ಮಂಗಳೂರು : ತಡೆಗೋಡೆ ಕಾಮಗಾರಿ ಕಾಂಗಾರಿ ವೇಳೆ ಗುಡ್ಡ ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯದಲ್ಲಿ ಸಂಭವಿಸಿದೆ.
ನಗರ ಪಂಚಾಯತ್ ವ್ಯಾಪ್ತಿಯ ಸುಳ್ಯ ಪೇಟೆ ಸಮೀಪದ ಆಲೆಟ್ಟಿ ರಸ್ತೆಯ ಗುರುಂಪು ಎಂಬಲ್ಲಿ ಶನಿವಾರ ಮಧ್ಯಾಹ್ನದ ವೇಳೆಗೆ ಈ ದುರಂತ ನಡೆದಿದೆ. ಮೃತರನ್ನು ಸೋಮಶೇಖರ ರೆಡ್ಡಿ (45), ಪತ್ನಿ ಶಾಂತಕ್ಕ (40) ಎಂದು ಗುರುತಿಸಲಾಗಿದೆ. ಆದರೆ ಮತ್ತೋರ್ವ ಕಾರ್ಮಿಕ ಯಾರೆಂದು ಗುರುತು ಪತ್ತೆಯಾಗಬೇಕಿದೆ. ಸೋಮಶೇಖರ ಹಾಗೂ ಶಾಂತಕ್ಕ ಗದಗ ಜಿಲ್ಲೆಯ ಮುಂಡರಗಿ ಮೂಲದವರು ಎಂದು ಹೇಳಲಾಗಿದೆ.
ಮನೆಯೊಂದರ ಹಿಂದೆ ಬೃಹತ್ ಗುಡ್ಡವನ್ನ ಕಡಿಯಲಾಗಿತ್ತು, ಕೆಳಗೆ ಪಿಲ್ಲರ್ ಹಾಕಿ ತಡೆಗೋಡೆ ನಿರ್ಮಿಸುವ ಕಾಮಕಾರಿ ನಡೆಯುತ್ತಿತ್ತು. 7 ಕಾರ್ಮಿಕರು ತಡೆಗೋಡೆ ನಿರ್ಮಿಸುತ್ತಿದ್ದ ವೇಳೆ ಹಠಾತ್ತನೆ ಮಣ್ಣು ಕುಸಿದುಬಿದ್ದಿದೆ. ಈ ವೇಳೆ ನಾಲ್ವರು ಓಡಿ ಹೋಗಿ ಜೀವ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಆದರೆ ಮೂವರು ಮಣ್ಣಿನ ಅಡಿ ಸಿಲುಕಿದ್ದರು. ಸತತ ಒಂದೂವರೆ ಗಂಟೆಗೂ ಅಧಿಕ ಸಮಯ ಈ ಕಾರ್ಯಾಚರಣೆ ನಡೆಸಲಾಗಿತ್ತು. ಅವರನ್ನು ಹೊರಗೆ ತೆಗೆಯುವ ಹೊತ್ತಿಗಾಗಲೇ ಮೂವರೂ ಮೃತಪಟ್ಟಿದ್ದರು
ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಶವಗಳನ್ನ ಹೊರತೆಗೆದಿದ್ದು ಸುಳ್ಯ ಆಸ್ಪತ್ರೆ ಶವಗಾರಕ್ಕೆ ಶವಗಳನ್ನ ರವಾನಿಸಲಾಗಿದೆ. ಸ್ಥಳಕ್ಕೆ ಸಚಿವ ಎಸ್.ಅಂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ