ಫೆಮಾ ಉಲ್ಲಂಘನೆ ಆರೋಪ: ಬೈಜು ಕಚೇರಿಗಳ ಮೇಲೆ ಇ.ಡಿ. ದಾಳಿ, ಹಲವಾರು ದಾಖಲೆಗಳು ವಶಕ್ಕೆ

ನವದೆಹಲಿ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (ಫೆಮಾ) ನಿಬಂಧನೆಗಳ ಅಡಿಯಲ್ಲಿ ರವೀಂದ್ರನ್ ಬೈಜು ಮತ್ತು ಅವರ ಕಂಪನಿ ‘ಥಿಂಕ್ & ಲರ್ನ್ ಪ್ರೈವೇಟ್ ಲಿಮಿಟೆಡ್’ ವಿರುದ್ಧ ದಾಖಲಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಕರ್ನಾಟಕದ ಬೆಂಗಳೂರಿನ ಮೂರು ನಿವೇಶನಗಳಲ್ಲಿ ಶೋಧ ನಡೆಸಿದೆ.
ಕಂಪನಿಯು ಬೈಜುʼಸ್ ಹೆಸರಿನಲ್ಲಿ ಜನಪ್ರಿಯ ಆನ್‌ಲೈನ್ ಶಿಕ್ಷಣ ಪೋರ್ಟಲ್ ಅನ್ನು ನಡೆಸುತ್ತಿದೆ. ಇ.ಡಿ.ಶೋಧ ಕಾರ್ಯಾಚರಣೆ ವೇಳೆ ವಿವಿಧ ದೋಷಾರೋಪಣೆಯ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2011 ರಿಂದ 2023 ರ ಅವಧಿಯಲ್ಲಿ ಕಂಪನಿಯು 28,000 ಕೋಟಿ ರೂಪಾಯಿಗಳ ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದೆ ಎಂದು ಫೆಮಾ (FEMA) ಶೋಧಗಳು ಬಹಿರಂಗಪಡಿಸಿವೆ. ಇದೇ ಅವಧಿಯಲ್ಲಿ ಕಂಪನಿಯು ಸಾಗರೋತ್ತರ ನೇರ ಹೂಡಿಕೆಯ ಹೆಸರಿನಲ್ಲಿ ವಿವಿಧ ವಿದೇಶಿ ಸಂಸ್ಥೆಗಳಿಗೆ ಸುಮಾರು ₹ 9,754 ಕೋಟಿಗಳನ್ನು ಕಳುಹಿಸಿದೆ ಎಂದು ಇ.ಡಿ. ಹೇಳಿದೆ.

ಅಧಿಕಾರಿಗಳ ಪ್ರಕಾರ, ಕಂಪನಿಯು ವಿದೇಶಿ ನ್ಯಾಯವ್ಯಾಪ್ತಿಗೆ ರವಾನೆಯಾದ ಮೊತ್ತ ಸೇರಿದಂತೆ ಜಾಹೀರಾತು ಮತ್ತು ಮಾರುಕಟ್ಟೆ ವೆಚ್ಚಗಳ ಹೆಸರಿನಲ್ಲಿ ಸುಮಾರು 944 ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. 2020-21ರ ಹಣಕಾಸು ವರ್ಷದಿಂದ ಕಂಪನಿಯು ತನ್ನ ಹಣಕಾಸು ಹೇಳಿಕೆಗಳನ್ನು ಸಿದ್ಧಪಡಿಸಿಲ್ಲ ಮತ್ತು ಕಡ್ಡಾಯವಾಗಿರುವ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಿಸಿಲ್ಲ ಎಂದು ಆರೋಪಿಸಲಾಗಿದೆ.ಆದ್ದರಿಂದ, ಕಂಪನಿಯು ಒದಗಿಸಿದ ಅಂಕಿಅಂಶಗಳ ನೈಜತೆಯನ್ನು ಬ್ಯಾಂಕ್‌ಗಳಿಂದ ಅಡ್ಡ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ” ಎಂದು ಅದು ಹೇಳಿದೆ.
ವಿವಿಧ ಖಾಸಗಿ ವ್ಯಕ್ತಿಗಳಿಂದ ಬಂದ ವಿವಿಧ ದೂರುಗಳ ಆಧಾರದ ಮೇಲೆ ಬೈಜುʼಸ ವಿರುದ್ಧ ತನಿಖೆಯನ್ನು ಪ್ರಾರಂಭಿಸಲಾಯಿತು. ಇ.ಡಿ. ನಡೆಸಿದ ತನಿಖೆಯ ಸಮಯದಲ್ಲಿ, ಸಂಸ್ಥಾಪಕ ಮತ್ತು ಸಿಇಒ ರವೀಂದ್ರನ್ ಬೈಜು ಅವರಿಗೆ ಹಲವಾರು ಸಮನ್ಸ್ ನೀಡಲಾಯಿತು, ಆದಾಗ್ಯೂ, ಅವರು ಯಾವಾಗಲೂ ತಪ್ಪಿಸಿಕೊಳ್ಳುತ್ತಿದ್ದರು ಮತ್ತು ತನಿಖೆಯ ಸಮಯದಲ್ಲಿ ಎಂದಿಗೂ ಕಾಣಿಸಿಕೊಂಡಿಲ್ಲ.

ಪ್ರಮುಖ ಸುದ್ದಿ :-   ಉಗ್ರರ ದಾಳಿಯಲ್ಲಿ ಓರ್ವ ವಾಯುಪಡೆ ಸಿಬ್ಬಂದಿ ಹುತಾತ್ಮ, 5 ಮಂದಿಗೆ ಗಾಯ

ಬೈಜು ಅವರ ಕಾನೂನು ತಂಡದ ವಕ್ತಾರರು ಇ.ಡಿ. ಶೋಧ ಕಾರ್ಯಾಚರಣೆಯ ನಂತರ ಹೇಳಿಕೆಯನ್ನು ನೀಡಿದ್ದು, ಇದನ್ನು “ಫೆಮಾ ಅಡಿಯಲ್ಲಿ ವಾಡಿಕೆಯ ವಿಚಾರಣೆ” ಎಂದು ಹೇಳಿದ್ದಾರೆ.“ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಇತ್ತೀಚೆಗೆ ನೀಡಿದ ಭೇಟಿ ಫೆಮಾ ಅಡಿಯಲ್ಲಿ ವಾಡಿಕೆಯ ವಿಚಾರಣೆಗೆ ಸಂಬಂಧಿಸಿದೆ. ನಾವು ಅಧಿಕಾರಿಗಳೊಂದಿಗೆ ಸಂಪೂರ್ಣವಾಗಿ ಪಾರದರ್ಶಕವಾಗಿದ್ದೇವೆ ಮತ್ತು ಅವರು ಕೇಳಿದ ಎಲ್ಲಾ ಮಾಹಿತಿಯನ್ನು ಅವರಿಗೆ ಒದಗಿಸಿದ್ದೇವೆ. ನಾವು ಅನುಸರಣೆ ಮತ್ತು ನೈತಿಕತೆಯ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯಲು ಬದ್ಧರಾಗಿದ್ದೇವೆ ಎಂದು ಬೈಜು ಅವರ ಕಾನೂನು ತಂಡದ ವಕ್ತಾರರು ಹೇಳಿದ್ದಾರೆ.

ಇ.ಡಿ.ಗೆ ಅಗತ್ಯವಿರುವ ಎಲ್ಲಾ ಮಾಹಿತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ನಾವು ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ ಮತ್ತು ಈ ವಿಷಯವನ್ನು ಸಮಯೋಚಿತ ಮತ್ತು ತೃಪ್ತಿಕರ ರೀತಿಯಲ್ಲಿ ಪರಿಹರಿಸಲಾಗುವುದು ಎಂದು ನಾವು ನಂಬುತ್ತೇವೆ. ಬೈಜುʼಸ್‌ (BYJU’S)ನಲ್ಲಿ ಇದು ಎಂದಿನಂತೆ ವ್ಯವಹಾರವಾಗಿದೆ ಎಂದು ನಾವು ಒತ್ತಿ ಹೇಳಲು ಬಯಸುತ್ತೇವೆ. ಭಾರತ ಮತ್ತು ಪ್ರಪಂಚದಾದ್ಯಂತ ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಶೈಕ್ಷಣಿಕ ಉತ್ಪನ್ನಗಳು ಮತ್ತು ಸೇವೆಗಳನ್ನು ತಲುಪಿಸಲು ನಾವು ಬದ್ಧರಾಗಿದ್ದೇವೆ. ವಿದ್ಯಾರ್ಥಿಗಳು ಕಲಿಯುವ ಮತ್ತು ಅವರ ಭವಿಷ್ಯಕ್ಕಾಗಿ ತಯಾರಿ ಮಾಡುವ ವಿಧಾನವನ್ನು ಪರಿವರ್ತಿಸುವ ನಮ್ಮ ಉದ್ದೇಶದ ಮೇಲೆ ನಾವು ಗಮನಹರಿಸಿದ್ದೇವೆ ಎಂದು ವಕ್ತಾರರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪೇಟಿಎಂ ಸಿಇಒ ಸ್ಥಾನಕ್ಕೆ ಭವೇಶ ಗುಪ್ತಾ ದಿಢೀರ್‌ ರಾಜೀನಾಮೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement