10 ತಿಂಗಳ ನಂತರ ಪಟಿಯಾಲಾ ಜೈಲಿನಿಂದ ಬಿಡುಗಡೆಯಾದ ನವಜೋತ್ ಸಿಂಗ್ ಸಿಧು

ಪಟಿಯಾಲಾ : ಪಂಜಾಬ್ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು 34 ವರ್ಷಗಳ ಹಿಂದೆ ರಸ್ತೆ ಗಲಾಟೆಯಲ್ಲಿ ವ್ಯಕ್ತಿಯೊಬ್ಬ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ತಿಂಗಳ ಜೈಲುವಾಸದ ನಂತರ ಶನಿವಾರ (ಏಪ್ರಿಲ್ 1) ಪಟಿಯಾಲಾ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಕಾಂಗ್ರೆಸ್ ನಾಯಕನನ್ನು ಸಂಜೆ 5:53 ಕ್ಕೆ ಬಿಡುಗಡೆ ಮಾಡಲಾಯಿತು. ಜೈಲಿನಿಂದ ಹೊರಬರುತ್ತಿದ್ದಂತೆ ನವಜೋತ್ ಸಿಂಗ್ ಸಿಧು ತಮ್ಮ ಬೆಂಬಲಿಗರಿಗೆ ಬಾಗಿ ನಮಸ್ಕರಿಸಿದರು.ಅಮೃತಸರ ಸಂಸದ ಗುರ್ಜಿತ್ ಔಜ್ಲಾ, ಪಂಜಾಬ್ ಮಾಜಿ ಕಾಂಗ್ರೆಸ್ ಮುಖ್ಯಸ್ಥರಾದ ಶಂಶೇರ್ ಸಿಂಗ್ ಡುಲ್ಲೋ, ಮೊಹಿಂದರ್ ಸಿಂಗ್ ಕೇಪೀ ಮತ್ತು ಲಾಲ್ ಸಿಂಗ್, ಮಾಜಿ ಶಾಸಕ ನವತೇಜ್ ಸಿಂಗ್ ಚೀಮಾ, ಇತರ ನಾಯಕರಾದ ಅಶ್ವನಿ ಸೆಖ್ರಿ, ಸುಖ್ವಿಂದರ್ ಸಿಂಗ್ ಡ್ಯಾನಿ ಸೇರಿದಂತೆ ಹಲವಾರು ಕಾಂಗ್ರೆಸ್ ನಾಯಕರು ಅವರು ಹೊರಬರುವುದನ್ನು ಕಾಯುತ್ತಿದ್ದರು.

ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್‌ ಸಿಧು ಅಧಿಕೃತ ಹ್ಯಾಂಡಲ್‌ನಿಂದ ಟ್ವೀಟ್ ಮಾಡಿದ್ದು, ಬಿಡುಗಡೆಯಾದ ನಂತರ ಜೈಲಿನ ಹೊರಗೆ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡುವುದಾಗಿ ಹೇಳಿದ್ದಾರೆ. ಒಂದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಸಿಧು ತಮ್ಮ “ಒಳ್ಳೆಯ ನಡವಳಿಕೆ” ಕಾರಣಕ್ಕೆ ಎರಡು ತಿಂಗಳು ಮೊದಲೇ ಬಿಡುಗಡೆಯಾದರು.
1988 ರಲ್ಲಿ ಸಿಧು ಮತ್ತು ಅವರ ಸ್ನೇಹಿತನೊಂದಿಗಿನ ಜಗಳದ ನಂತರ ಮೃತಪಟ್ಟ ವ್ಯಕ್ತಿಯ ಕುಟುಂಬದ ಮನವಿಯ ನಂತರ 59 ವರ್ಷದ ರಾಜಕಾರಣಿಗೆ ಒಂದು ವರ್ಷದ “ಕಠಿಣ ಜೈಲು ಶಿಕ್ಷೆ” ಯನ್ನು ಮೇ 2022 ರಲ್ಲಿ ಸುಪ್ರೀಂ ಕೋರ್ಟ್ ವಿಧಿಸಿತ್ತು.
ಡಿಸೆಂಬರ್ 27, 1988 ರಂದು, ನವಜೋತ್ ಸಿಧು 65 ವರ್ಷದ ಪಟಿಯಾಲ ನಿವಾಸಿ ಗುರ್ನಾಮ್ ಸಿಂಗ್ ಅವರೊಂದಿಗೆ ಪಾರ್ಕಿಂಗ್ ಸ್ಥಳದ ಬಗ್ಗೆ ಜಗಳವಾಡಿದರು. ನವಜೋತ್ ಸಿಧು ಮತ್ತು ಸ್ನೇಹಿತ ರೂಪಿಂದರ್ ಸಿಂಗ್ ಸಂಧು ಅವರು ಗುರ್ನಾಮ್ ಸಿಂಗ್ ಅವರನ್ನು ಕಾರಿನಿಂದ ಹೊರಗೆಳೆದು ಹಲ್ಲೆ ನಡೆಸಿದ್ದರು. ಬಳಿಕ ರ್ನಾಮ್ ಸಿಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement