ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆ ಫಲಿತಾಂಶ : ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆದ 14,624 ಅಭ್ಯರ್ಥಿಗಳು

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್‌ಸಿ) ಕಳೆದ ತಿಂಗಳ 28ರಂದು ನಡೆಸಿದ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ಸೋಮವಾರ ಪ್ರಕಟಿಸಿದೆ. ಇದರಲ್ಲಿ ಒಟ್ಟು 14,624 ಅಭ್ಯರ್ಥಿಗಳು ಮುಖ್ಯಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ.
ಮುಖ್ಯಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ನೋಂದಣಿ ಸಂಖ್ಯೆಗಳ ಪಟ್ಟಿಯನ್ನು ಯುಪಿಎಸ್‌ಸಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಹಾಗೂ ಈ ಎಲ್ಲ ಅಭ್ಯರ್ಥಿಗಳು ಮುಖ್ಯಪರೀಕ್ಷೆಗೆ ಹಾಜರಾಗಲು ಅರ್ಜಿ ಸಲ್ಲಿಸಬೇಕು ಎಂದು ಯುಪಿಎಸ್‌ಸಿ ಈ ಬಗ್ಗೆ ನೀಡಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಕೇಂದ್ರ ನಾಗರಿಕ ಸೇವೆಗಳಾದ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಹುದ್ದೆಗಳ ಭರ್ತಿಗೆ ಮೂರು ಅಂದರೆ -ಪೂರ್ವಭಾವಿ ಪರೀಕ್ಷೆ, ಮುಖ್ಯಪರೀಕ್ಷೆ ಮತ್ತು ಸಂದರ್ಶನ-ಹಂತಗಳಲ್ಲಿ ಯುಪಿಎಸ್‌ಸಿಯು ಪರೀಕ್ಷೆಯನ್ನು ನಡೆಸುತ್ತದೆ.
“2023 ರ ಸಿಎಸ್ (ಪಿ) ಪರೀಕ್ಷೆಯ ಅಂಕಗಳು, ಕಟ್-ಆಫ್ ಅಂಕಗಳು ಮತ್ತು ಉತ್ತರ ಕೀಗಳನ್ನು ಆಯೋಗದ ವೆಬ್‌ಸೈಟ್‌ನಲ್ಲಿ ಅಂದರೆ https://upsc.gov.in ನಲ್ಲಿ ನಾಗರಿಕ ಸೇವೆಗಳ ಸಂಪೂರ್ಣ ಪ್ರಕ್ರಿಯೆಯ ನಂತರವೇ ಅಪ್‌ಲೋಡ್ ಮಾಡಲಾಗುತ್ತದೆ ಎಂದು ಅಭ್ಯರ್ಥಿಗಳಿಗೆ ತಿಳಿಸಲಾಗಿದೆ. ಪರೀಕ್ಷೆ, 2023 ಮುಗಿದಿದೆ ಅಂದರೆ ಅಂತಿಮ ಫಲಿತಾಂಶದ ಘೋಷಣೆಯ ನಂತರ ಅಧಿಕೃತ ಸೂಚನೆಯನ್ನು ಓದಬಹುದು.

ಪ್ರಮುಖ ಸುದ್ದಿ :-   ಇದೆಂಥ ವಿಚಿತ್ರ | ಹೊಟ್ಟೆ ನೋವೆಂದು ಆಸ್ಪತ್ರೆಗೆ ಹೋದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಜೀವಂತ-ಓಡಾಡುತ್ತಿದ್ದ 1 ಅಡಿ ಉದ್ದದ ಹಾವುಮೀನು..!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement