ಕರ್ನಾಟಕ ಗ್ರಾಮೀಣ ಬ್ಯಾಂಕ್​ಗಳಲ್ಲಿ 806 ಹುದ್ದೆಗಳ ನೇಮಕಾತಿ : ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್‌) ದೇಶದಾದ್ಯಂತ 43 ಗ್ರಾಮೀಣ ಬ್ಯಾಂಕ್‌ಗಳಲ್ಲಿ (ಆರ್‌ಆರ್‌ಬಿ) ಖಾಲಿಯಿರುವ 8612 ಆಫೀಸ್ ಅಸಿಸ್ಟೆಂಟ್ (ಮಲ್ಟಿ ಪರ್ಪಸ್) ಮತ್ತು ಆಫೀಸರ್ ಹುದ್ದೆಗಳ ನೇಮಕಕ್ಕೆ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ರಾಜ್ಯದ ಬಳ್ಳಾರಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮತ್ತು ಧಾರವಾಡದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ಗಳು ಸೇರಿದ್ದು, ಈ ಎರಡು ಬ್ಯಾಂಕ್‌ಗಳಲ್ಲಿ ಖಾಲಿ ಇರುವ 806 ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಅದರಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್​ನ 606 ಹುದ್ದೆಗಳು ಹಾಗೂ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ನ 200 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.ಜೂನ್ 1 ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಜೂನ್ 21 ಅರ್ಜಿ ಸಲ್ಲಿಕೆಗೆ ಕೊನೆ ದಿನವಾಗಿದೆ.
ವಯೋಮಿತಿ:
ಹುದ್ದೆ ಖಾಲಿ ಇರುವ ಹುದ್ದೆಗಳು- ವಯೋಮಿತಿ
ಕಚೇರಿ ಸಹಾಯಕ (ವಿವಿಧೋದ್ದೇಶ)-450 ಹುದ್ದೆಗಳು, ವಿದ್ಯಾರ್ಹತೆ- ಪದವಿ, ವಯೋಮಿತಿ: 18-28 ವರ್ಷ
ಆಫೀಸರ್ ಸ್ಕೇಲ್-I (ಸಹಾಯಕ ವ್ಯವಸ್ಥಾಪಕ)-350 ಹುದ್ದೆಗಳು, ವಿದ್ಯಾರ್ಹತೆ- ಪದವಿ, ವಯೋಮಿತಿ: 18-30 ವರ್ಷ
ಆಫೀಸರ್ ಸ್ಕೇಲ್ II (ಕಾನೂನು)-4 ಹುದ್ದೆಗಳು, ವಿದ್ಯಾರ್ಹತೆ-LLB ವಯೋಮಿತಿ: 21-32 ವರ್ಷ
ಆಫೀಸರ್ ಸ್ಕೇಲ್ II (CA)-2 ಹುದ್ದೆಗಳು, ವಿದ್ಯಾರ್ಹತೆ-CA ವಯೋಮಿತಿ: 21-32 ವರ್ಷ
ಎಸ್‌.ಸಿ ಮತ್ತು ಎಸ್‌.ಟಿ ಅಭ್ಯರ್ಥಿಗಳಿಗೆ 5 ವರ್ಷಗಳು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳು ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳ ವಯೋಮಿತಿಯ ಸಡಿಲಿಕೆ ಇದೆ.
ಶೈಕ್ಷಣಿಕ ಅರ್ಹತೆ ಮತ್ತು ಅನುಭವ:
ಆಫೀಸ್ ಅಸಿಸ್ಟೆಂಟ್‌ಹುದ್ದೆ ಹಾಗೂ ಆಫೀಸರ್ ಸ್ಕೇಲ್-I ಗೆ ಸ್ಥಳೀಯ ಭಾಷೆ ತಿಳಿದಿರುವುದು ಅವಶ್ಯಕ. ಕಂಪ್ಯೂಟರ್‌ ನಿರ್ವಹಣಾ ಜ್ಞಾನ ಗೊತ್ತಿರುವುದು ಕಡ್ಡಾಯವಾಗಿದೆ.
ಆಫೀಸ್ ಅಸಿಸ್ಟೆಂಟ್‌ಹುದ್ದೆ: ಯಾವುದೇ ವಿಷಯದಲ್ಲಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಆಫೀಸರ್ ಸ್ಕೇಲ್-I(ಸಹಾಯಕ ವ್ಯವಸ್ಥಾಪಕ): ಯಾವುದೇ ವಿಷಯದಲ್ಲಿ ಪದವಿ. ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ, ಕೃಷಿ ಎಂಜಿನಿಯರಿಂಗ್, ಮೀನುಗಾರಿಕೆ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಮಾಹಿತಿ ತಂತ್ರಜ್ಞಾನ, ನಿರ್ವಹಣೆ, ಕಾನೂನು, ಅರ್ಥಶಾಸ್ತ್ರ ಅಥವಾ ಲೆಕ್ಕಶಾಸ್ತ್ರದಲ್ಲಿ ಪದವಿ ಹೊಂದಿರುವವರಿಗೆ ಆದ್ಯತೆ.
ಸ್ಕೇಲ್‌-II ಅಧಿಕಾರಿಗಳ ಹುದ್ದೆ: ಸ್ಕೇಲ್‌-II ಅಧಿಕಾರಿಗಳಿಗೆ (ವ್ಯವಸ್ಥಾಪಕರು), ಅಗ್ರಿಕಲ್ಚರ್ ಆಫೀಸರ್ /ಲಾ ಆಫೀಸರ್‌ಗಳಿಗೆ ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಎರಡು ವರ್ಷಗಳ ಸೇವೆ/ ಸ್ಪೆಷಲ್‌ಆಫೀಸರ್ಸ್‌ ಗಳು/ಚಾರ್ಟೆಡ್‌ ಅಕೌಂಟೆಂಟ್ /ಟ್ರಶರಿ ಆಫೀಸರ್/ ಮಾರ್ಕೆಟಿಂಗ್ ಆಫೀಸರ್/ಗೆ ಒಂದು ವರ್ಷ ಸೇವೆ ಸಲ್ಲಿಸಿದ ಅನುಭವ ಹೊಂದಿರಬೇಕು.
ವ್ಯವಸ್ಥಾಪಕರು: ಯಾವುದೇ ವಿಷಯದಲ್ಲಿ ಶೇ 50 ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. ಬ್ಯಾಂಕಿಂಗ್, ಹಣಕಾಸು, ಮಾರುಕಟ್ಟೆ, ಕೃಷಿ, ತೋಟಗಾರಿಕೆ, ಅರಣ್ಯ, ಪಶುಸಂಗೋಪನೆ, ಪಶುವೈದ್ಯಕೀಯ ವಿಜ್ಞಾನ, ಕೃಷಿ ಎಂಜಿನಿಯರಿಂಗ್, ಮೀನುಗಾರಿಕೆ, ಕೃಷಿ ಮಾರುಕಟ್ಟೆ ಮತ್ತು ಸಹಕಾರ, ಮಾಹಿತಿ ತಂತ್ರಜ್ಞಾನ, ನಿರ್ವಹಣೆ, ಕಾನೂನು, ಅರ್ಥಶಾಸ್ತ್ರ ಮತ್ತು ಲೆಕ್ಕಶಾಸ್ತ್ರದಲ್ಲಿ ಪದವಿ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ.
ಸ್ಪೆಷಲ್‌ ಆಫೀಸರ್ಸ್‌: ಇನ್ ಫಾರ್ಮೇಷನ್ ಟೆಕ್ನಾಲಜಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಶೇ 50 ಅಂಕಗಳೊಂದಿಗೆ ಎಲೆಕ್ಟ್ರಾನಿಕ್ಸ್ / ಕಮ್ಯುನಿಕೇಶನ್ / ಕಂಪ್ಯೂಟರ್ ಸೈನ್ಸ್ / ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಪಡೆದಿರಬೇಕು. ಇದರ ಜೊತೆಗೆ, ASP, PHP, C++, Java, VB, VC, OCP ಸಾಫ್ಟ್‌ವೇರ್‌ ಕಲಿಕೆಯ ಪ್ರಮಾಣಪತ್ರ.
ಚಾರ್ಟೆಡ್‌ ಅಕೌಂಟೆಂಟ್: ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದಿಂದ ಸರ್ಟಿಫೈಡ್ ಅಸೋಸಿಯೇಟ್ (CA) ಪದವಿ ಪಡೆದಿರುವುದು ಕಡ್ಡಾಯ.
ಲಾ ಆಫೀಸರ್: ಶೇ 50 ಅಂಕಗಳೊಂದಿಗೆ ಕಾನೂನು ಪದವಿ ಅಥವಾ ತತ್ಸಮಾನ ಪದವಿ ಪಡೆದಿರಬೇಕು.ಅಥವಾ ಎರಡು ವರ್ಷ ವಕೀಲರಾಗಿ ಕೆಲಸ ಮಾಡಿರಬೇಕು.
ಟ್ರಶರಿ ಆಫೀಸರ್: ಹಣಕಾಸು ವಿಷಯದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಅಥವಾ ಎಂಬಿಎ ಪದವಿ ಪಡೆದಿರಬೇಕು.
ಮಾರ್ಕೆಟಿಂಗ್ ಆಫೀಸರ್: ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿ ಹೊಂದಿರಬೇಕು.
ಅಗ್ರಿಕಲ್ಚರ್ ಆಫೀಸರ್: ಈ ಹುದ್ದೆಗಳಿಗೆ ಕೃಷಿ/ತೋಟಗಾರಿಕೆ/ಹೈನುಗಾರಿಕೆ/ ಪಶುಸಂಗೋಪನೆ/ ಅರಣ್ಯಶಾಸ್ತ್ರ /ಪಶುವೈದ್ಯಕೀಯ ವಿಜ್ಞಾನ/ಕೃಷಿ ಎಂಜಿನಿಯರಿಂಗ್/ಮೀನುಗಾರಿಕೆ ವಿಷಯದಲ್ಲಿ ಶೇ 50 ಅಂಕಗಳೊಂದಿಗೆ ಪದವಿ ಪಡೆದಿರಬೇಕು.
ಶುಲ್ಕಪಾವತಿ
ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹ 850 ಹಾಗೂ ಎಸ್‌ಸಿ/ಎಸ್‌ಟಿ/ ಅಂಗವಿಕಲರು / ಮಾಜಿ ಸೈನಿಕ ಅಭ್ಯರ್ಥಿಗಳಿಗೆ ₹175 ಶುಲ್ಕ ನಿಗದಿಪಡಿಸಲಾಗಿದೆ. ಆನ್‌ಲೈನ್ ಮೋಡ್ ಮೂಲಕ ಅಗತ್ಯವಾದ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಅರ್ಜಿ ಸಲ್ಲಿಕೆ, ಅಧಿಸೂಚನೆ ಕುರಿತ ಹೆಚ್ಚಿನ ಮಾಹಿತಿಗಾಗಿhttp://www.ibps.in/ ಜಾಲತಾಣಕ್ಕೆ ಭೇಟಿ ನೀಡಿ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement