ಕಣ್ಮರೆಯಾಗುತ್ತಿರುವ ಶನಿಗ್ರಹದ ವಿಶಿಷ್ಟ ‘ಉಂಗುರ’….!

ಬಾಹ್ಯಾಕಾಶದಲ್ಲಿ ನಡೆಯುವ ಕುತೂಹಲಕಾರಿ ಸಂಗತಿ, ಅಪಾಯದ ಮುನ್ಸೂಚನೆಗಳನ್ನು ನೀಡುತ್ತಾರೆ. ಇದೀಗ ವಿಜ್ಞಾನಿಗಳು ಶನಿಗ್ರಹದ ಬಗ್ಗೆ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ.
ಶನಿ ಗ್ರಹ ತನ್ನ ವಿಶಿಷ್ಟವಾದ ಉಂಗುರಗಳಿಂದಲೇ ಹೆಸರುವಾಸಿಯಾಗಿದೆ. ಆದರೆ ಈಗ ಶನಿ ಗ್ರಹದ ಉಂಗುರ ನಿಧಾನವಾಗಿ ಕಣ್ಮರೆಯಾಗುತ್ತಿವೆ ಎಂದು ವಿಜ್ಞಾನಿಗಳು ಆತಂಕಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.ಬೃಹದಾಕಾರದ ಮಂಜುಗಡ್ಡೆಯಿಂದ ರೂಪುಗೊಂಡಿರುವ ಶನಿ ಗ್ರಹದ ಉಂಗುರಗಳು ಸವೆಯುತ್ತಿದೆ. ಆ ಉಂಗುರಗಳು ಎಷ್ಟು ಕಾಲ ಉಳಿಯಲಿವೆ ಎಂದು ಹೇಳಲಾಗದು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಶನಿ ಗ್ರಹದ ಸುತ್ತ ಸುತ್ತುತ್ತಿರುವ ಮಂಜುಗಡ್ಡೆಯ ಬ್ಲಾಕುಗಳು ಪರಸ್ಪರ ಡಿಕ್ಕಿಯಾಗುತ್ತಿವೆ. ಇದರಿಂದಾಗಿ ಶನಿ ಗ್ರಹದ ರಿಂಗ್‌ಗಳು ತೆಳ್ಳಗಾಗುತ್ತಿವೆ. ಅವುಗಳು ಎಷ್ಟು ವೇಗವಾಗಿ ಸವೆದು ಹೋಗುತ್ತಿವೆ ಎಂಬುದನ್ನು ತಿಳಿದುಕೊಳ್ಳಲು ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ. ಈ ಬೆಳವಣಿಗೆಯು ನಮ್ಮೆಲ್ಲರನ್ನೂ ಅಚ್ಚರಿಗೆ ನೂಕಿದೆ ಎಂದು ಶನಿಗ್ರಹದ ಕಣ್ಮರೆಯಾಗುತ್ತಿರುವ ಉಂಗುರಗಳ ಬಗ್ಗೆ ಅಧ್ಯಯನ ನಡೆಸುತ್ತಿರುವ ಸಂಶೋಧಕರ ತಂಡದ ಮುಖ್ಯಸ್ಥ ಡಾ.ಜೇಮ್ಸ್‌ ಓ ಡೊನೊಗ್‌ ಹೇಳಿದ್ದಾರೆ.
ಶನಿ ಗ್ರಹವು ಭೂಮಿಗಿಂತ 9 ಪಟ್ಟು ದೊಡ್ಡ ಗ್ರಹ. ಉಂಗುರಗಳು ಆರಂಭದಿಂದಲೂ ಶನಿ ಗ್ರಹದೊಂದಿಗೆ ಇವೆ ಎಂದೇ ಅನೇಕರು ನಂಬಿದ್ದಾರೆ. ಆದರೆ, ಕೇವಲ 100 ದಶಲಕ್ಷ ವರ್ಷಗಳಷ್ಟು ಹಿಂದೆ ಶನಿ ಗ್ರಹದ ಉಂಗುರಗಳು ರೂಪುಗೊಂಡಿವೆ ವಿಜ್ಞಾನಿಗಳು ಅಂದಾಜಿಸಿದ್ದಾರೆ ಎಂದು ಜೇಮ್ಸ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   'ಅಕ್ರಮ' ಐಪಿಎಲ್ ಸ್ಟ್ರೀಮಿಂಗ್ ಪ್ರಕರಣ : ಮಹಾರಾಷ್ಟ್ರ ಸೈಬರ್ ಪೊಲೀಸರಿಂದ ನಟಿ ತಮನ್ನಾ ಭಾಟಿಯಾಗೆ ಸಮನ್ಸ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement