ಉಪಕುಲಪತಿ ಕೊಠಡಿಗೆ ನುಗ್ಗಿ ಪ್ರಧಾನಿ ಫೋಟೋ ಹರಿದು ಹಾಕಿದ್ದ ಶಾಸಕನಿಗೆ ₹ 99 ದಂಡ..

ನವಸಾರಿ (ಗುಜರಾತ್‌) : 2017ರಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ಕೃಷಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳ ಕೊಠಡಿಗೆ ಅಕ್ರಮವಾಗಿ ನುಗ್ಗಿ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಹರಿದು ಹಾಕಿದ ಆರೋಪದಡಿ ಕಾಂಗ್ರೆಸ್ ಶಾಸಕ ಅನಂತ ಪಟೇಲ್ ಅವರಿಗೆ ಗುಜರಾತಿನ ನವಸಾರಿ ನ್ಯಾಯಾಲಯ 99 ರೂಪಾಯಿ ದಂಡ ವಿಧಿಸಿದೆ.
ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ವಿ.ಎ. ಧಧಲ್ ಅವರ ನ್ಯಾಯಾಲಯವು ವಂಸ್ಡಾ (ಎಸ್‌ಟಿ) ಸ್ಥಾನದ ಶಾಸಕರಾದ ಪಟೇಲ್ ಅವರನ್ನು ಕ್ರಿಮಿನಲ್ ಅತಿಕ್ರಮಣಕ್ಕಾಗಿ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 447 ರ ಅಡಿಯಲ್ಲಿ ತಪ್ಪಿತಸ್ಥರೆಂದು ಘೋಷಿಸಿದೆ.
ಮೇ 2017 ರಲ್ಲಿ ಜಲಾಲ್‌ಪೋರ್ ಪೊಲೀಸರು ಯೂತ್ ಕಾಂಗ್ರೆಸ್ ಸದಸ್ಯರು ಸೇರಿದಂತೆ ಪಟೇಲ್ ಮತ್ತು ಇತರ ಆರು ಮಂದಿ ವಿರುದ್ಧ ಐಪಿಸಿ ಸೆಕ್ಷನ್ 143 (ಕಾನೂನುಬಾಹಿರ ಸಭೆ), 353 (ಹಲ್ಲೆ), 427 (50 ರೂ. ಮೇಲ್ಪಟ್ಟು ನಷ್ಟ ಉಂಟು ಮಾಡಿದ ಕಿಡಿಗೇಡಿತನ), 447 (ಅಪರಾಧದ ಅತಿಕ್ರಮಣ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿ ಪ್ರಕರಣ ದಾಖಲಿಸಿದ್ದರು.
ಶಾಸಕ ಪಟೇಲ್ ಮತ್ತು ಇತರರು ವಿದ್ಯಾರ್ಥಿಗಳ ಪ್ರತಿಭಟನೆಯ ಸಂದರ್ಭದಲ್ಲಿ ನವಸಾರಿ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳ ಕಚೇರಿಗೆ ನುಗ್ಗಿ ಅಶಿಸ್ತಿನ ರೀತಿಯಲ್ಲಿ ವರ್ತಿಸಿದರು ಮತ್ತು ಉಪಕುಲಪತಿಗಳ ಮೇಜಿನ ಮೇಲಿದ್ದ ಪ್ರಧಾನಿ ಮೋದಿಯವರ ಫೋಟೋವನ್ನು ಹರಿದು ಹಾಕಿದರು ಎಂದು ಆರೋಪಿಸಲಾಗಿದೆ.
ಪ್ರಾಸಿಕ್ಯೂಷನ್ ಐಪಿಸಿಯ ಸೆಕ್ಷನ್ 447 ರ ಅಡಿಯಲ್ಲಿ ಕ್ರಿಮಿನಲ್ ಅತಿಕ್ರಮಣಕ್ಕಾಗಿ ಮೂವರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿದ ನ್ಯಾಯಾಲಯವು 99 ರೂಪಾಯಿಗಳ ದಂಡವನ್ನು ಠೇವಣಿ ಮಾಡಲು ಆದೇಶಿಸಿತು ಮತ್ತು ತಪ್ಪಿದಲ್ಲಿ ಅವರು ಏಳು ದಿನಗಳ ಸಾದಾ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ.
,

ಪ್ರಮುಖ ಸುದ್ದಿ :-   ಮೋದಿ, ರಾಹುಲ್ ಗಾಂಧಿಯಿಂದ ನೀತಿ ಸಂಹಿತೆ ಉಲ್ಲಂಘನೆ ಆರೋಪ: ಉತ್ತರ ನೀಡಲು ಚುನಾವಣಾ ಆಯೋಗ ಸೂಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement