ಪಾಕಿಸ್ತಾನದಲ್ಲಿ ಹಿಂದೂ ವೈದ್ಯನ ಗುಂಡಿಕ್ಕಿ ಹತ್ಯೆ: ಒಂದು ತಿಂಗಳಲ್ಲಿ ಎರಡನೇ ಟಾರ್ಗೆಟೆಡ್‌ ಹತ್ಯೆ

ಕರಾಚಿ ಮುನ್ಸಿಪಲ್ ಕಾರ್ಪೊರೇಶನ್‌ನ ನಿವೃತ್ತ ನಿರ್ದೇಶಕ ಮತ್ತು ನೇತ್ರತಜ್ಞ ಡಾ ಬೀರಬಲ್ ಗೆನಾನಿ ಅವರನ್ನು ಗುರುವಾರ ಲಿಯಾರಿ ಎಕ್ಸ್‌ಪ್ರೆಸ್‌ವೇ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ದಾಳಿಯಲ್ಲಿ ಅವರ ಸಹಾಯಕ ಡಾ.ಕುರಾತ್-ಉಲ್-ಐನ್ ಸಹ ಗಾಯಗೊಂಡಿದ್ದಾರೆ. ಇವರಿಬ್ಬರು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ದಾಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಇದು ಉದ್ದೇಶಪೂರ್ವಕ ಹತ್ಯೆಯ ಪ್ರಕರಣ ಎಂದು ಶಂಕಿಸಲಾಗಿದೆ.
ಈ ತಿಂಗಳಲ್ಲಿ ಪಾಕಿಸ್ತಾನದಲ್ಲಿ ಹಿಂದೂ ವೈದ್ಯರ ಮೇಲೆ ನಡೆದ ದಾಳಿಯ ಎರಡನೇ ಪ್ರಕರಣ ಇದಾಗಿದೆ. ಈ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಹೈದರಾಬಾದ್‌ನ ವೈದ್ಯ ಧರಮ್ ದೇವ್ ರಾಥಿ ಅವರನ್ನು ಅವರ ಚಾಲಕ ಅವರ ಮನೆಯೊಳಗೆ ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ಚಾಲಕ ಚಾಕುವಿನಿಂದ ವೈದ್ಯರ ಕತ್ತು ಸೀಳಿದ್ದಾನೆ ಎಂದು ಪೊಲೀಸರು ಪಾಕಿಸ್ತಾನಿ ಸುದ್ದಿವಾಹಿನಿ ದಿ ನೇಷನ್‌ಗೆ ತಿಳಿಸಿದ್ದಾರೆ.
ಪೊಲೀಸರು ಖೈರ್‌ಪುರದ ಮನೆಯಿಂದ ಚಾಲಕನನ್ನು ಬಂಧಿಸಿದ್ದು, ಹನೀಫ್ ಲೆಘರಿ ಎಂದು ಗುರುತಿಸಿದ್ದಾರೆ.
ಮನೆಗೆ ಹೋಗುವಾಗ ಇಬ್ಬರ ನಡುವೆ ಜಗಳವಾಗಿದೆ ಎಂದು ವೈದ್ಯರ ಅಡುಗೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಚಾಲಕನು ಅಡುಗೆಮನೆಯಿಂದ ಚಾಕು ತೆಗೆದುಕೊಂಡು ಹೋಗಿ ವೈದ್ಯರನ್ನು ತನ್ನ ಮನೆಯಲ್ಲಿಯೇ ಕೊಂದಿದ್ದಾನೆ.

ಪ್ರಮುಖ ಸುದ್ದಿ :-   ಸಿಜೆಪಿ ಪ್ರತಿಭಟನೆ : ಬ್ಯಾರಿಕೇಡ್‌ ತೆರವುಗೊಳಿಸಿ, ಇಂಟರ್ನೆಟ್‌ ಸ್ಥಗಿತ ಬೇಡ, ಮೆಟ್ರೋ ಸಂಚಾರ ಎಂದಿನಂತಿರಲಿ ; ಸುಪ್ರೀಂ ಕೋರ್ಟ್‌

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement