ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರವನ್ನು ₹83.50 ರೂಪಾಯಿ ಇಳಿಕೆ ಮಾಡಿದೆ. ಪರಿಷ್ಕೃತ ದರ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಹೊಸ ಬೆಲೆಗಳು ಜೂನ್ 1ರಿಂದ ಅನ್ವಯವಾಗಲಿದೆ ಎಂದು ಹೇಳಿದೆ. ಅಡುಗೆ ಅನಿಲ ದರ ಯಥಾಸ್ಥಿತಿಯಲ್ಲಿದೆ. ಸಿಲಿಂಡರ್ ಬೆಲೆ ದರ ಕಡಿತದ ನಂತರ, 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ ₹1,856.50ರೂ.ಗಳಿಂದ ₹1,773 ರೂ.ಗಳಿಗೆ ಇಳಿಕೆಯಾಗಿದೆ. ಅದೇ ರೀತಿ, ಕೋಲ್ಕತ್ತಾದಲ್ಲಿ ₹1875.50, ರೂಪಾಯಿ, ಮುಂಬೈನಲ್ಲಿ ₹1725, ಚೆನ್ನೈನಲ್ಲಿ ₹1937ಗೆ ಇಳಿಕೆಯಾಗಿದೆ. ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ವಾಣಿಜ್ಯ ಮತ್ತು ಗೃಹಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಿಸಲಾಗುತ್ತದೆ.
ತೈಲ ಮಾರುಕಟ್ಟೆ ಕಂಪನಿಗಳು ಮೇ ತಿಂಗಳಲ್ಲಿ ದೇಶೀಯ ಎಲ್‌ಪಿಜಿ ಬೆಲೆಯನ್ನು ಕೊನೆಯದಾಗಿ ಬದಲಾಯಿಸಿದ್ದವು. ಪ್ರಸ್ತುತ, ನವದೆಹಲಿಯಲ್ಲಿ ಗೃಹಬಳಕೆಯ ಅಡುಗೆ ಅನಿಲದ ಬೆಲೆ 14.2 ಕೆಜಿ ಸಿಲಿಂಡರ್‌ಗೆ ₹1,003 ಇದೆ. ಕೋಲ್ಕತ್ತಾ, ಮುಂಬೈ ಮತ್ತು ಚೆನ್ನೈನಲ್ಲಿ ದರಗಳು ಕ್ರಮವಾಗಿ ₹1,029, ₹1,002.5 ಮತ್ತು ₹1,018.5 ಗಳಾಗಿವೆ.
ನಿಮ್ಮ ಕಾಮೆಂಟ್ ಬರೆಯಿರಿ