ಕನ್ನಡ ಸಿನೆಮಾಗಳಲ್ಲಿ ಹೆಚ್ಚಾಗಿ ಖಳನಟನಾಗಿ ಅಭಿನಯಿಸಿದ್ದ ಬಹುಭಾಷಾ ನಟ ಕಜಾನ್ ಖಾನ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ನಿನ್ನೆ ಅವರಿಗೆ ಹೃದಯಾಘಾತವಾಗಿದ್ದು , ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ ಎಂದು ವರದಿಯಾಗಿದೆ. ಕಜಾನ್ ಖಾನ್, ನಿಧನದ ಸುದ್ದಿಯನ್ನು ಮಲಯಾಳಂ ಚಿತ್ರರಂಗದ ಖ್ಯಾತ ಪ್ರೊಡಕ್ಷನ್ ಕಂಟ್ರೋಲರ್ ಮತ್ತು ನಿರ್ಮಾಪಕ ಎನ್.ಎಂ. ಬಾದುಷಾ ಅವರು ಅಧಿಕೃತವಾಗಿ ಖಚಿತಪಡಿಸಿದ್ದಾರೆ.
992ರಲ್ಲಿ ತೆರೆಕಂಡ ಸೆಂತಮೀಜ್ ಪಾಟ್ವು ಎಂಬ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದರು. 1993 ರಲ್ಲಿ ಮೋಹನ್ ಲಾಲ್ ಅವರ ‘ಗಂಧರ್ವಂ’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗವನ್ನು ಪ್ರವೇಶಿಸಿದ .ಮಲಯಾಳಂ ನಟ ದಿಲೀಪ್ ಅಭಿನಯದ ‘ಸಿಐಡಿ ಮೂಸಾ’ ಚಿತ್ರದಲ್ಲಿನ ವಿಲನ್ ಪಾತ್ರಕ್ಕಾಗಿ ಕಜನ್ ಖಾನ್ ಬಹಳ ಮೆಚ್ಚುಗೆಯನ್ನು ಪಡೆದರು. 1999ರಲ್ಲಿ ತೆರೆಕಂಡ ಹಬ್ಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದರು. ಬಳಿಕ ನಾಗದೇವತೆ, ಚೆಲುವ ಸೇರಿದಂತೆ ಅನೇಕ ಕನ್ನಡ ಸಿನಿಮಾದಲ್ಲಿ ಅಭಿನಯಿಸಿದ್ದರು. ಕಜಾನ್ ಖಾನ್ ಅವರು ಆ ಕಾಲದಲ್ಲಿಯೇ ದಕ್ಷಿಣ ಭಾರತದ ಹ್ಯಾಂಡ್ಸಮ್ ಖಳನಟ ಎಂಬ ಹೆಸರು ಪಡೆದುಕೊಂಡಿದ್ದರು.


ನಿಮ್ಮ ಕಾಮೆಂಟ್ ಬರೆಯಿರಿ