ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ ಭಾರತೀಯ ಮೂಲದ ಕುಟುಂಬದವರು ಸೇರಿ 8 ಮಂದಿ ಸಾವು : ಪೊಲೀಸರು

ಕೆನಡಾದಿಂದ ಅಕ್ರಮವಾಗಿ ಅಮೆರಿಕಕ್ಕೆ ದಾಟಲು ಯತ್ನಿಸಿ ಮೃತಪಟ್ಟ ಎಂಟು ಜನರ ಶವಗಳನ್ನು ಕೆನಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸತ್ತವರಲ್ಲಿ ಸೇಂಟ್ ಲಾರೆನ್ಸ್ ನದಿಯಲ್ಲಿ ದೋಣಿ ಮೂಲಕ ಕೆನಡಾದಿಂದ ಅಮೆರಿಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದ ಭಾರತೀಯ ಕುಟುಂಬದ ಸದಸ್ಯರು ಸೇರಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆರಂಭದಲ್ಲಿ ಇಬ್ಬರು ಮಕ್ಕಳೂ ಸೇರಿದಂತೆ ಆರು ಜನರ ಶವವನ್ನು ನದಿಯಿಂದ ಹೊರ ತೆಗೆಯಲಾಯಿತು.
ನಂತರ ಎರಡು ಶವಗಳನ್ನು ನದಿಯಿಂದ ಹೊರತೆಗೆಯಲಾಗಿದೆ. ಇಬ್ಬರಲ್ಲಿ ಒಂದು ಶಿಶು ರೊಮೇನಿಯನ್ ಮೂಲದ ಕೆನಡಾದ ಪ್ರಜೆಯಾಗಿದ್ದು, ಒಬ್ಬ ವಯಸ್ಕ ಮಹಿಳೆ ಭಾರತೀಯ ಪ್ರಜೆ ಎಂದು ನಂಬಲಾಗಿದೆ” ಎಂದು ಅಕ್ವೆಸಾಸ್ನೆ ಮೊಹಾಕ್ ಪೊಲೀಸ್ ಸೇವೆಯ ಮುಖ್ಯಸ್ಥ ಶಾನ್ ಡುಲುಡೆ ರಾಯಿಟರ್ಸ್‌ಗೆ ತಿಳಿಸಿದರು. ಕೆನಡಾ-ಅಮೆರಿಕದ ಗಡಿಯನ್ನು ರೂಪಿಸುವ ಸೇಂಟ್ ಲಾರೆನ್ಸ್ ನದಿಯ ಜವುಗು ಪ್ರದೇಶದಲ್ಲಿ ಗುರುವಾರ ಮೃತದೇಹಗಳು ಪತ್ತೆಯಾಗಿವೆ.
ರೊಮೇನಿಯಾ ಮತ್ತು ಭಾರತದ ಎರಡು ಕುಟುಂಬಗಳು ಸತ್ತವರಲ್ಲಿ ಸೇರಿವೆ ಎಂದು ಬಿಬಿಸಿ ವರದಿ ಮಾಡಿದೆ. ಪೋಲೀಸರ ಪ್ರಕಾರ, ಮೊದಲ ದೇಹವು ಸ್ಥಳೀಯ ಕಾಲಮಾನ 17:00 (21:00 GMT) ಸುಮಾರಿಗೆ ಅಮೆರಿಕ-ಕೆನಡಾ ಗಡಿಯ ನಡುವಿನ ಮೊಹಾಕ್ ಪ್ರದೇಶದ ಅಕ್ವೆಸಾಸ್ನೆಯಲ್ಲಿರುವ ತ್ಸಿ ಸ್ನೈಹ್ನೆಯಲ್ಲಿನ ಜವುಗು ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
ಗುರುವಾರ ಆರು ಮೃತದೇಹಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬುಧವಾರ ರಾತ್ರಿ ದುರಂತ ಸಂಭವಿಸಿರಬಹುದು ಎಂದು ನಂಬಿದ್ದಾರೆ. ಪೊಲೀಸರು ಹೆಲಿಕಾಪ್ಟರ್ ಮೂಲಕ ನೀರಿನಲ್ಲಿ ಎರಡು ದೇಹಗಳನ್ನು ಪತ್ತೆ ಹಚ್ಚಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ಒಟ್ಟು ಎಂಟು ಮೃತದೇಹಗಳನ್ನು ಈಗ ನೀರಿನಿಂದ ಹೊರತೆಗೆಯಲಾಗಿದೆ. ಎಲ್ಲರೂ ಕೆನಡಾದಿಂದ ಅಮೆರಿಕಕ್ಕೆ ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ನಂಬಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂರು ವರ್ಷದೊಳಗಿನ ಒಂದು ಮಗು ಕೆನಡಾದ ಪಾಸ್‌ಪೋರ್ಟ್ ಹೊಂದಿತ್ತು. ಮತ್ತೊಂದು ಶಿಶು ಕೂಡ ಕೆನಡಾದ ಪ್ರಜೆ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಮೃತದೇಹಗಳು ರೊಮೇನಿಯನ್ ಮೂಲದ ಮತ್ತು ಭಾರತೀಯ ಮೂಲದ ಎರಡು ಕುಟುಂಬಗಳದ್ದು ಎಂದು ನಂಬಲಾಗಿದೆ ಎಂದು ಅಕ್ವೆಸಾಸ್ನೆ ಮೊಹಾಕ್ ಪೊಲೀಸ್ ಸೇವೆಯ ಉಪ ಮುಖ್ಯಸ್ಥ ಲೀ-ಆನ್ ಒ’ಬ್ರೇನ್ ಬಿಬಿಸಿಗೆ ತಿಳಿಸಿದರು. ನಾಪತ್ತೆಯಾಗಿರುವವರಿಗಾಗಿ ಶೋಧ ಕಾರ್ಯ ಗುರುವಾರ ಆರಂಭವಾದ ಬಳಿಕ ಶವಗಳು ಪತ್ತೆಯಾಗಿವೆ ಎಂದರು.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ, “ಇದೊಂದು ಹೃದಯವಿದ್ರಾವಕ ಪರಿಸ್ಥಿತಿ. ಏನಾಯಿತು, ಅದು ಹೇಗೆ ಸಂಭವಿಸಿತು ಎಂಬುದನ್ನು ನಾವು ಸರಿಯಾಗಿ ಅರ್ಥಮಾಡಿಕೊಳ್ಳಬೇಕು ಮತ್ತು ಇದು ಮತ್ತೆ ಸಂಭವಿಸುವ ಸಾಧ್ಯತೆಗಳನ್ನು ಕಡಿಮೆ ಮಾಡಲು ನಾವು ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದರು.
ಕಳೆದ ವರ್ಷ, ಕೆನಡಾದ ಮ್ಯಾನಿಟೋಬಾ ಪ್ರಾಂತ್ಯದಲ್ಲಿ ನಾಲ್ವರ ಭಾರತೀಯ ಕುಟುಂಬವು ಅಮೆರಿಕಕ್ಕೆ ದಾಟಲು ಪ್ರಯತ್ನಿಸುತ್ತಿರುವಾಗ ಹೆಪ್ಪುಗಟ್ಟಿದ ಹಿಮದಿಂದ ಮೃತಪಟ್ಟಿತ್ತು.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement