ಆಪರೇಶನ್‌ ಕಾವೇರಿ : ಯುದ್ಧಪೀಡಿತ ಸುಡಾನ್‌ನಿಂದ ಈವರೆಗೆ 530 ಭಾರತೀಯರ ಸ್ಥಳಾಂತರ

ನವದೆಹಲಿ: ಆಂತರಿಕ ಯುದ್ಧ ಪೀಡಿತ ಸುಡಾನ್‌ನಿಂದ ಈವರೆಗೆ 530 ಭಾರತೀಯರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ‘ಆಪರೇಷನ್ ಕಾವೇರಿ’ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿತ್ತು. ಹಾಗೂ ಇದಕ್ಕಾಗಿ ನೌಕಾ ಪಡೆಯ ಐಎನ್‌ಎಸ್‌ ಸುಮೇಧಾ ಹಡಗಿ ಹಾಗೂ ವಾಯುಸೇನಯ ವಿಮಾನಗಳನ್ನು ನಿಯೋಜಿಸಲಾಗಿತ್ತು. ಈಗ ಸುಡಾನ್‌ನಲ್ಲಿ ಸಿಕ್ಕಿಬಿದ್ದಿರುವ ಭಾರತೀಯರನ್ನು ಕರೆತರಲು ನೌಕಾಪಡೆ ಹಾಗೂ ವಾಯುಪಡೆ ಜಂಟಿ ಕಾರ್ಯಾಚರಣೆ ಪ್ರಾರಂಭಿಸಿದೆ.
ಮಂಗಳವಾರ ಮೊದಲ ತಂಡದಲ್ಲಿ 278 ಜನರನ್ನು ಹೊತ್ತ ‘ಐಎನ್‌ಎಸ್‌ ಸುಮೇಧ’ ನೌಕೆಯು ಮಂಗಳವಾರ ಪೋರ್ಟ್‌ ಸುಡಾನ್‌ನಿಂದ ಸೌದಿ ಅರೇಬಿಯಾದ ಜೆಡ್ಡಾದತ್ತ ಹೊರಟಿತ್ತು. ಮತ್ತೊಂದೆಡೆ ವಾಯುಪಡೆಯ C130J ವಿಮಾನದ ಮೂಲಕ 250 ಮಂದಿ ಭಾರತೀಯರನ್ನು ರಕ್ಷಿಸಲಾಗಿದೆ.

ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ ಮಾಹಿತಿ ನೀಡಿದ್ದು, ಮೊದಲ ಸಿ-130ಜೆ ವಿಮಾನವು 121 ಮಂದಿ ಮತ್ತು ಎರಡನೇ ವಿಮಾನದ ಮೂಲಕ 135 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಟ್ವೀಟ್‌ ಮಾಡಿ ತಿಳಿಸಿದ್ದಾರೆ.
ಸಂಘರ್ಷ ಪೀಡಿತ ಸುಡಾನ್‌ನಲ್ಲಿ ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರವು, ಸುಡಾನ್ ಆಡಳಿತ ಹಾಗೂ ಭಾರತೀಯ ರಾಯಭಾರ ಕಚೇರಿ ಹೊರತಾಗಿ ಸ್ನೇಹಪರ ರಾಷ್ಟ್ರಗಳಾದ ಅಮೆರಿಕ, ಸೌದಿ ಅರೇಬಿಯಾ, ಯುಇಎ, ಈಜಿಪ್ಟ್ ಹಾಗೂ ವಿಶ್ವಸಂಸ್ಥೆಯ ಜೊತೆ ನಿರಂತರ ಸಂಪರ್ಕದಲ್ಲಿದೆ. ಹಾಗೂ ಸುಡಾನ್‌ನಲ್ಲಿರುವ ಸುಮಾರು 4000 ಜನರ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಸಿಕೊಂಡಿದೆ.

ಪ್ರಮುಖ ಸುದ್ದಿ :-   ಸರಿಯಾಗಿ ಅಡುಗೆ ಮಾಡಲಿಲ್ಲ ಎಂಬ ಕಾರಣಕ್ಕೆ ಅಜ್ಜಿಗೆ ಬರ್ಬರವಾಗಿ ಥಳಿಸಿದ ಮೊಮ್ಮಗ-ಆತನ ಪತ್ನಿ : ವೀಡಿಯೊ ವೈರಲ್‌, ಇಬ್ಬರ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement