ಈ ಹಿಂದಿನ ಚುನಾವಣೋತ್ತರ ಸಮೀಕ್ಷೆಗಳೆಲ್ಲ ಏನಾಗಿದ್ದವು..? ಕರ್ನಾಟಕದಲ್ಲಿ 31 ಸಾವಿರ ಬೂತ್‌ಗಳಲ್ಲಿ ಬಿಜೆಪಿಗೆ ಮುನ್ನಡೆ : ಬಿ.ಎಲ್. ಸಂತೋಷ ಟ್ವೀಟ್‌

ಬೆಂಗಳೂರು : ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣಾ ಮತದಾನ ಮುಕ್ತಾಯವಾಗಿದ್ದು, ಅದರ ನಂತರ ಪ್ರಕಟವಾದ ಮತದಾನೋತ್ತರ ಸಮೀಕ್ಷಾ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ ಈ ಹಿಂದಿನ ಎಕ್ಸಿಟ್ ಪೋಲ್ ಸಮೀಕ್ಷೆಗಳೆಲ್ಲ ಉಲ್ಟಾ ಪಲ್ಟಾ ಆಗಿದ್ದವು ಎಂದು ಹೇಳಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶನಿವಾರ (ಮೇ 13) ನಡೆಯಲಿದೆ. ಈ ನಡುವೆ ಹಲವು ಎಕ್ಸಿಟ್‌ ಪೋಲ್‌ಗಳು ಕಾಂಗ್ರೆಸ್‌ಗೆ ಹೆಚ್ಚಿ ಸ್ಥಾನಗಳನ್ನು ನೀಡಿದ್ದರೂ ಅತಂತ್ರ ವಿಧಾನಸಭೆಯತ್ತ ಬೊಟ್ಟು ಮಾಡಿವೆ. ಕೆಲವು ಕಾಂಗ್ರೆಸ್‌ಗೆ ಸರಳ ಬಹುಮತ ಸಿಗಬಹುದು ಎಂದು ಹೇಳಿವೆ. ಕೆಲವು ಎಕ್ಸಿಟ್‌ ಪೋಲ್‌ಗಳು ಬಿಜೆಪಿಗೆ ಸರಳ ಬಹುಮತ ಸಿಗಬಹುದು ಎಂದು ಹೇಳಿವೆ. ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಈ ಸಮೀಕ್ಷೆಗಳನ್ನು ತಿರಸ್ಕರಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯರ್ಶಿ ಬಿ ಎಲ್ ಸಂತೋಷ ಟ್ವಿಟರಿನಲ್ಲಿ ‘31000 ಬೂತ್‌ಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಹೇಳಿದ್ದಾರೆ.
ಎಲ್ಲ ಸಮೀಕ್ಷೆದಾರರಿಗೆ ಗೌರವದಿಂದ ಹೇಳಬಯಸುವುದೇನೆಂದರೆ, ಬಿಜೆಪಿಗೆ 2014ರಲ್ಲಿ (ಲೋಕಸಭೆ ಚುನಾವಣೆ) 282 ಸ್ಥಾನ, 2019ರಲ್ಲಿ 303 ಸ್ಥಾನ (ಲೋಕಸಭಾ ಚುನಾವಣೆ), 2022ರಲ್ಲಿ 156 ಸ್ಥಾನ, 2018ರಲ್ಲಿ 104 ಸ್ಥಾನ ದೊರೆಯಬಹುದು ಎಂದು ಯಾವ ಸಮೀಕ್ಷೆಯೂ ಹೇಳಿರಲಿಲ್ಲ. 2018ರಲ್ಲಿ 24,000 ಬೂತ್‌ಗಳಲ್ಲಿ ನಾವು ಮುನ್ನಡೆ ಪಡೆದಿದ್ದೆವು. ಆದರೆ, 14 ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷ ಯಾವ ಬೂತ್‌ನಲ್ಲಿಯೂ ಮುನ್ನಡೆ ಸಾಧಿಸಿರಲಿಲ್ಲ” ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಈ ಬಾರಿಯೂ ಎಲ್ಲ ವಿಧಾನಸಭಾ ಕ್ಷೇತ್ರಗಳೂ ನಮ್ಮ ಪರವಾಗಿರಲಿದ್ದು, 31,000 ಬೂತ್‌ಗಳಲ್ಲಿ ನಾವೇ ಲೀಡ್ ಪಡೆಯಲಿದ್ದೇವೆ. ಉಳಿದ ಅಂಕಿಸಂಖ್ಯೆಗಳು ನಿಮ್ಮ ಊಹೆಯಷ್ಟೇ” ಎಂದು ಹೇಳುವ ಮೂಲಕ ಚುನಾವಣೋತ್ತರ ಸಮೀಕ್ಷೆಗಳನ್ನು ಅಲ್ಲಗೆಳೆದಿದ್ದಾರೆ.

ಪ್ರಮುಖ ಸುದ್ದಿ :-   ಲೈಂಗಿಕ ದೌರ್ಜನ್ಯ ಪ್ರಕರಣ: ಮಹಿಳೆ ಅಪಹರಣ ಪ್ರಕರಣದಲ್ಲಿ ಎಚ್.ಡಿ. ರೇವಣ್ಣ ಬಂಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement