ಕ್ರೆಡಾಯ್ ರಾಜ್ಯಾಧ್ಯಕ್ಷರಾಗಿ ಹುಬ್ಬಳ್ಳಿ ಉದ್ಯಮಿ ಪ್ರದೀಪ ರಾಯ್ಕರ ಆಯ್ಕೆ

ಹುಬ್ಬಳ್ಳಿ: ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (CREDAI) ರಾಜ್ಯ ಘಟಕದ ಅಧ್ಯಕ್ಷರಾಗಿ ಹುಬ್ಬಳ್ಳಿಯ ರಾಟ್ಸನ್ ಕನ್ಸ್ಟ್ರಕ್ಷನ್ ಕಂಪನಿಯ ಮಾಲಕರಾದ ಪ್ರದೀಪ ರಾಯ್ಕರ ಅವರು ಆಯ್ಕೆಯಾಗಿದ್ದಾರೆ.
ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಹುಬ್ಬಳ್ಳಿಯ ಡೆನ್ನಿಸನ್ಸ್ ಹೋಟೆಲ್‌ನಲ್ಲಿ ಜೂನ್‌ 10ರಂದು ಸಂಜೆ 6ಗಂಟೆಗೆ ನಡೆಯಲಿದೆ, ಮೊಟ್ಟ ಮೊದಲ ಬಾರಿಗೆ ಬೆಂಗಳೂರಿನ ಹೊರಗಿನವರು ಕ್ರೆಡಾಯ್‌ ಅಧ್ಯಕ್ಷ ಸ್ಥಾನ ಅಲಂಕರಿಸುತ್ತಿದ್ದು, ಏರುತ್ತಿದ್ದು, ಸಮಾರಂಭದಲ್ಲಿ ಕ್ರೆಡಾಯ್‌ ನಿಕಟಪೂರ್ವ ರಾಜ್ಯಾಧ್ಯಕ್ಷ ಚೈತನ್ಯ ಕುಲಕರ್ಣಿ ಅವರು ರಾಯ್ಕರ ಅವರಿಗೆ ಅಧಿಕಾರ ಹಸ್ತಾಂತರ ಮಾಡಲಿದ್ದಾರೆ.
ಕ್ರೆಡಾಯ್ (CREDAI) ಭಾರತದ ಖಾಸಗಿ ರಿಯಲ್ ಎಸ್ಟೇಟ್ ಡೆವಲಪರ್‌ಗಳ ಉನ್ನತ ಸಂಸ್ಥೆಯಾಗಿದ್ದು, ಇದು ದೇಶದ 21 ರಾಜ್ಯಗಳಲ್ಲಿ 217 ನಗರಗಳ 13000ಕ್ಕೂ ಹೆಚ್ಚು ಡೆವಲಪರ್‌ಗಳನ್ನು ಪ್ರತಿನಿಧಿಸುತ್ತದೆ
ಇದೇ ವೇಳೆ ಹುಬ್ಬಳ್ಳಿ ಕ್ರೆಡಾಯ್‌ ಅಧ್ಯಕ್ಷರಾಗಿ ಆಯ್ಕೆಯಾದ ಸಂಜಯ ಕೊಠಾರಿ ಸಹ ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಕ್ರೆಡಾಯ್‌ ನಿಕಟಪೂರ್ವ ರಾಷ್ಟ್ರೀಯ ಅಧ್ಯಕ್ಷ ಇರ್ಫಾನ್ ರಜಾಕ್, ಸುನಿಲ್ ಮಂತ್ರಿ, ರಮಣಿ ಶಾಸ್ತ್ರೀ, ಶ್ರೀಧರನ್ ಸ್ವಾಮಿನಾಥನ್ ಸೇರಿದಂತೆ ರಿಯಲ್ ಎಸ್ಟೇಟ್ ಕ್ಷೇತ್ರದ ಪ್ರಮುಖರು ಉಪಸ್ಥಿತರಿರುವರು.
ಪ್ರದೀಪ ರಾಯ್ಕರ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ಗೋಕರ್ಣದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಚೆನ್ನೈನಲ್ಲಿ ಎಂಜಿನಿಯರಿಂಗ್ ಮುಗಿಸಿ ಹುಬ್ಬಳ್ಳಿಯನ್ನು ಕಾರ್ಯಕ್ಷೇತ್ರವಾಗಿ ಮಾಡಿಕೊಂಡ ಪ್ರದೀಪ ರಾಯ್ಕರ ಅವರು ಶೆಲ್ಟರ್ ಹೌಸಿಂಗ್ ಸರ್ವೀಸಸ್ ಮೂಲಕ ಅನೇಕ ಪ್ರಾಜೆಕ್ಟ್‌ ಕಾರ್ಯಗತ ಮಾಡಿ ಹೆಸರು ಮಾಡಿದ್ದಾರೆ. ಹುಬ್ಬಳ್ಳಿ ಧಾರವಾಡ ಕ್ರೆಡಾಯ್ ಅಧ್ಯಕ್ಷರಾಗಿ ಎರಡು ಬಾರಿ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಕ್ರೆಡಾಯ್‌ಗೆ ಈಗ ಹುಬ್ಬಳ್ಳಿಯವರು ಅಧ್ಯಕ್ಷರಾಗಿರುವುದರಿಂದ ಟೈರ್-2, ಟೈರ್-3 ನಗರಗಳತ್ತಲೂ ಸರ್ಕಾರದ ಗಮನ ಸೆಳೆಯಲು ಬಲ ಸಿಗಲಿದೆ.

ಪ್ರಮುಖ ಸುದ್ದಿ :-   ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement