ಕುಮಟಾ : ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ; ಮರುಮೌಲ್ಯಮಾಪನದ ನಂತರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಅದಿತಿ ವೈದ್ಯ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಕೊಂಕಣ ವಿದ್ಯಾಕೇಂದ್ರದ ವಿದ್ಯಾರ್ಥಿನಿ ಅದಿತಿ ಪ್ರಕಾಶ ವೈದ್ಯ ಎಸ್ ಎಸ್ ಎಲ್ ಸಿ ಯಲ್ಲಿ ಮರು ಮೌಲ್ಯಮಾಪನದಲ್ಲಿ ಇಂಗ್ಲಿಷ್ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈ ಹಿಂದೆ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಇಂಗ್ಲಿಷ್‌ ವಿಷಯದಲ್ಲಿ ಮಾತ್ರ 97 ಅಂಕಗಳು ಬಂದಿತ್ತು. ಉಳಿದ ವಿಷಯ ದಲ್ಲಿ 100 ಕ್ಕೆ ನೂರು ಅಂಕಗಳು ಬಂದಿದ್ದವು. ಮರು ಮೌಲ್ಯ ಮಾಪನದಲ್ಲಿ ಇಂಗ್ಲಿಷ್ ವಿಷಯದಲ್ಲಿ ಯೂ 100 ಅಂಕ ಪಡೆದ ನಂತರ ಒಟ್ಟು 625ಕ್ಕೆ 625 ಅಂಕಗಳನ್ನು ಪಡೆದಿದ್ದಾಳೆ.
ಅತ್ಯಂತ ಹಿಂದುಳಿದ ಹಾಗೂ ದೂರದ ಹಳ್ಳಿಯಿಂದ ಕೊಂಕಣ ಹೈಸ್ಕೂಲಿಗೆ ಬಂದು ಸಾಧನೆ ಮಾಡಿದ್ದಾಳೆ. ಹೊನ್ನಾವರ ತಾಲೂಕಿನ ನವಿಲಗೋಣ ಭೂಮುಕೋಡ್ಲು ಹಳ್ಳಿಯಿಂದ ಪ್ರತಿನಿತ್ಯ ಕಾಡಿನ ದಾರಿಯಲ್ಲಿ 2 ಕಿಮೀ ನಡೆದು ನಂತರ ಸುಮಾರು 15 ಕಿಮೀ ಬಸ್ಸಲ್ಲಿ ಬಂದು ಕಲಿಕೆಯಲ್ಲಿ ಸಾಧನೆ ಮಾಡಿದ್ದಾಳೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement