ಬಿಪೋರ್‌ ಜಾಯ್‌ ಚಂಡಮಾರುತ ; ರಾಜ್ಯದ ಈ ಜಿಲ್ಲೆಗಳಲ್ಲಿ 3-4 ದಿನ ಭಾರಿ ಮಳೆ ಸಾಧ್ಯತೆ

ನವದೆಹಲಿ/ಬೆಂಗಳೂರು: ನವದೆಹಲಿ/ಬೆಂಗಳೂರು: ಮುಂದಿನ 36 ಗಂಟೆಗಳಲ್ಲಿ ಬಿಪೋರ್‌ ಜಾಯ್‌ ಚಂಡಮಾರುತ ತೀವ್ರಗೊಳ್ಳಲಿದ್ದು, ಇನ್ನೆರಡು ದಿನಗಳಲ್ಲಿ ಉತ್ತರ-ವಾಯುವ್ಯದತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಶುಕ್ರವಾರ ಟ್ವೀಟ್‌ನಲ್ಲಿ ತಿಳಿಸಿದೆ.
ಅತ್ಯಂತ ತೀವ್ರವಾದ ಚಂಡಮಾರುತವು ಜೂನ್ 8 ರಂದು ರಾತ್ರಿ 11:30 ಗಂಟೆಗೆ ಗೋವಾದ ಪಶ್ಚಿಮ-ನೈಋತ್ಯಕ್ಕೆ 840 ಕಿಲೋಮೀಟರ್ ಮತ್ತು ಮುಂಬೈನಿಂದ 870 ಕಿಮೀ ಪಶ್ಚಿಮ-ನೈಋತ್ಯದಲ್ಲಿ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ನೆಲೆಗೊಂಡಿದೆ ಎಂದು IMD ತಿಳಿಸಿದೆ.
ಇದು ಮುಂದಿನ 36 ಗಂಟೆಗಳಲ್ಲಿ ಮತ್ತಷ್ಟು ತೀವ್ರಗೊಳ್ಳುತ್ತದೆ ಮತ್ತು ಮುಂದಿನ 2 ದಿನಗಳಲ್ಲಿ ಉತ್ತರ-ವಾಯುವ್ಯಕ್ಕೆ ಚಲಿಸುತ್ತದೆ ಎಂದು ಟ್ವೀಟ್ ಮಾಡಿದೆ. ಮುಂಚಿನ ಬುಲೆಟಿನ್‌ನಲ್ಲಿ, ಹವಾಮಾನ ಇಲಾಖೆಯು, “ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲೆ ಬಿಪೋರ್‌ ಜಾಯ್ ಚಂಡಮಾರುತವು ಕೇಂದ್ರೀಕೃತವಾಗಿದೆ. ಗೋವಾದ ಪಶ್ಚಿಮ-ನೈಋತ್ಯಕ್ಕೆ ಸುಮಾರು 860 ಕಿ.ಮೀ ದೂರದಲ್ಲಿ, ಮುಂಬೈನ ದಕ್ಷಿಣದಿಂದ 910 ಕಿ.ಮೀ. , ಮತ್ತಷ್ಟು ತೀವ್ರಗೊಳ್ಳುತ್ತದೆ ಮತ್ತು ಉತ್ತರ-ವಾಯುವ್ಯಕ್ಕೆ ಚಲಿಸುತ್ತದೆ ಎಂದು ಹೇಳಿತ್ತು.
ಅರಬ್ಬಿ ಸಮುದ್ರದಲ್ಲಿ ಇಂತಹ ಚಂಡಮಾರುತ ಪೀಡಿತ ಪ್ರದೇಶಗಳಿಗೆ ತೆರಳದಂತೆ ಹವಾಮಾನ ಇಲಾಖೆ ಮೀನುಗಾರರಿಗೆ ಸೂಚಿಸಿದೆ. ಸಮುದ್ರದಲ್ಲಿ ಇದ್ದವರು ಕರಾವಳಿ ತೀರಗಳಿಗೆ ಮರಳಲು ಸೂಚಿಸಿದೆ.
ಬಿಪೋರ್​ ಜಾಯ್ ಚಂಡಮಾರುತ ಪರಿಣಾಮ ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಾಗಲಿದೆ. ಮುಂದಿನ 3-4 ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಭಾರಿ ಮಳೆ ಸುರಿಯುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ವಿಶೇಷವಾಗಿ ಕರ್ನಾಟಕದ ಕರಾವಳಿಯಲ್ಲಿ ಭಾರೀ ಮಳೆಯಾಗಲಿದ್ದು, ಒಳನಾಡಿನಲ್ಲಿಯೂ ಮಳೆ ಸುರಿಯುವ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನಲ್ಲಿ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಈ ಪ್ರದೇಶಗಳಲ್ಲಿ ಜೋರಾಗಿ ಗಾಳಿ ಬೀಸಲಿದ್ದು, ಗಾಳಿಯ ವೇಗ ಗಂಟೆಗೆ 35-45 ಕಿಮೀ ವೇಗದಲ್ಲಿ ಬೀಸಲಿದೆ. ಇದು ಗರಿಷ್ಠ 55 ಕಿಮೀ ವರೆಗೂ ಬೀಸಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಜೂನ್‌ 9 ರಿಂದ ಜೂನ್‌ 12ರ ವರೆಗೆ ಮುಂದಿನ ನಾಲ್ಕು ದಿನಗಳು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಮಂಗಳೂರಿನಿಂದ ಕಾರವಾರದ ವರೆಗೆ  ಸಮುದ್ರದಲ್ಲಿ 2.5 – 3.3 ಮೀಟರ್ ವ್ಯಾಪ್ತಿಯಲ್ಲಿ ಎತ್ತರದ ಅಲೆಗಳು ಏಳುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ತುಮಕೂರಿನಲ್ಲಿ ಭಾರಿ ಮಳೆಯಾಗಲಿದೆ, ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement