ಹಿಂದೂ ಯುವಕನ ಹೆಸರಲ್ಲಿ ಪ್ರೊಫೈಲ್: ಡೇಟಿಂಗ್ ಆ್ಯಪ್ ಮೂಲಕ ಯುವತಿಗೆ ವಂಚಿಸಿದ್ಧ ಆರೋಪಿ ಅಂದರ್‌

ಬೆಂಗಳೂರು : ಹಿಂದೂ ಯುವಕನ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿ ಡೇಟಿಂಗ್ ಆ್ಯಪ್ ಮೂಲಕ ಯುವತಿಗೆ ವಂಚಿಸಿದ್ದ ಆರೋಪಿಯನ್ನು ಬೆಂಗಳೂರಿನ ಅಮೃತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮುದಾಸಿರ್ ಎಂಬಾತ ಬಂಧಿತ ಆರೋಪಿ. ಈತ ಅನಿರುದ್ಧ ಎಂಬ ವ್ಯಕ್ತಿಯ ಹೆಸರಿನಲ್ಲಿ ಪ್ರೊಫೈಲ್ ಕ್ರಿಯೇಟ್ ಮಾಡಿದ್ದ. ಆ್ಯಪ್ ​​ನಲ್ಲಿ ಸಂಗಾತಿ ಹುಡುಕುತ್ತಿದ್ದ ಯುವತಿಗೆ ಮೆಸೇಜ್​​ ಕಳುಹಿಸಿದ್ದ. ಪರಿಚಯವಾದ ಬಳಿಕ ಮದುವೆಯಾಗುವುದಾಗಿ ಯುವತಿಯನ್ನು ನಂಬಿಸಿ ಅವಳ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದ ಎನ್ನಲಾಗಿದೆ.
ನಂತರ ​ತಾಯಿಗೆ ಹುಷಾರಿಲ್ಲವೆಂದು ಹೇಳಿ ಯುವತಿ ಬಳಿ 1 ಲಕ್ಷ ರೂ. ಹಣ ಲಪಟಾಯಿಸಿದ್ದ ಆರೋಪಿ ಮುದಾಸಿರ್ ಬಳಿಕ ತಾಯಿ ಮೃತಪಟ್ಟಿದ್ದಾರೆ ಎಂದು ಕಥೆ ಕಟ್ಟಿದ್ದ. , ಇದಾದ ನಂತರ ದುಬೈಗೆ ತನ್ನ ತಮ್ಮನ ಬಳಿ ಹೋಗಿ ಬರುತ್ತೆನೆಂದು ಎಂದು ಹೇಳಿ ಫೋನ್ ಸ್ಪಿಚ್ ಆಫ್ ಮಾಡಿದ್ದ. ಬಳಿಕ ಮುದಾಸಿರನನ್ನು ಪತ್ತೆ ಹಚ್ಚಿದ ಯುವತಿಗೆ ಶಾಕ್ ಎದುರಾಗಿತ್ತು. ಅನಿರುದ್ಧ​ ಹೆಸರಿನವನು ನಿಜವಾಗಿಯೂ ಅನಿರುದ್ಧ ಅಲ್ಲ, ಆತನ ಹೆಸರು ಮುದಾಸಿರ್ ಎಂಬುದು ಗೊತ್ತಾಯಿತು. ಇದರ ಜೊತೆಗೆ ಆತನಿಗೆ ಮದುವೆಯಾಗಿ ಹೆಂಡತಿ ಮಕ್ಕಳು ಇದ್ದಾರೆಂಬುದು ಯುವತಿಗೆ ಗೊತ್ತಾಗಿದೆ. ಮೋಸ ಹೋದ ಯುವತಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣಗೆ ನಾವು ಅನುಮತಿ ನೀಡಿಲ್ಲ ; ರಾಜತಾಂತ್ರಿಕ ಪಾಸ್‌ಪೋರ್ಟ್‌ನಲ್ಲಿ ಜರ್ಮನಿಗೆ ತೆರಳಿದ್ದಾರೆ : ವಿದೇಶಾಂಗ ಸಚಿವಾಲಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement