ಧಾರವಾಡ: ಐಟಿಐ ಉತ್ತೀರ್ಣರಾದವರಿಗೆ ಕ್ಯಾಂಪಸ್ ಸಂದರ್ಶನ

ಧಾರವಾಡ: ಧಾರವಾಡದ ವಿದ್ಯಾಗಿರಿಯ ಜೆ.ಎಸ್.ಎಸ್ ಮಂಜುನಾಥೇಶ್ವರ ಐ.ಟಿ.ಐ ಕಾಲೇಜಿನಲ್ಲಿ ಬೇಲೂರಿನ ಮಾಡೆಲ್ ಇನ್‌ಫ್ರಾ ಕಾರ್ಪೋರೇಶನ್ ಪ್ರೈ.ಲಿ ನವರು ಮೇ 23ರಂದು ಕ್ಯಾಂಪಸ್‌ ಸಂದರ್ಶನ ನಡೆಸಲಿದ್ದಾರೆ. ಐ.ಟಿ.ಐ ವೆಲ್ಡರ್, ಫಿಟ್ಟರ್, ಗ್ರೈಂಡರ್‌, ಮಶಿನಿಸ್ಟ್‌ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯುತ್ತಮ ವೇತನದೊಂದಿಗೆ ಇ.ಎಸ್.ಐ, ಫಿ.ಎಫ್ ಹಾಗೂ ಊಟದ ಸೌಲಭ್ಯವನ್ನು ಸಹ ಕಂಪನಿಯವರು ನೀಡಲಿದ್ದು, ಆಸಕ್ತರು ಮೇ 22ರ ಒಳಗಾಗಿ ತಮ್ಮ ಹೆಸರುಗಳನ್ನು 0836-2462202ಗೆ ಕರೆ ಮಾಡಿ ನೋಂದಾಯಿಸಿಕೊಳ್ಳಲು ಜೆ.ಎಸ್.ಎಸ್ ಐ.ಟಿ.ಐ ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ ವೇಳೆ ಬಿಜೆಪಿಗೆ ಶಾಕ್ : ಪರಿಷತ್‌ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ

ನಿಮ್ಮ ಕಾಮೆಂಟ್ ಬರೆಯಿರಿ

advertisement