ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆಯಲ್ಲಿ 2859 ಹುದ್ದೆಗಳಿಗೆ ಅರ್ಜಿ ಆಹ್ವಾನ : ಪದವಿ, ದ್ವಿತೀಯ ಪಿಯು ಪಾಸಾದವರು ಅರ್ಜಿ ಸಲ್ಲಿಸಬಹುದು

ಭವಿಷ್ಯ ನಿಧಿ ಸಂಸ್ಥೆಯು EPFO ​​ಅಧಿಕೃತ ಅಧಿಸೂಚನೆಯ ಮಾರ್ಚ್ 2023 ರ ಮೂಲಕ ಸಾಮಾಜಿಕ ಭದ್ರತಾ ಸಹಾಯಕ, ಸ್ಟೆನೋಗ್ರಾಫರ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.ಒಟ್ಟು 2859 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದೀಗ ಪಿಯುಸಿ ಹಾಗೂ ಡಿಗ್ರಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಏಪ್ರಿಲ್‌ 26 ರಂದು ಅಥವಾ ಅದಕ್ಕೂ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ನೇಮಕಾತಿ ಪ್ರಾಧಿಕಾರ : ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ
ಹುದ್ದೆಗಳ ಹೆಸರು: ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟಂಟ್, ಸ್ಟೆನೋಗ್ರಾಫರ್
ವಿದ್ಯಾರ್ಹತೆ : ಪದವಿ ಹಾಗೂ ದ್ವಿತೀಯ ಪಿಯುಸಿ ಪಾಸ್.
ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟಂಟ್ : 2674 ಹುದ್ದೆಗಳು
ಸ್ಟೆನೋಗ್ರಾಫರ್ : 185 ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ: 2859
ವಿದ್ಯಾರ್ಹತೆ :
ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟಂಟ್ : ಪದವಿ ಜತೆಗೆ ಟೈಪಿಂಗ್ ಸ್ಕಿಲ್‌, ಕಂಪ್ಯೂಟರ್ ಜ್ಞಾನ ತಿಳಿದಿರಬೇಕು
ಸ್ಟೆನೋಗ್ರಾಫರ್ : ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು.

ಇತರೆ ಅರ್ಹತೆ:
ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟಂಟ್ : ಕಂಪ್ಯೂಟರ್‌ ನಲ್ಲಿ ನಿಮಿಷಕ್ಕೆ 35 ಇಂಗ್ಲಿಷ್‌, 30 ಹಿಂದಿ ಪದಗಳನ್ನು ಟೈಪಿಸುವ ಸ್ಕಿಲ್ ಇರಬೇಕು.
ಸ್ಟೆನೋಗ್ರಾಫರ್ : ಸ್ಕಿಲ್‌ ಟೆಸ್ಟ್‌ ಪಾಸ್‌ ಮಾಡಬೇಕಿರುತ್ತದೆ. 80 ಪದಗಳನ್ನು ಒಂದು ನಿಮಿಷಕ್ಕೆ ಟೈಪಿಸುವ ಸ್ಕಿಲ್ ಇರಬೇಕು.
ಮಾಸಿಕ ಸಂಬಳ:
ಸೋಷಿಯಲ್ ಸೆಕ್ಯೂರಿಟಿ ಅಸಿಸ್ಟಂಟ್ : 29,200-92,300 ರೂ.
ಸ್ಟೆನೋಗ್ರಾಫರ್: .25,500-81,100 ರೂ.
ವಯೋಮಿತಿ:
ಕನಿಷ್ಠ 18 ವರ್ಷ , ಗರಿಷ್ಠ 27 ವರ್ಷದ ಮೀರಿರಬಾರದು. ಎಸ್‌ಸಿ/ಎಸ್‌ಟಿ, ಹಿಂದುಳಿದ ವರ್ಗಗಳು ಹಾಗೂ ಇತರರಿಗೆ ನಿಯಮಾನುಸಾರ ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಅರ್ಜಿ ಸಲ್ಲಿಕೆಗೆ ಮಹತ್ವದ ದಿನಾಂಕಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 27-03-2023
ಆನ್‌ಲೈನ್‌ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26-04-2023
ಆಯ್ಕೆ ಪ್ರಕ್ರಿಯೆ:ಲಿಖಿತ ಪರೀಕ್ಷೆ ಮತ್ತು ಸಂದರ್ಶನ

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಅಧಿಕೃತ ಅಧಿಸೂಚನೆ: ಇಲ್ಲಿ https://www.karnatakacareers.in/wp-content/uploads/2023/03/2859-Social-Security-Assistant-Stenographer-Posts-Advt-Details-EPFO.jpeg  ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸುವ ವಿಧಾನ-ಆನ್‌ಲೈನ್
ಇಪಿಎಫ್‌ಒ ಅಧಿಕೃತ ವೆಬ್‌ಸೈಟ್‌ https://www.epfindia.gov.in/site_en/index.phpಗೆ ಭೇಟಿ ನೀಡಬೇಕು.
– ಓಪನ್ ಆದ ಪೇಜ್‌ ನಲ್ಲಿ ಅರ್ಜಿಗೆ ಲಿಂಕ್‌ ನೀಡಲಾಗಿರುತ್ತದೆ.
– ಕ್ಲಿಕ್ ಮಾಡಿ, ತೆರೆದ ಪೇಜ್‌ನಲ್ಲಿ ಅಗತ್ಯ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಿ.
– ಅರ್ಜಿ ಸಲ್ಲಿಕೆಗೆ ಮಾರ್ಚ್ 27 ರಂದು ಲಿಂಕ್ ಬಿಡುಗಡೆ ಆಗುತ್ತದೆ.
ಕಾರ್ಮಿಕರ ಭವಿಷ್ಯ ನಿಧಿ ಅಧಿಕೃತ ವೆಬ್‌ಸೈಟ್‌ ವಿಳಾಸ: http://www.epfindia.gov.in
ಅರ್ಜಿ ಶುಲ್ಕ: ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 700 ರೂ. ಇದೆ. ಎಸ್‌ಸಿ / ಎಸ್‌ಟಿ,ಪಿಡಬ್ಲ್ಯೂಡಿ, ಮಹಿಳೆಯರು,ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್‌, ಇಂಟರ್ನೆಟ್‌ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್‌ ಕಾರ್ಡ್‌, ಮೊಬೈಲ್ ವ್ಯಾಲೆಟ್‌ ಮೂಲಕ ಸಹ ಪಾವತಿ ಮಾಡಬಹುದು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement