ಜಾತಿ ಗಣತಿ: ಬಿಜೆಪಿ ರಾಜಕೀಯ ಬೂಟಾಟಿಕೆ ಬಹಿರಂಗ-ಕಾಂಗ್ರೆಸ್ ಟೀಕೆ

ಹುಬ್ಬಳ್ಳಿ: ಸಾಮಾಜಿಕ, ಆರ್ಥಿಕ, ಜಾತಿ ಜನಗಣತಿಗೆ ಬಿಜೆಪಿ ವಿರೋಧಿಸುತ್ತಿದೆ. ಇದನ್ನು ತಾವೇ ಸ್ಪಷ್ಟಪಡಿಸುವುದರ ಜೊತೆಗೆ ತನ್ನ ರಾಜಕೀಯ ಬೂಟಾಟಿಕೆಯನ್ನೂ ತಾನೇ ಬಹಿರಂಗಪಡಿಸಿದೆ ಎಂದು ಕಾಂಗ್ರೆಸ್ಸಿನ ರಾಜ್ಯ ಪ್ರಚಾರ ಸಮಿತಿಯ ಸಂಯೋಜಕರಾದ ವಸಂತ ಲದವಾ ಟೀಕಿಸಿದ್ದಾರೆ.
ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಾಮಾಜಿಕ, ಆರ್ಥಿಕ, ಜಾತಿ ಜನಗಣತಿಗಾಗಿ ೨೦೧೦ ರಂದು ಸಂಸತ್ತಿನಲ್ಲಿ ಮಸೂದೆ ಮಂಡಿಸಿ ಒಪ್ಪಿಗೆ ಪಡೆದಿತ್ತು. ಕಾಂಗ್ರೆಸ್ ಸರ್ಕಾರದ ಯಾವ ಸದಸ್ಯರೂವಿರೋಧ‌ ವ್ಯಕ್ತಪಡಿಸದೆ ಎಲ್ಲರೂ ಒಮ್ಮತದಿಂದ ಬೆಂಬಲಿಸಿದ್ದರು. ಅಂದು ವಿರೋಧ ವ್ಯಕ್ತಪಡಿಸಿದ್ದು ಬಿಜೆಪಿ, ಅದನ್ನು ಮರೆಮಾಚಿ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ್ದು, ರಾಜಕೀಯ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಸಾಮಾಜಿಕ, ಆರ್ಥಿಕ, ಜಾತಿ ಗಣತಿ ೨೦೧೧ರಂದು ನಡೆಸಿದ್ದು ನಂತರ ಜಾತಿ ಗಣತಿ ಅಧಿಕಾರಿಗಳು ದಿನಾಂಕ ೩ ಮಾರ್ಚ್‌ ೨೦೧೫ ರಂದು ವಿವರಗಳನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಅಂದು ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರಗಳನ್ನು ಈ ವಿವರಗಳನ್ನು ಸಾರ್ವಜನಿಕಗೊಳಿಸದೆ ಜನಗಣತಿಯ ಮೂಲ ಉದ್ದೇಶಕ್ಕೆ ವಿರೋಧ ವ್ಯಕ್ತಪಡಿಸಿತು. ಇಂಥ ನೈಜ ಮತ್ತು ಸತ್ಯ ಸಂಗತಿಗಳನ್ನು ಮರಿ ಮಾಚಿ ಬಿಜೆಪಿ ರಾಜಕೀಯ ಹೇಳಿಕೆ ನೀಡುತ್ತಿದೆ ಎಂದು ವಸಂತ ಲದವಾ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್ ಸರ್ಕಾರ ನಡೆಸಿದ ೨೦೧೧ರ, ಜಾತಿ ಜನಗಣತಿಯ ವಿವರಗಳನ್ನು ಇಂದಿಗೂ ಬಿಜೆಪಿ ಸರ್ಕಾರ ಬಹಿರಂಗಪಡಿಸುತ್ತಿಲ್ಲ ೨೦೨೧ ರಲ್ಲಿ ಇದೇ ರೀತಿ ಜನಗಣತಿಗೆ ಕಾಂಗ್ರೆಸ್ ಇಂದಿಗೂ ಒತ್ತಾಯಿಸುತ್ತಿದ್ದರೂ ಜಾತಿ ಗಣತಿಗೆ ಬಿಜೆಪಿ ವಿರೋಧಿಸುತ್ತಿದೆ. ಕೇಂದ್ರ ಸರ್ಕಾರ ಜಾತಿಗಣತಿ ನಿರ್ವಹಿಸುವುದಿಲ್ಲವೆಂದು ತಿಳಿಸಿದೆ. ಸರ್ವೋಚ್ಚ ನ್ಯಾಯಾಲಯಕ್ಕೆ ಸಪ್ಟೆಂಬರ್ ೨೧ ರಲ್ಲಿ ಇದು ಸಾಧ್ಯವಾಗದೆಂದು ಪ್ರಮಾಣ ಪತ್ರ ಸಲ್ಲಿಸಿದೆ ಎಂದು ಲದವಾ ಹೇಳಿದ್ದಾರೆ.
೯೦ ವರ್ಷಗಳ ಹಿಂದೆ ೧೯೩೧ ರಲ್ಲಿ ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಜಾತಿವಾರು ಜನಗಣತಿ ದೇಶದಲ್ಲಿ ಸಾಧ್ಯವಾಗಿದ್ದರೆ, ೨೦೧೧ ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನಗಣತಿ ಸಾಧ್ಯವಾಗಿದ್ದರೆ ೨೦೨೧ರಲ್ಲಿ ಸೌಲಭ್ಯಗಳು ಲಭ್ಯವಿದ್ದಾಗಲೂ ಕೂಡ ಬಿಜೆಪಿ ಸರ್ಕಾರ ಜನಗಣತಿಗೆ ಹಿಂದಿನಂತೆ ಏಕೆ ಮಾಡುತ್ತಿಲ್ಲ? ಬಿಜೆಪಿ ನಿಲುವೇನು ಸ್ಪಷ್ಟ ಪಡಿಸಬೇಖು ಎಂದು ವಸಂತ ಲದವಾ ಸವಾಲು ಹಾಕಿದ್ದಾರೆ.

ಪ್ರಮುಖ ಸುದ್ದಿ :-   ಇನ್ಮುಂದೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆದರೆ ಮಾತ್ರ ಕಟ್ಟಡಗಳಿಗೆ ವಿದ್ಯುತ್‌, ನೀರಿನ ಸಂಪರ್ಕ; ಬಿಬಿಎಂಪಿ

೨೦೧೪-೧೫ ರಂದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸೌಲಭ್ಯ ವಂಚಿತರಿಗೆ ನ್ಯಾಯಯುತ ಮೀಸಲಾತಿ ನಿರ್ಧರಿಸಲು ೧೬೯ ಕೋಟಿ ವೆಚ್ಚದಲ್ಲಿ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಲು ಆದೇಶ ನೀಡಿದ್ದರು. ಏಪ್ರಿಲ್ – ಮೇ ತಿಂಗಳಿನಲ್ಲಿ ಒಂದು ಕೋಟಿ ೪೦ ಲಕ್ಷ ಮನೆಗಳಿಗೆ ಸಮಕ್ಷಮ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಮಹತ್ಕಾರ್ಯ ಮಾಡಿತ್ತು. ಸುಮಾರು 95% ರಷ್ಟು ಸಮೀಕ್ಷೆ ಕಾರ್ಯವು ಪೂರ್ಣಗೊಂಡಿದೆ. ಆದರೆ ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಆಯೋಗ ನಡೆಸಿದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ, ಆಯೋಗ ನಡೆಸಿದ ಸಮೀಕ್ಷಾ ವರದಿ ಬಹಿರಂಗಪಡಿಸದೆ, ಸಾಮಾಜಿಕ ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಕಲ್ಯಾಣ ಕಾರ್ಯಕ್ರಮಗಳಿಂದ ವಂಚಿತಗೊಳಿಸುತ್ತಿದೆ.

ರಾಜ್ಯ-ದೇಶದ ಜನಸಾಮಾನ್ಯರಿಗೆ, ಸೌಲಭ್ಯ ವಂಚಿತರಿಗೆ ರೂಪಿಸಬೇಕಾದ ಕಲ್ಯಾಣ ಯೋಜನೆಗಳ ಗಾತ್ರ, ವ್ಯಾಪ್ತಿಗಳನ್ನು ನಿಗದಿಪಡಿಸಲು ಜನಗಣತಿ ಮತ್ತು ಆಯೋಗದ ವರದಿಗಳ ದತ್ತಾಂಶ ಅತ್ಯವಶ್ಯ ಮತ್ತು ಮಹತ್ವದ ಆಧಾರಗಳಾಗಿವೆ. ಆದರೆ ಬಿಜೆಪಿ ಸರ್ಕಾರ ೨೦೧೧ ರಲ್ಲಿ ಜನಗಣತಿ ವಿವರಗಳನ್ನು ಬಹಿರಂಗಪಡಿಸದೇ, ಅದೇ ಪ್ರಕಾರ ೨೦೨೧ ರ ಜನಗಣತಿಯಲ್ಲಿ ವಿವರ – ದತ್ತಾಂಶಗಳು ಒಳಪಡಿಸದೆ ಇದ್ದುದರಿಂದ ರಾಜ್ಯದಲ್ಲಿ ನಡೆದ ೨೦೧೪-೧೫ ರ ಸಮೀಕ್ಷಾ ವರದಿ, ಕೋಟ್ಯಂತರ ದೇಶದ ಜನ ಕಲ್ಯಾಣ ಕಾರ್ಯಕ್ರಮಗಳ ಸೌಲಭ್ಯಗಳಿಂದ ವಂಚಿತರಾಗಲು ಬಿಜೆಪಿ ಮಾತ್ರ ಕಾರಣವೆಂದು ವಸಂತ ಲದವಾ ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ಹಣಕ್ಕಾಗಿ ಆನಂದ ಗುರೂಜಿಗೆ ಬ್ಲ್ಯಾಕ್ ಮೇಲ್ ಆರೋಪ ; ಇಬ್ಬರ ವಿರುದ್ಧ ದೂರು ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement