ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ : ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್‌-೪ ಬಿಜೆಪಿ-೩ರಲ್ಲಿ ಗೆಲುವು, ಅಭ್ಯರ್ಥಿಗಳ ಗೆಲುವಿನ ಅಂತರ..?

ಧಾರವಾಡ : ರಾಜ್ಯ ವಿಧಾನಸಭೆಯ ೨೨೪ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಸರ್ಕಾರ ರಚಿಸಲು ಬೇಕಿದ್ದಂತ ಮ್ಯಾಜಿಕ್ ನಂಬರ್ ಅನ್ನು ಕಾಂಗ್ರೆಸ್‌ ದಾಟಿದೆ. ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ತನ್ನ ಪ್ರಾಬಲ್ಯ ಮೆರೆದಿದೆ. ಧಾರವಾಡ ಜಿಲ್ಲೆಯಲ್ಲಿ ಕಾಂಗ್ರೆಸ್‌ ನಾಲ್ಕು ಸ್ಥಾನಗಳಲ್ಲಿ ಗೆದ್ದರೆ ಬಿಜೆಪಿ ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಬಿಜೆಪಿಯಿಂದ ಟಿಕೆಟ್‌ ನಿರಾಕರಿಸಿದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್‌ ಸೇರಿ ಟಿಕೆಟ್‌ ಪಡೆದು ಸ್ಪರ್ಧಿಸಿದ್ದ ಜಗದೀಶ ಶೆಟ್ಟರ ಭಾರೀ ಅಂತರದಿಂದ ಪರಾಭವಗೊಂಡಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಯಾರು ಗೆದ್ದರು ಹಾಗೂ ಎಷ್ಟು ಅಂತರದಿಂದ ಗೆಲವು ಸಾಧಿಸಿದರು ಎಂಬುದರ ವಿವರ ಇಲ್ಲಿದೆ.
ಹುಬ್ಬಳ್ಳಿ-ಧಾರವಾಡ ಕೇಂದ್ರ
ಮಹೇಶ ಟೆಂಗಿನಕಾಯಿ (ಬಿಜೆಪಿ): ೯೪,೪೦೮
ಜಗದೀಶ ಶೆಟ್ಟರ (ಕಾಂಗ್ರೆಸ್): ೬೦,೩೫೫
ಗೆಲುವಿನ ಅಂತರ: ೩೪,೦೫೩ ಮತಗಳು
ಹುಬ್ಬಳ್ಳಿ-ಧಾರವಾಡ ಪಶ್ಚಿಮ
ಅರವಿಂದ ಬೆಲ್ಲದ (ಬಿಜೆಪಿ): ೯೭,೫೧೬ ಮತಗಳು
ದೀಪಕ ಚಿಂಚೋರೆ (ಕಾಂಗ್ರೆಸ್): ೫೬,೭೯೬ ಮತಗಳು
ಗೆಲುವಿನ ಅಂತರ: ೪೦,೭೨೦
ಹುಬ್ಬಳ್ಳಿ-ಧಾರವಾಡ ಪೂರ್ವ
ಪ್ರಸಾದ ಅಬ್ಬಯ್ಯ (ಕಾಂಗ್ರೆಸ್): ೮೫,೪೨೬
ಡಾ. ಕ್ರಾಂತಿಕಿರಣ (ಬಿಜೆಪಿ): ೫೩,೦೫೬
ಗೆಲುವಿನ ಅಂತರ : ೩೨,೩೭೦
ಕಲಘಟಗಿ ಕ್ಷೇತ್ರ:
ಸಂತೋಷ ಲಾಡ್ (ಕಾಂಗ್ರೆಸ್)-೮೫,೭೬೧ ಮತಗಳು
ನಾಗರಾಜ ಛಬ್ಬಿ (ಬಿಜೆಪಿ): ೭೧,೪೦೪ ಮತಗಳು
ಗೆಲುವಿನ ಅಂತರ: ೧೪,೩೫೭
ಕುಂದಗೋಳ ಕ್ಷೇತ್ರ
ಎಂ.ಆರ್. ಪಾಟೀಲ (ಬಿಜೆಪಿ): ೭೫,೮೩೯ ಮತಗಳು
ಕುಸುಮಾವತಿ ಶಿವಳ್ಳಿ (ಕಾಂಗ್ರೆಸ್): ೪೦,೬೦೯ ಮತಗಳು
ಗೆಲುವಿನ ಅಂತರ: ೩೫,೨೩೦ ಮತಗಳು
ಧಾರವಾಡ ಕ್ಷೇತ್ರ
ವಿನಯ ಕುಲಕರ್ಣಿ (ಕಾಂಗ್ರೆಸ್): ೮೯,೩೩೩ ಮತಗಳು
ಅಮೃತ ದೇಸಾಯಿ (ಬಿಜೆಪಿ): ೭೧,೨೯೬ ಮತಗಳು
ಗೆಲುವಿನ ಅಂತರ: ೧೮,೦೩೭
ನವಲಗುಂದ ಕ್ಷೇತ್ರ
ಎನ್.ಎಚ್. ಕೋನರಡ್ಡಿ (ಕಾಂಗ್ರೆಸ್): ೮೫೫೩೪ ಮತಗಳು
ಶಂಕರ ಪಾಟೀಲ ಮುನೇನಕೊಪ್ಪ (ಬಿಜೆಪಿ): ೬೩,೩೬೮ ಮತಗಳು
ಗೆಲುವಿನ ಅಂತರ: ೨೨,೧೬೬

ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement