ಉಮೇಶ್ ಪಾಲ್ ಹತ್ಯೆ ಪ್ರಮುಖ ಆರೋಪಿ, ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಪುತ್ರ ಅಸದ್ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಸಾವು

ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌-ರಾಜಕಾರಣಿ ಅತೀಕ್ ಅಹ್ಮದ್‌ನ ಮಗ ಅಸದ್ ಮತ್ತು ಸಹಚರ ಗುಲಾಮ್ ಎಂಬವರು ಉತ್ತರ ಪ್ರದೇಶದ ಎಸ್‌ಟಿಎಫ್ ಗುಂಡಿಗೆ ಬಲಿಯಾಗಿದ್ದಾರೆ.
ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಇಬ್ಬರೂ ಬೇಕಾಗಿದ್ದರು. ಝಾನ್ಸಿಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್ಪಿ) ನವೆಂದು ಮತ್ತು ವಿಮಲ್ ನೇತೃತ್ವದ ಉತ್ತರ ಪ್ರದೇಶ ಪೊಲೀಸ್ ವಿಶೇಷ ಕಾರ್ಯಪಡೆ (UPSTF) ತಂಡದ ಎನ್‌ಕೌಂಟರಿನಲ್ಲಿ ಹತ್ಯೆಯಾಗಿದ್ದಾರೆ. ಅತ್ಯಾಧುನಿಕ ವಿದೇಶಿ ನಿರ್ಮಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಫೆಬ್ರವರಿ 24 ರಂದು ಪ್ರಯಾಗ್‌ರಾಜ್‌ನಲ್ಲಿ ಹಗಲು ಹೊತ್ತಿನಲ್ಲಿ ಉಮೇಶ್ ಪಾಲ್‌ ಎಂಬವರನ್ನು ಅಸದ್ ಗುಂಡು ಹಾರಿಸಿ ಹತ್ಯೆ ಮಾಡಿದ ಪ್ರಕರಣದ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ.

ಕಳೆದ ವರ್ಷದವರೆಗೆ, ಅಸದ್ ಅಹ್ಮದ್ ವಿರುದ್ಧ ಯಾವುದೇ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರಲಿಲ್ಲ. ಆದರೆ ಈ ವರ್ಷ ಫೆಬ್ರವರಿ 24 ರಂದು ಪ್ರಯಾಗರಾಜ್‌ನ ಜನನಿಬಿಡ ರಸ್ತೆಯಲ್ಲಿ ಹಗಲು ಹೊತ್ತಿನಲ್ಲಿ ಉಮೇಶ ಪಾಲ್ ಎಂಬವರನ್ನು ಹತ್ಯೆ ಮಾಡಿದ್ದ ಅರ್ಧ ಡಜನ್ ಶೂಟರ್‌ಗಳನ್ನು ನೇತೃತ್ವ ವಹಿಸಿದ ನಂತರ ಉತ್ತರ ಪ್ರದೇಶದಲ್ಲಿ ‘ಮೋಸ್ಟ್ ವಾಂಟೆಡ್’ ವ್ಯಕ್ತಿಯಾದ.
ಅತೀಕ್ ಅಹ್ಮದ್ ಆಪ್ತ ಸಹಾಯಕ ಮೊಹಮ್ಮದ್ ಗುಲಾಮ್ ಪ್ರಕರಣದ ಮತ್ತೊಬ್ಬ ಆರೋಪಿ. ಮಾರ್ಚ್‌ನಲ್ಲಿ, ಪ್ರಯಾಗ್‌ರಾಜ್ ಆಡಳಿತವು ಆತನ ಮನೆಯನ್ನು ಕೆಡವಲು ಬುಲ್ಡೋಜರ್‌ಗಳನ್ನು ನಿಯೋಜಿಸಿತು. ಪಾಲ್ ಹತ್ಯೆಯ ನಂತರ ಅಸದ್‌ ಹಾಗೂ ಗುಲಾಮ್ ನಾಪತ್ತೆಯಾಗಿದ್ದರು. ಅಸಾದ್ ಮತ್ತು ಗುಲಾಮ್ ಇಬ್ಬರ ಸುಳಿವು ನೀಡಿದವರಿಗೆ ಸರ್ಕಾರ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.
ಕೆಲವು ದಿನಗಳ ಹಿಂದೆ ಶೂಟರ್ ಗುಲಾಮ್ ಮನೆಯನ್ನು ಯೋಗಿ-ಆದಿತ್ಯನಾಥ್ ಸರ್ಕಾರ ಬುಲ್ಡೋಜರ್ ಮಾಡಿತ್ತು.
ಮೂಲಗಳ ಪ್ರಕಾರ ಗ್ಯಾಂಗ್‌ಸ್ಟರ್‌ ಅತೀಕ್ ಪುತ್ರ ಅಸದ್ ಮದುವೆ ಅತೀಕ್ ಸಹೋದರಿ ಆಯೇಷಾ ನೂರಿ ಮಗಳೊಂದಿಗೆ ನಿಶ್ಚಯವಾಗಿತ್ತು. ಕಳೆದ ವರ್ಷ ಇವರಿಬ್ಬರ ನಿಶ್ಚಿತಾರ್ಥ ನಡೆದಿತ್ತು. ಪೊಲೀಸರು ಈಗಾಗಲೇ ಅತೀಕ್ ಸಹೋದರಿ ಆಯೇಷಾ ನೂರಿ ಪತಿ ಡಾ.ಅಖ್ಲಾಕ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೋ |ಉತ್ತರ ಪ್ರದೇಶ ಕಾಂಗ್ರೆಸ್‌ ಕಚೇರಿಯಲ್ಲಿ ಹೈಡ್ರಾಮಾ : ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭದಲ್ಲೇ ಶೂ ಎಸೆತ, ಘರ್ಷಣೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement