ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ, ನಾವು ವಿದ್ಯುತ್‌ ಬಿಲ್‌ ಕಟ್ಟಲ್ರೀ… : ಬೆಸ್ಕಾಂ ಸಿಬ್ಬಂದಿ ಮುಂದೆ ಗ್ರಾಮಸ್ಥರ ಪಟ್ಟು | ವೀಕ್ಷಿಸಿ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ 200 ಯುನಿಟ್‌ ವಿದ್ಯುತ್‌ ಉಚಿತವಾಗಿ ಕೊಡುವುದಾಗಿ ಮಾಡಿದ್ದ ಘೋಷಣೆಯನ್ನು ಜನರು ಈಗಲೇ ಕಾರ್ಯರೂಪಕ್ಕೆ ತರಲು ಹೊರಟಿರುವ ವಿದ್ಯಾಮಾನವೊಂದು ನಡೆದ ವರದಿಯಾಗಿದೆ.
ಕಾಂಗ್ರೆಸ್‌ ಪಕ್ಷಕ್ಕೆ ಬಹುಮತ ಬಂದ ಬೆನ್ನಲ್ಲೇ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಬೆಸ್ಕಾಂ ಮೀಟರ್‌ ರೀಡರ್‌ಗೆ ಗ್ರಾಮಸ್ಥರು ಹೇಳಿ ಬಿಲ್‌ ಕಟ್ಟಲು ನಿರಾಕರಿಸಿರುವ ಘಟನೆ ಚಿತ್ರದುರ್ಗ ತಾಲೂಕಿನ ಜಾಲಿಕಟ್ಟೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಗ್ರಾಮಕ್ಕೆ ಪ್ರತಿ ತಿಂಗಳಿನಂತೆ ಈ ತಿಂಗಳು ಕೂಡ ವಿದ್ಯುತ್ ಬಿಲ್ ನೀಡಲು ಬೆಸ್ಕಾಂ ಮೀಟರ್ ರೀಡರ್‌ ಆಗಮಿಸಿದ್ದರು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿದೆ. ಬಿಲ್‌ ಕಟ್ಟುವಂತಿಲ್ಲ, ಉಚಿತ ಎಂದು ಎಂದು ಹೇಳಿದ್ದಾರೆ. ಹಾಗಾಗಿ ನಾವು ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಅಲ್ಲಿ ಕೆಲವರು ಹೇಳಿದ್ದಾರೆ. ಅಲ್ಲದೆ, ಮೀಟರ್ ರೀಡಿಂಗ್ ಬರೆಯಬೇಡ ಎಂದು ಗ್ರಾಮಸ್ಥರು ಆತನಿಗೆ ಹೇಳಿದ್ದಾರೆ.

ಈ ವೇಳೆ ಮೀಟರ್‌ ರೀಡರ್‌, ಆದೇಶ ಬರುವವರೆಗೆ ಬಿಲ್‌ ಪಾವತಿಸಬೇಕಾಗುತ್ತದೆ ಎಂದು ಅವರಿಗೆ ಹೇಳಿದ್ದಾನೆ. ಆದರೂ ನಾವು ಬಿಲ್‌ ಪಾವತಿಸುವುದಿಲ್ಲ. ವಿದ್ಯುತ್‌ ಬಿಲ್‌ ಆದೇಶದ ಬಗ್ಗೆ ಕಾಂಗ್ರೆಸ್‌ನವರಿಗೆ ಕೇಳಿ ಎಂದು ಗ್ರಾಮಸ್ಥರು ಆತನಿಗೆ ಹೇಳಿದ್ದಾರೆ. ಅಷ್ಟೇ ಅಲ್ಲದೇ ಬೆಸ್ಕಾಂ ಸಿಬ್ಬಂದಿ ಅವರ ಮನವೊಲಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮದಲ್ಲಿ ಈ ತಿಂಗಳಿನಿಂದ ವಿದ್ಯುತ್‌ ಬಿಲ್‌ ಪಾವತಿಸುವುದುಲ್ಲ ಎಂದು ಹೇಳಿದ್ದು, ಬಿಲ್‌ ಕಲೆಕ್ಟರ್‌ ಸ್ಥಳದಿಂದ ವಾಪಸ್ ಆಗಿದ್ದಾರೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂಧಿರುವ ಕಾಂಗ್ರೆಸ್‌ ಉಚಿತ ವಿದ್ಯುತ್‌ ಯೋಜನೆಯನ್ನು ಇನ್ನಷ್ಟೇ ಜಾರಿಗೊಳಿಸಬೇಕಿದೆ. ಆದರೆ ಜನ ಯೋಜನೆ ಜಾರಿಯಾಗುವುದಕ್ಕಿಂತ ಈಗಲೇ ವಿದ್ಯುತ್‌ ಬಿಲ್‌ ಕಟ್ಟಲು ನಿರಾಕರಿಸುತ್ತಿದ್ದಾರೆ.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ​ 200 ಯೂನಿಟ್ ಉಚಿತ ವಿದ್ಯುತ್ ಉಚಿತ ಎಂದು ಘೋಷಣೆ ಮಾಡಿತ್ತು. ಪ್ರಣಾಳಿಕೆಯಲ್ಲೂ ಸಹ ಇದನ್ನು ಉಲ್ಲೇಖಿಸಿತ್ತು. ಅಲ್ಲದೇ ಈ ಬಗ್ಗೆ ಗ್ಯಾರಂಟಿ ಕಾರ್ಡ್ ಅನ್ನು ಮನೆ-ಮನೆ ಹಂಚಿದ್ದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

2 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement