ನನಗೆ ಬಿಜೆಪಿಯಲ್ಲಿ ಟಿಕೆಟ್ ತಪ್ಪಲು ಬಿ.ಎಲ್. ಸಂತೋಷ ಕಾರಣ: ಜಗದೀಶ ಶೆಟ್ಟರ ಆರೋಪ

ಹುಬ್ಬಳ್ಳಿ: ಬಿಜೆಪಿಯಲ್ಲಿ ಈ ಬಾರಿ ನನಗೆ ಟಿಕೆಟ್ ಕೈತಪ್ಪಲು ಬಿ.ಎಲ್. ಸಂತೋಷ್ ಕಾರಣ. ನನಗಷ್ಟೇ ಅಲ್ಲ, ಮೈಸೂರಿನಲ್ಲಿ ರಾಮದಾಸ ಅವರಿಗೂ ಟಿಕೆಟ್‌ ತಪ್ಪಲು ಅವರೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆರೋಪಿಸಿದ್ದಾರೆ.
ಇಂದು, ಮಂಗಳವಾರ ತಮ್ಮ ನಿವಾಸದಲ್ಲಿ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಹಲವಾರು ದಿನಗಳಿಂದ ನಾನು ವೇದನೆ ಅನುಭವಿಸಿದ್ದೇನೆ. ಇದಕ್ಕೆ ಕೇವಲ ಟಿಕೆಟ್ ಒಂದೇ ಕಾರಣವಲ್ಲ. ಇದರಲ್ಲಿ ಹಲವಾರು ಜನರಿದ್ದಾರೆ. ಈಗ ಹೆಸರು ಹೇಳುವ ಸಮಯ ಬಂದಿದೆ. ರಾಜ್ಯ ಬಿಜೆಪಿ ಕೆಲವರ ಕಪಿಮುಷ್ಠಿಯಲ್ಲಿ ಎಂದು ಹೇಳಿದರು.
ನಾನು ಈ ಹಿಂದೆ ಸಮಯ ಬಂದಾಗ ಹೇಳುತ್ತೇನೆ ಎಂದು ಹೇಳಿದ್ದೆ.ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್(B ಅವರಿಂದಾಗಿ ನನಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಟಿಕೆಟ್ ಕೈತಪ್ಪಿದೆ. ಅವರ ಜೊತೆ ಇನ್ನೂ ಹಲವರು ಇರಬಹುದು ಎಂದು ಹೇಳಿದ್ದಾರೆ.
ನನ್ನ ವಿರುದ್ದ ಹೈಕಮಾಂಡ್ ಬಳಿ ಅಪಪ್ರಚಾರ ಮಾಡಲಾಯಿತು. ಒಂದು ತಂಡ ನನ್ನ ವಿರುದ್ಧ ಕೆಲಸ ಮಾಡಿತು. ಇದರಿಂದಾಗಿ ನನಗೆ ಟಿಕೆಟ್ ತಪ್ಪಿತ್ತು. ನನಗಷ್ಟೇ ಅಲ್ಲ, ರಾಮದಾಸ ಅವರಿಗೇ ಟಿಕೆಟ್ ತಪ್ಪಲೂ ಸಂತೋಷ್ ಅವರೇ ಕಾರಣ ಎಂದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಕೋರ್​ ಕಮಿಟಿ ಸಭೆಗೆ ನನ್ನ ಜೊತೆ ಒಟ್ಟು ಮೂವರ ಆಕಾಂಕ್ಷಿಗಳ ಹೆಸರುಗಳನ್ನು ಕಳುಹಿಸಲಾಗಿತ್ತು. ಸ್ಕ್ರೀನಿಂಗ್ ಕಮಿಟಿಯಲ್ಲಿ ನನ್ನ ಹೆಸರಿತ್ತು. ಆದರೆ ಇಷ್ಟಾಗಿಯೂ ಕೊನೆಗೆ ಗಳೊಗೆಯಲ್ಲಿ ಟಿಕೆಟ್​ ಕೈತಪ್ಪಲು ಸಂತೋಷ ಅವರು ಕಾರಣ. ಮೈಸೂರಿನಲ್ಲಿ ರಾಮದಾಸ ಕ್ಷೇತ್ರಕ್ಕೂ ನಾನು ಹೋಗಿದ್ದೆ. ರಾಮದಾಸ ನಿಂತರೆ ಅಲ್ಲಿ ಗೆಲ್ಲುತ್ತಾರೆ. ಆದರೆ ರಾಮದಾಸ ಅವರು ಸಂತೋಷ ಅವರ ಆಪ್ತವಲಯದಲ್ಲಿ ಇಲ್ಲ. ಅಲ್ಲಿ ಈಗ ಟಿಕೆಟ್‌ ಪಡೆದ ಶ್ರೀವತ್ಸ ಅವರು ಬಿ.ಎಲ್‌. ಸಂತೋಷ ಅವರ ಆಪ್ತ. ಈ ಕಾರಣಕ್ಕಾಗಿ ರಾಮದಾಸ ಅವರಿಗೆ ಟಿಕೆಟ್​ ತಪ್ಪಿತು. ಒಂದು ವೇಳೆ
ರಾಮದಾದ ಬಂಡಾಯವಾಗಿ ನಿಂತರೆ ಅಲ್ಲಿ ಗೆಲ್ಲುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು.
ಬಿಎಲ್ ಸಂತೋಷ್ ಕೇರಳದಲ್ಲಿ ಇನ್ ಚಾರ್ಜ್ ಮಾಡಿದ್ದರು. ಆದರೆ ಬಿಜೆಪಿಗೆ ಒಂದು ಸೀಟ್ ಬರಲಿಲ್ಲ. ತಮಿಳುನಾಡಿಲ್ಲಿ ಎರಡು ಮೂರು ಸೀಟ್ ಬಂತು. ಇಷ್ಟಾಗಿಯೂ ಈಗ ಕರ್ನಾಟಕದಲ್ಲಿ ಕಾರಬಾರು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮೊದಲ ಪಟ್ಟಿಯಲ್ಲಿ ನನ್ನ ಹೆಸರು ಇಲ್ಲದಿದ್ದಾಗ ಈ ಬಗ್ಗೆ ವರಿಷ್ಠರನ್ನು ವಿಚಾರಿಸಿದ್ದೆ. ಆಗ ನಿಮಗೆ ಟಿಕೆಟ್​ ಕೊಡುವುದಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಹೇಳಿದ್ದರು. ಅಲ್ಲದೆ, ಒಂದು ಪತ್ರ ಕಳುಹಿಸುತ್ತೇವೆ, ಆಸಕ್ತಿಯಿಲ್ಲವೆಂದು ಸಹಿ ಮಾಡಿ ಕಳುಹಿಸಿ ಎಂದು ತಿಳಿಸಿದ್ದರು. ಅವರ ಮಾತು ಕೇಳಿ ಆಘಾತವಾಯಿತು. ಸೌಹಾರ್ದಯುತವಾಗಿ ಕರೆದು ಮಾತಾಡಿದ್ದರೆ ನಾನು ಒಪ್ಪಿಕೊಳ್ಳುತ್ತಿದ್ದೆ. ಆದರೆ ನನ್ನನ್ನು ನಡೆಸಿಕೊಂಡ ರೀತಿ ನನಗೆ ನೋವು ತಂದಿದೆ. ರಾಜ್ಯದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರುವ ಅವಕಾಶವಿತ್ತು. ಆದರೆ ಬಿಜೆಪಿಯವರೇ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆದಿದ್ದಾರೆ. ಪ್ರಮುಖ ನಾಯಕರ ವಿರುದ್ಧ ಷಡ್ಯಂತ್ರ ಮಾಡುತ್ತಿದ್ದಾರೆ ಎಂದರು.
ರಾಜ್ಯದ ಮುಖ್ಯಮಂತ್ರಿಯಾಗಿ ನಾನು ಉತ್ತಮ ಆಡಳಿತ ನೀಡಿದ್ದೇನೆ. ಯಡಿಯೂರಪ್ಪ, ಅನಂತಕುಮಾರ ಅವರ ನೇತೃತ್ವದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದೇನೆ. ಈಗ ಯಡಿಯೂರಪ್ಪ ನಂತರ ರಾಜ್ಯದಲ್ಲಿ ಪ್ರಮುಖ ಲಿಂಗಾಯತ ನಾಯಕ ನಾನೇ ಆಗಿದ್ದೆ. ಹೀಗಿರುವಾಗ ನನ್ನನ್ನು ಬಿಜೆಪಿಯಲ್ಲಿ ಈ ರೀತಿ ಕಡೆಗಣಿಸಿ ಅವಮಾನ ಮಾಡಿದ್ದು ನೋವುಂಟು ಮಾಡಿದೆ ಎಂದುಹೇಳಿದ್ದಾರೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement