19,000 ಉದ್ಯೋಗಿಗಳನ್ನು ವಜಾ ಮಾಡಲು ಮುಂದಾದ ಅಕ್ಸೆಂಚರ್

ನವದೆಹಲಿ: ಸಾವಿರಾರು ಉದ್ಯೋಗಿಗಳ ವಜಾ ಘೋಷಿಸಿದ ಟೆಕ್ ಕಂಪನಿಗಳ ಪಟ್ಟಿಗೆ ಅಕ್ಸೆಂಚರ್ ಈಗ ಸೇರ್ಪಡೆಯಾಗಿದೆ. ಹದಗೆಡುತ್ತಿರುವ ಜಾಗತಿಕ ಆರ್ಥಿಕತೆಯ ಆತಂಕದಲ್ಲಿ ಅದು ಸುಮಾರು 19,000 ಉದ್ಯೋಗಿಗಳನ್ನು ವಜಾ ಮಾಡುತ್ತಿದೆ ಎಂದು ವರದಿಯಾಗಿದೆ.
ಈ ವಜಾ ಅದರ ಉದ್ಯೋಗಿಗಳ ಶೇಕಡಾ 2.5 ರಷ್ಟಿದೆ. ಆದರೆ, ಆಕ್ಸೆಂಚರ್ ತಕ್ಷಣವೇ ಉದ್ಯೋಗಿಗಳನ್ನು ತೆಗೆದುಹಾಕುವುದಿಲ್ಲ ಮತ್ತು ಮುಂದಿನ 18 ತಿಂಗಳುಗಳಲ್ಲಿ ವಜಾ ಪ್ರಕ್ರಿಯೆಯು ಮುಂದುವರಿಯುತ್ತದೆ ಎಂದು ಅದು ಪ್ರತಿಪಾದಿಸಿದೆ ಎಂದು ವರದಿ ತಿಳಿಸಿದೆ.
“ಮುಂದಿನ 18 ತಿಂಗಳುಗಳಲ್ಲಿ, ಈ ಕ್ರಮಗಳು ಸರಿಸುಮಾರು 19,000 ಜನರು (ಅಥವಾ ನಮ್ಮ ಪ್ರಸ್ತುತ ಉದ್ಯೋಗಿಗಳ 2.5%) ಕಂಪನಿಯಿಂದ ನಿರ್ಗಮಿಸಲು ಕಾರಣವಾಗಬಹುದೆಂದು ನಿರೀಕ್ಷಿಸಲಾಗಿದೆ ಮತ್ತು ಈ ನಿರ್ಗಮನಗಳಲ್ಲಿ ಅರ್ಧದಷ್ಟು ಜನರು ನಮ್ಮ ನಾನ್‌ ಬಿಲ್ಲೇಬಲ್‌ (non-billable) ಕಾರ್ಪೊರೇಟ್ ಕಾರ್ಯಚಟುವಟಿಕೆಗಳ ಜನರನ್ನು ಒಳಗೊಂಡಿರುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್‌ನಲ್ಲಿ ಹೇಳಿದೆ.
ಐಟಿ ಸಂಸ್ಥೆಯು 2023 ರ ಕೊನೆಯಲ್ಲಿ ಹೊಸಬರನ್ನು ನೇಮಿಸಿಕೊಳ್ಳುವುದನ್ನು ಮುಂದುವರಿಸುತ್ತದೆ ಎಂದು ಬಹಿರಂಗಪಡಿಸಿದೆ.
ಕಂಪನಿ ನೀಡಿರುವ ವಿವರಗಳ ಪ್ರಕಾರ, ವೆಚ್ಚವನ್ನು ಕಡಿಮೆ ಮಾಡಲು ವಜಾಗೊಳಿಸಲಾಗುತ್ತಿದೆ. ವಜಾಗೊಳಿಸುವಿಕೆಯ ಹಿಂದಿನ ಇನ್ನೊಂದು ಕಾರಣವೆಂದರೆ ಹೆಚ್ಚುವರಿ ನೇಮಕ. ಪ್ರಸ್ತುತ ಮತ್ತು ಯೋಜಿತ ಭವಿಷ್ಯದ ಬೇಡಿಕೆಯನ್ನು ಪೂರೈಸಲು ಅಕ್ಸೆಂಚರ್ ಹಿಂದೆ ಹೊಸ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಇದರ ನಂತರ, ಫೆಬ್ರವರಿ 2023 ರ ಹೊತ್ತಿಗೆ ಕಂಪನಿಯ ಹೆಡ್‌ಕೌಂಟ್ ಸುಮಾರು 7,38,000 ಕ್ಕೆ ಏರಿತು, ಇದು ಫೆಬ್ರವರಿ 2022 ರಲ್ಲಿ 6,99,000 ಇತ್ತು.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

ಅಲ್ಲದೆ, ಐಟಿ ಕಂಪನಿಯು ಆರ್ಥಿಕ ಕುಸಿತದ ಬಗ್ಗೆ ಚಿಂತಿಸುತ್ತಿರುವುದರಿಂದ ಈ ವರ್ಷ ಕಡಿಮೆ ಆದಾಯ ಮತ್ತು ಲಾಭವನ್ನು ಊಹಿಸಿದೆ ಎಂದು ಅದು ಬಹಿರಂಗಪಡಿಸಿದೆ. ಆಕ್ಸೆಂಚರ್ ತನ್ನ ವಾರ್ಷಿಕ ಆದಾಯದ ಬೆಳವಣಿಗೆಯು ಸ್ಥಳೀಯ ಕರೆನ್ಸಿಯಲ್ಲಿ 8 ಪ್ರತಿಶತದಿಂದ 10 ಪ್ರತಿಶತದವರೆಗೆ ಇರುತ್ತದೆ ಎಂದು ನಿರೀಕ್ಷಿಸಿದೆ, ಬದಲಿಗೆ 8 ಪ್ರತಿಶತದಿಂದ 11 ಪ್ರತಿಶತದವರೆಗೆ ಬೆಳವಣಿಗೆಯನ್ನು ಅದು ಹಿಂದೆ ನಿರೀಕ್ಷಿಸುತ್ತಿತ್ತು. ಆಕ್ಸೆಂಚರ್ ತನ್ನ ಮೂರನೇ ತ್ರೈಮಾಸಿಕ ಆದಾಯವು $16.1 ಶತಕೋಟಿಯಿಂದ $16.7 ಶತಕೋಟಿ ವ್ಯಾಪ್ತಿಯಲ್ಲಿರಬಹುದು ಎಂದು ಮುನ್ಸೂಚನೆ ನೀಡಿದೆ.
ಆಕ್ಸೆಂಚರ್ 2023 ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದಲ್ಲಿ $16.1 ಶತಕೋಟಿಯಿಂದ $16.7 ಶತಕೋಟಿಯವರೆಗಿನ ಆದಾಯವನ್ನು ನಿರೀಕ್ಷಿಸುತ್ತದೆ, ಇದು ಸ್ಥಳೀಯ ಕರೆನ್ಸಿಯಲ್ಲಿ 3 ಪ್ರತಿಶತದಿಂದ 7 ಪ್ರತಿಶತದಷ್ಟು ಹೆಚ್ಚಳವಾಗಿದೆ, 2022ರ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕದೊಂದಿಗೆ ಹೋಲಿಸಿದರೆ ಇದು ಕಂಪನಿಯ ಅಂದಾಜು ಋಣಾತ್ಮಕ 3.5 ಪ್ರತಿಶತ ವಿದೇಶಿ ವಿನಿಮಯ ಪ್ರಭಾವ(impact)ವನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಫೇಸ್‌ಬುಕ್‌ ಮಾತೃಸಂಸ್ಥೆ ಮೆಟಾ ಇತ್ತೀಚೆಗೆ 10,000 ಹೆಚ್ಚಿನ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತು. ಈ ವರ್ಷದ ಆರಂಭದಲ್ಲಿ ಕಂಪನಿಯು ಈಗಾಗಲೇ 11,000 ಕಾರ್ಮಿಕರನ್ನು ವಜಾಗೊಳಿಸಿದೆ, ಕಾರ್ಯಕ್ಷಮತೆಯ ಆಧಾರದ ಮೇಲೆ ಹಾಗೆ ಮಾಡುತ್ತಿದೆ ಮತ್ತು ಇದು ಸಂಸ್ಥೆಯ ಸುಧಾರಣೆಗೆ ಹಣ ಉಳಿಸುತ್ತದೆ ಎಂದು ಹೇಳಿಕೊಂಡಿದೆ. ಆರ್ಥಿಕ ಹಿಂಜರಿತದಿಂದಾಗಿ ನಿಧಾನಗತಿಯ ಬೆಳವಣಿಗೆ ಮತ್ತು ಆದಾಯದಲ್ಲಿನ ಕುಸಿತದ ಕಾರಣವೂ ಈ ಕ್ರಮವಾಗಿದೆ ಎಂದು ಫೇಸ್‌ಬುಕ್‌ನ ಮೂಲ ಕಂಪನಿ ಹೇಳಿದೆ.
ಅದರ ವಜಾ ಪ್ರಕ್ರಿಯೆಯ ಭಾಗವಾಗಿ 18,000 ಉದ್ಯೋಗಿಗಳನ್ನು ಕಂಪನಿಯನ್ನು ತೊರೆಯಲು ಕೇಳಲಾಗುತ್ತದೆ ಎಂದು ದೃಢಪಡಿಸಿದ ಕೆಲವೇ ವಾರಗಳ ನಂತರ ಅಮೆಜಾನ್ ಕೆಲದಿನಗಳ ಹಿಂದೆ 9,000 ಉದ್ಯೋಗ ಕಡಿತಗಳನ್ನು ಘೋಷಿಸಿತು. ಕಂಪನಿಯು ಮಾರಾಟದಲ್ಲಿ ಕುಸಿತವನ್ನು ಕಂಡಿದ್ದರಿಂದ ಲಾಜಿಟೆಕ್ ಸಹ ಹೆಡ್‌ಕೌಂಟ್‌ಗಳನ್ನು 300 ರಷ್ಟು ಕಡಿತಗೊಳಿಸಿದೆ.

ಪ್ರಮುಖ ಸುದ್ದಿ :-   ಕೇವಲ 23ನೇ ವಯಸ್ಸಿಗೆ 19 ಸರ್ಕಾರಿ ಪರೀಕ್ಷೆ ಪಾಸ್ ! ರಾಷ್ಟ್ರಪತಿಯಿಂದ 'ಅಟ್-ಹೋಮ್' ಗೌರವಕ್ಕೆ ಆಯ್ಕೆಯಾದ ಯುವತಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement