ಸಮಯಕ್ಕೆ ಸರಿಯಾಗಿ ಬಾರದ ಡಿಸಿಎಂ ಶಿವಕುಮಾರ: ಸಭೆಯಿಂದ ನಿರ್ಗಮಿಸಿದ ಐವರು ಬಿಜೆಪಿ ಶಾಸಕರು

ಬೆಂಗಳೂರು: ಬೆಂಗಳೂರಿನಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ವಿಚಾರವಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ನೇತೃತ್ವದಲ್ಲಿ ಕರೆದಿದ್ದ ಸರ್ವ ಪಕ್ಷಗಳ ಸಭೆಯಿಂದ ಕೆಲ ಬಿಜೆಪಿ ಶಾಸಕರು ಹೊರನಡೆದಿದ್ದಾರೆ.
ಸೋಮವಾರ 11 ಗಂಟೆಗೆ ವಿಧಾನಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಈ ಸಭೆಗೆ ಬಿಜೆಪಿ ಶಾಸಕರು ಆಗಮಿಸಿದ್ದರು, ಮಾಜಿ ಸಚಿವ ಅಶ್ವತ್ಥ ನಾರಾಯಣ, ಬೈರತಿ ಬಸವರಾಜು, ಎಸ್ ಟಿ ಸೋಮಶೇಖರ, ಮುನಿರತ್ನ, ಎಸ್ ಆರ್ ವಿಶ್ವನಾಥ ಸೇರಿದಂತೆ ಬಿಜೆಪಿ ಶಾಸಕರು ಆಗಮಿಸಿದ್ದರು. ಆದರೆ 11 ಗಂಟೆಗೆ ಶುರುವಾಗಬೇಕಾದ ಸಭೆಗೆ ಸಮಯಕ್ಕೆ ಸರಿಯಾಗಿ ಡಿ.ಕೆ. ಶಿವಕುಮಾರ ಆಗಮಿಸಲಿಲ್ಲ. ಅವರು ಒಂದು ಗಂಟೆ ತಡವಾಗಿ ಆಗಮಿಸಿದರು‌. ಉಪಮುಖ್ಯಮಂತ್ರಿ ಶಿವಕುಮಾರ ನಡವಳಿಕೆಗೆ ಅಸಮಾಧಾನಗೊಂಡ ಅಶ್ವತ್ಥ ನಾರಾಯಣ, ಬೈರತಿ ಬಸವರಾಜು, ಎಸ್ ಟಿ ಸೋಮಶೇಖರ, ಮುನಿರತ್ನ, ಎಸ್ ಆರ್ ವಿಶ್ವನಾಥ ಸಭೆ ಆರಂಭಕ್ಕೂ ಮೊದಲೇ ಹೊರನಡೆದರು.
ಸಭೆ ವಿಳಂಬವಾದ ಕಾರಣಕ್ಕಾಗಿ ಸಭೆ ಆರಂಭಕ್ಕೂ ಮೊದಲು ಹೊರ ನಡೆದ ಬಿಜೆಪಿ ಶಾಸಕರ ಮನವೊಲಿಕೆ ಮಾಡಲು ಸಚಿವ ಜಮೀರ್ ಅಹ್ಮದ್ ಯತ್ನಿಸಿದರು‌. ಅವರ ಹಿಂದೆಯೇ ಹೋಗಿ ಅವರನ್ನು ಸಭೆಗೆ ಕರೆದರು. ಆದರೆ ಶಾಸಕರು ಹೊರ ನಡೆದರು. ಸಭೆಯಿಂದ ಹೊರ ನಡೆಯುತ್ತಿದ್ದ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ ಸಭೆಗೆ ಆಗಮಿಸಿದರು.

ಪ್ರಮುಖ ಸುದ್ದಿ :-   ಬೆಳಗಾವಿ| ಕಬ್ಬು ದರ ನಿಗದಿ ; ಸಿಎಂ ಸಭೆಗೂ ಮುನ್ನ ಕೈಕೈ ಮಿಲಾಯಿಸಿದ ಇಬ್ಬರು ರೈತ ನಾಯಕರ ಬೆಂಬಲಿಗರು

ಬಳಿಕ ಮಾತನಾಡಿದ ಮಾಜಿ ಸಚಿವ ಅಶ್ವತ್ಥ ನಾರಾಯಣ, ಬೆಂಗಳೂರಲ್ಲಿ ಮಳೆ ಹಾಗೂ ಪ್ರವಾಹ ನಿರ್ವಹಣೆ ಸಲುವಾಗಿ ಸಭೆ ಕರೆಯಲಾಗಿತ್ತು. ನಮಗೆ ಸಭೆಗೆ ಕರೆದು ಒಂದು ಗಂಟೆಯಿಂದ ಡಿ.ಕೆ ಶಿವಕುಮಾರ ಕಾಯಿಸಿದ್ದಾರೆ. ಸಭೆಗೆ ತಡವಾಗಿ ಆಗಮಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆದರೆ ತಡವಾಗಿ ಆಗಮಿಸುವ ಬಗ್ಗೆ ಮಾಹಿತಿ ನೀಡಿರಲಿಲ್ಲ. ನಿನ್ನೆ ಸಂಜೆ ವಾಟ್ಸಪ್ ಮೂಲಕ ಸಭೆಗೆ ಆಹ್ವಾನ ನೀಡಿದ್ದಾರೆ. ಈ ಮೂಲಕ ಉದ್ದೇಶಪೂರ್ವಕವಾಗಿ ಅವರ ನಡುವಳಿಕೆ ಪ್ರದರ್ಶಿಸಿದ್ದಾರೆ. ಹೀಗಾಗಿ ಸಭೆಯಿಂದ ನಿರ್ಗಮಿಸುತ್ತಿದ್ದೇವೆ ಎಂದರು.
ಸಭೆಯಲ್ಲಿ ಬೆಂಗಳೂರು ನಗರದ ಎಲ್ಲ ಶಾಸಕರು, ಸಂಸದರು, ವಿಧಾನ ಪರಿಷತ್‌ ಸಭೆಯಲ್ಲಿ ಸಚಿವರಾದ ಕೆ ಜೆ ಜಾರ್ಜ್, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಜಮೀರ್ ಅಹ್ಮದ್, ಸಂಸದರಾದ ಡಿ ಕೆ ಸುರೇಶ, ತೇಜಸ್ವಿ ಸೂರ್ಯ, ಪಿ.ಸಿ. ಮೋಹನ, ರಾಜ್ಯಸಭೆ ಸದಸ್ಯರಾದ ಜಿ.ಸಿ. ಚಂದ್ರಶೇಖರ, ಶಾಸಕರಾದ ರಿಜ್ವಾನ್ ಅರ್ಶದ್, ಎ ಸಿ ಶ್ರೀನಿವಾಸ, ಎ ಕೃಷ್ಣಪ್ಪ, ರವಿ ಸುಬ್ರಮಣ್ಯ, ಟಿ ಎ ಶರವಣ, ಗೋಪಾಲಯ್ಯ, ಗರುಡಾಚಾರ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜ್, ನಜೀರ್ ಅಹ್ಮದ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಮುಖ ಸುದ್ದಿ :-   ಜೋಗಿ, ಕಬ್ಬಿನಾಲೆ, ಶಿವಾನಂದ ಹೆಗಡೆಗೆ ಕೆರೆಮನೆ ʼಮಹಾಬಲ ಪ್ರಶಸ್ತಿʼ ಪ್ರಕಟ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement