ಸಿಬಿಐ ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ ಸೂದ್‌ ನೇಮಕ

ನವದೆಹಲಿ: ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ ಸೂದ್‌ ಅವರು ಕೇಂದ್ರ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಈಗಿನ ಸಿಬಿಐ ನಿರ್ದೇಶಕ ಸುಬೋಧಕುಮಾರ ಜೈಸ್ವಾಲ್‌ ಅವರ ಎರಡು ವರ್ಷಗಳ ಅಧಿಕಾರವಧಿ ಇದೇ ತಿಂಗಳ 25ಕ್ಕೆ ಕೊನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ಅಧೀರ ರಂಜನ್‌ ಚೌಧರಿ ಅವರ ಉನ್ನತ ಮಟ್ಟದ ಸಮಿತಿ ಶನಿವಾರ (ಮೇ 13) ಸಂಜೆ ನಡೆಸಿದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ ತೀರ್ಮಾನಿಸಿದೆ.
ಪ್ರವೀಣ ಸೂದ್‌ ಅವರು 1986ನೇ ಬ್ಯಾಚ್‌ ಕರ್ನಾಟಕ ಕೇಡರ್‌ ಐಪಿಎಸ್‌ ಅಧಿಕಾರಿ. ಸಿಬಿಐ ನಿರ್ದೇಶಕರ ಹುದ್ದೆಗೆ ಸೂದ್‌ ಮುಂಚೂಣಿಯಲ್ಲಿದ್ದರು. ಉಳಿದಂತೆ ಸುಧೀರ್ ಸಕ್ಸೇನಾ (ಮಧ್ಯಪ್ರದೇಶ ಡಜಿಪಿ), ತಾಜ್ ಹಸನ್‌ ಸಿಬಿಐ ನಿರ್ದೇಶಕ ಹುದ್ದೆ ಸ್ಪರ್ಧೆಯ ಪಟ್ಟಿಯಲ್ಲಿದ್ದರು. ಅಂತಿಮವಾಗಿ ಪ್ರವೀಣ ಸೂದ್ ಅವರು ನೇಮಕಗೊಂಡಿದ್ದಾರೆ.
ಸಿಬಿಐ ನಿರ್ದೇಶಕರನ್ನು ಎರಡು ವರ್ಷದ ಅವಧಿಗೆ ನೇಮಿಸಲಾಗುತ್ತದೆ. ಅಧಿಕಾರವನ್ನು ಐದು ವರ್ಷದ ಅವಧಿಗೆ ವಿಸ್ತರಿಸಬಹುದು.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement