ಪಂಚಾಯತ ಚುನಾವಣೆಗೆ 21 ಕಿಮೀ ಓಡಿ ಬಂದು ನಾಮಪತ್ರ ಸಲ್ಲಿಸಿದ ಪಕ್ಷೇತರ ಅಭ್ಯರ್ಥಿ…! ಕಾರಣ…?

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿರುವುದು ಈಗ ಭಾರೀ ಸುದ್ದಿಯಾಗಿದೆ. ಅಬ್ಬರ, ಪಟಾಕಿ, ಜನರ ಜೈಕಾರ ಯಾವುದೂ ಇಲ್ಲದೆ ಅವರು 21 ಕಿಮೀ ಓಡಿ ಬಂದು ವಿಭಿನ್ನವಾಗಿ ನಾಮಪತ್ರ ಸಲ್ಲಿಸಿರುವುದು ಜನರ ಗಮನ ಸೆಳೆದಿದೆ.
ಪಶ್ಚಿಮ ಬಂಗಾಳದಲ್ಲಿ ಸದ್ಯ ಪಂಚಾಯತ ಚುನಾವಣೆ ಘೋಷಣೆಯಾಗಿದ್ದು, ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ಡಾರ್ಜಿಲಿಂಗ್‌ ಹಿಲ್ಸ್‌ನ ಮಾಜಿ ಸೈನಿಕ, ಶರಣ್‌ ಸುಬ್ಬ ಎಂಬವರು ಪಕ್ಷೇತರ ಅಭ್ಯರ್ಥಿಯಾಗಿ ಪಂಚಾಯತ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದರೆ, ಅವರು 21 ಕಿಮೀ ಏಕಾಂಗಿಯಾಗಿ ಓಡಿಬಂದು ನಾಮಪತ್ರ ಸಲ್ಲಿಸಿದ ನಂತರ ಈಗ ಸುದ್ದಿಯಲ್ಲಿದ್ದಾರೆ.
ಬೆಳಗ್ಗೆ 4 ಗಂಟೆಗೆ ನಾಮಪತ್ರ ಹಿಡಿದುಕೊಂಡು ಸೋನಾಡದಿಂದ ಸುಮಾರು 21 ಕಿಮೀ ದೂರದಲ್ಲಿರುವ ಸುಖಿಯಾಪೋಖ್ರಿ ಬ್ಲಾಕ್‌ ಡೆವಲಪ್‌ಮೆಂಟ್‌ ಕಚೇರಿಗೆ ಅವರು ಓಡಿಕೊಂಡು ಬಂದಿದ್ದಾರೆ. ಕೇವಲ ನಾಲ್ಕು ಗಂಟೆಯಲ್ಲಿ 21 ಕಿಮೀ ಕ್ರಮಿಸಿದ ಶರಣ್‌ ಸುಬ್ಬ ಕಚೇರಿ ಬಳಿ ಬಂದಾಗ ಆಫೀಸ್‌ ಇನ್ನು ತೆರೆದಿರಲಿಲ್ಲ. ಸ್ವಲ್ಪ ಹೊತ್ತು ಅಲ್ಲಿಯೇ ಕಾದು ಕುಳಿತ ಬಳಿಕ ಕಚೇರಿ ತೆರೆದಿದೆ. ನಂತರ ಸೋನಡ್‌ ಬ್ಲಾಕ್‌ ಪಂಚಾಯತ ಸಮಿತಿಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಉತ್ತಮ ಸಂದೇಶಕ್ಕಾಗಿ ಈ ಓಟ
ಶರಣ್‌ ಸುಬ್ಬ ಅವರು ಒಳ್ಳೆಯ ಉದ್ದೇಶ ಇಟ್ಟುಕೊಂಡು 21 ಕಿಮೀ ಓಡಿಬಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಗುಡ್ಡಗಳಲ್ಲಿನ ಸಂಚಾರ ದಟ್ಟಣೆಯನ್ನು ಉಲ್ಲೇಖಿಸಿದರು. ಜನರು ವಾಹನಗಳ ಬಳಕೆಯನ್ನು ಹೆಚ್ಚಿಸಿದ್ದಾರೆ. ಕಡಿಮೆ ದೂರದ ಸಂಚಾರಕ್ಕೂ ವಾಹನ ಬಳಸುತ್ತಿದ್ದಾರೆ. ಇದು ವಾಯು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಆದ್ದರಿಂದ ವಾಕಿಂಗ್‌ ಅತ್ಯುತ್ತಮ ಪರ್ಯಾಯ ಸಂಚಾರ ವಿಧಾನವಾಗಿದ್ದು, ಜನರ ಆರೋಗ್ಯಕ್ಕೂ ಒಳ್ಳೆಯದು, ಪರಿಸರಕ್ಕೂ ಉತ್ತಮ ಎಂದು ಹೇಳಿದ್ದಾರೆ.
ನಾನು ಸುಲಭವಾಗಿ ನನ್ನ ಕಾರಿನಲ್ಲಿ ಬ್ಲಾಕ್ ಆಫೀಸ್‌ಗೆ ಹೋಗಿ ನಾಮಪತ್ರ ಸಲ್ಲಿಸಬಹುದಿತ್ತು. ಆದರೆ ನಾನು ಸಂದೇಶವನ್ನು ರವಾನಿಸಲು ಬಯಸುತ್ತೇನೆ. ಬೆಟ್ಟಗಳು ಪ್ರತಿದಿನ ಹಲವಾರು ಸಂಚಾರ ದಟ್ಟಣೆಯನ್ನು ಅನುಭವಿಸುತ್ತಿವೆ ಮತ್ತು ಇದು ಗಂಭೀರ ಸಮಸ್ಯೆಯಾಗಿದೆ. ಪರಿಸ್ಥಿತಿಯನ್ನು ಸುಧಾರಿಸಲು ಕಾರುಗಳು ಮತ್ತು ದ್ವಿಚಕ್ರ ವಾಹನಗಳ ಬಳಕೆಯನ್ನು ಕಡಿಮೆ ಮಾಡುವ ಮೂಲಕ ನಾವು ವ್ಯಕ್ತಿಗಳಾಗಿ ನಮ್ಮ ಕೆಲಸವನ್ನು ಮಾಡಬಹುದು ಎಂದು 36 ವರ್ಷದ ಸುಬ್ಬ ಮಾಧ್ಯಮ ಪ್ರತಿನಿಧಿಗೆ ತಿಳಿಸಿದರು.
ಅರೆ ಸ್ವಾಯತ್ತ ಗೂರ್ಖಾಲ್ಯಾಂಡ್ ಟೆರಿಟೋರಿಯಲ್ ಅಡ್ಮಿನಿಸ್ಟ್ರೇಷನ್ (GTA) ಆಡಳಿತದ ಡಾರ್ಜಿಲಿಂಗ್ ಮತ್ತು ಕಾಲಿಂಪಾಂಗ್ ಬೆಟ್ಟಗಳಲ್ಲಿ 23 ವರ್ಷಗಳ ನಂತರ ಜುಲೈ 8 ರಂದು ಚುನಾವಣೆ ಪಂಚಾಐತ ಚುನಾವಣೆಗಳು ನಡೆಯಲಿದೆ.
ಜುಲೈ 8ಕ್ಕೆ ಒಂದೇ ಹಂತದಲ್ಲಿ ಚುನಾವಣೆ
ಪಶ್ಚಿಮ ಬಂಗಾಳದಲ್ಲಿ ಪಂಚಾಯತ ಚುನಾವಣೆ ಜುಲೈ 8ರಂದು ಒಂದೇ ಹಂತದಲ್ಲಿ ನಡೆಯುತ್ತಿವೆ. ಗ್ರಾಮ ಪಂಚಾಯತ, ಪಂಚಾಯಿತ ಸಮಿತಿ ಹಾಗೂ ಜಿಲ್ಲಾ ಪಂಚಾಯತಗಳ ಚುನಾವಣೆ ಏಕಕಾಲಕ್ಕೆ ನಡೆಯುತ್ತಿದ್ದು, ಮತದಾರರು ಒಂದೇ ಬಾರಿಗೆ ಮೂರು ಚುನಾವಣೆಯನ್ನು ಎದುರಿಸಲಿದ್ದಾರೆ.

ಪ್ರಮುಖ ಸುದ್ದಿ :-   'ಪ್ರಿಯಾಂಕಾ ಗಾಂಧಿ ವಿರುದ್ಧ ಪಕ್ಷದಲ್ಲೇ ದೊಡ್ಡ ಪಿತೂರಿ...ಜೂನ್ 4ರ ನಂತರ ಕಾಂಗ್ರೆಸ್ ಅಣ್ಣ-ತಂಗಿ ಬಣಗಳಾಗಿ ವಿಭಜನೆ' : ಕಾಂಗ್ರೆಸ್‌ ಮಾಜಿ ನಾಯಕನ ಸ್ಫೋಟಕ ಹೇಳಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement