವೀಕರಿಸಿ ತನ್ನನ್ನು ತಾನು ವಿದ್ಯುತ್ ಕಚೇರಿಯ ಉದ್ಯೋಗಿ ಎಂದು ಪರಿಚಯಿಸಿಕೊಂಡಿದ್ದಾನೆ. ವ್ಯಕ್ತಿಯು ಬಿಲ್ ಪಾವತಿಗೆ ಸಹಾಯ ಮಾಡುವುದಾಗಿ ಸಂತ್ರಸ್ತೆಗೆ ಭರವಸೆ ನೀಡಿದ್ದಾನೆ ಮತ್ತು “ಟೀಮ್‌ ವ್ಯೂವರ್ಸ್‌ ಕ್ವಿಕ್‌ ಸಪೋರ್ಟ್‌ (Team Viewer Quick Support) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಮಹಿಳೆಗೆ ಸೂಚಿಸಿದ್ದಾನೆ.

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

ಸೂಚನೆಗಳನ್ನು ಅನುಸರಿಸಿ, ಮಹಿಳೆ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಐಡಿ ಮತ್ತು ಪಾಸ್‌ಕೋಡ್ ಅನ್ನು ಹಂಚಿಕೊಂಡಿದ್ದಾಳೆ. ಅದು ಕರೆ ಮಾಡಿದವನಿಗೆ ಮೊಬೈಲ್ ಫೋನ್‌ಗೆ ಪ್ರವೇಶ ಮಾಡಲು ಅವಕಾಶ ನೀಡಿದೆ. ಸ್ವಲ್ಪ ಸಮಯದ ನಂತರ, ಮಹಿಳೆ 4,62,959 ರೂ., 1,39,900 ರೂ.ಮತ್ತು 89,000 ರೂ.ಗಳ ವ್ಯವಹಾರಗಳ ಬಗ್ಗೆ ಸತತ ಮೂರು ಎಸ್‌ಎಂಎಸ್ ಸ್ವೀಕರಿಸಿದ್ದಾಳೆ. ಆಕೆಯ ಖಾತೆಯಿಂದ ಒಟ್ಟು 6,91,859 ರೂ.ಗಳು ವಂಚಕರ ಖಾತೆಗೆ ಡೆಬಿಟ್ ಆಗಿದೆ.
ಇಷ್ಟೊಂದು ದೊಡ್ಡ ವಹಿವಾಟುಗಳನ್ನು ನೋಡಿದ ನಂತರ, ಅನುಮಾನಗೊಂಡ ಎಸ್‌ಬಿಐ ವಂಚನೆ ನಿರ್ವಹಣಾ ತಂಡವು ಾಷ್ಟಂದು ದೊಡ್ಡ ಮೊತ್ತದ ವಹಿವಾಟು ಆಕೆಯ ಕಡೆಯಿಂದ ಆಗಿದೆಯೇ ಎಂದು ಪರಿಶೀಲಿಸಲು ಮಹಿಳೆಯನ್ನು ಸಂಪರ್ಕಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ತಾನು ಸೈಬರ್ ವಂಚನೆಗೆ ಬಲಿಯಾಗಿರುವುದು ತಿಳಿದ ನಂತರ ಮಹಿಳೆ ತನ್ನ ಮಗಳೊಂದಿಗೆ ಅಂಧೇರಿ ಪೊಲೀಸ್ ಠಾಣೆಗೆ ತೆರಳಿ ವಂಚನೆಯ ಬಗ್ಗೆ ಎಫ್‌ಐಆರ್ ದಾಖಲಿಸಿದ್ದಾಳೆ. ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 420, 66 (ಸಿ), ಮತ್ತು 66 (ಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ದೇಶದ ಅನೇಕ ಭಾಗಗಳಲ್ಲಿ ಈ ಹಿಂದೆ ಇದೇ ರೀತಿಯ ಪ್ರಕರಣಗಳು ವರದಿಯಾಗಿವೆ. ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲಾಗುತ್ತದೆ ಅಥವಾ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಇವೇ ಮುಂತಾದ ಎಸ್‌ಎಂಎಸ್ ಸಂದೇಶಗಳನ್ನು ವಂಚಕರು ಕಳುಹಿಸುತ್ತಾರೆ. ನಂತರ ಅವರು ಫೋನ್ ಸಂಖ್ಯೆಗಳು ಅಥವಾ ಲಿಂಕ್‌ಗಳನ್ನು ಅದರ ಜೊತೆ ಹಂಚಿಕೊಳ್ಳುತ್ತಾರೆ. ಯಾರಾದರೂ ಅವರು ಕಳುಹಿಸಿದ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಅಥವಾ ಆ ನಂಬರಿಗೆ ಕರೆ ಮಾಡಿದರೆ, ವಂಚಕರು ಫೋನ್ ಸಂಖ್ಯೆಗೆ ಪ್ರವೇಶವನ್ನು ಪಡೆಯಲು ಅನುಕೂಲವಾಗುತ್ತದೆ. ಅಥವಾ ಅವರ ಬ್ಯಾಂಕ್ ಖಾತೆಯಿಂದ ನೇರವಾಗಿ ಹಣವನ್ನು ಕದಿಯಲು ಒಟಿಪಿ (OTP)ಯನ್ನು ಸಹ ವಂಚಕರು ಪಡೆದುಕೊಳ್ಳುತ್ತಾರೆ.
ಅಂತಹ ವಂಚನೆಗಳಿಂದ ಸುರಕ್ಷಿತವಾಗಿರಲು, ಅಪರಿಚಿತ ಸಂಖ್ಯೆಗಳಿಂದ ಸ್ವೀಕರಿಸಿದ ಸಂದೇಶಗಳಲ್ಲಿರುವ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು ಸೂಕ್ತವಾಗಿದೆ. ಯಾಕೆಂದರೆ ಬ್ಯಾಂಕ್‌ಗಳು ಅಥವಾ ಸರ್ಕಾರಿ ಸಂಸ್ಥೆಗಳು ಅಂತಹ ಎಸ್‌ಎಂಎಸ್‌ (SMS) ಸಂದೇಶಗಳನ್ನು ಕಳುಹಿಸುವುದಿಲ್ಲ ಅಥವಾ ಹಣೌನ್ನು ಪಾವತಿಸಲು ಯಾವುದೇ ಒಟಿಪಿ (OTP) ಅಥವಾ ಅಪ್ಲಿಕೇಶನ್ ಡೌನ್‌ಲೋಡ್‌ಗಳನ್ನು ಕೇಳುವುದಿಲ್ಲ ಎಂಬುದನ್ನು ಗಮನಿಸಬೇಕು. ಇಂತಹ ಸಂದೇಶಗಳು ಬಂದರೆ ಸಂದೇಶವನ್ನು ಅಳಿಸಿ, ಬಳಕೆದಾರರನ್ನು ನಿರ್ಬಂಧಿಸಿ ಮತ್ತು ಅದನ್ನು ಬ್ಯಾಂಕ್ ಅಥವಾ ಸೈಬರ್ ಸೆಲ್‌ಗೆ ವರದಿ ಮಾಡಿ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ 19 ವರ್ಷದ ಹುಡುಗಿಗೆ ಹೊಸ ಜೀವನ ನೀಡಿದ 'ಭಾರತದ ಹೃದಯ' ....!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement