ಪ್ರೇಮಿಗಳನ್ನು ಕೊಂದು ನದಿಯಲ್ಲಿನ ಮೊಸಳೆಗಳಿಗೆ ಮೃತದೇಹ ಎಸೆದ ಪೋಷಕರು

ಭೋಪಾಲ್: ಪ್ರೇಮಿಗಳನ್ನು ಕೊಂದ ಪೋಷಕರು ಮೊಸಳೆಗಳ ಬಾಯಿಗೆ ಶವ ಎಸೆದಿದ್ದಾರೆ ಎಂದು ಮಧ್ಯಪ್ರದೇಶದಲ್ಲಿ ವರದಿಯಾಗಿದೆ.
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ಹುಡುಗಿ ಮತ್ತು ಆಕೆಯ ಪ್ರಿಯಕರನನ್ನು ಆಕೆಯ ಪೋಷಕರು ಹತ್ಯೆ ಮಾಡಿದ್ದಾರೆ. ನಂತರ ಅವರ ದೇಹಗಳನ್ನು ಭಾರವಾದ ಕಲ್ಲುಗಳಿಂದ ಕಟ್ಟಿ ಭಾರಿ ಗಾತ್ರದ ಮೊಸಳೆಗಳಿರುವ ಚಂಬಲ್ ನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಕುಟುಂಬ ಗುರುತಿಸಿರುವ ಸ್ಥಳಗಳಲ್ಲಿ ಡೈವರ್‌ಗಳ ಸಹಾಯದಿಂದ ಅವರ ಮೃತದೇಹಗಳಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಮೊರೆನಾ ಎಸ್‌.ಪಿ. ಶೈಲೇಂದ್ರ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಮೊರೆನಾ ಜಿಲ್ಲೆಯ ಅಂಬಾಹ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯು ಎರಡು ವಾರಗಳ ಹಿಂದೆ ನಡೆದಿದೆ. ಕೆಲವು ಸಂಬಂಧಿಕರೊಂದಿಗೆ ಹುಡುಗಿಯ ಕುಟುಂಬದವರು ಯುವ ದಂಪತಿಗಳನ್ನು ಗುಂಡು ಹಾರಿಸಿ ಕೊಂದು ನದಿಯಲ್ಲಿ ಮುಳುಗಿಸಿದ್ದಾರೆ.
ಅಪರಾಧವನ್ನು ಬಹಿರಂಗಪಡಿಸಿದ ನಂತರ ನದಿಯಲ್ಲಿ ಶವಗಳನ್ನು ಹುಡುಕಲು ಪೊಲೀಸರು ರಾಜ್ಯ ವಿಪತ್ತು ನಿರ್ವಹಣಾ ಪಡೆ(SDRF) ತಂಡ ಮತ್ತು ಡೈವರ್‌ಗಳನ್ನು ನಿಯೋಜಿಸಿದ್ದಾರೆ. ರತನ್‌ಬಸಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮದ ಶಿವಾನಿ ತೋಮರ್(18) ಪಕ್ಕದ ಗ್ರಾಮದ ಬಲುಪುರ ನಿವಾಸಿ ರಾಧೇಶ್ಯಾಮ್ ತೋಮರ್(21) ಎಂಬಾತನನ್ನು ಪ್ರೇಮಿಸುತ್ತಿದ್ದರು. ಇವರ ಪ್ರೀತಿಗೆ ಜಾತಿ ಸಮಸ್ಯೆ ಇಲ್ಲದಿದ್ದರೂ ಹುಡುಗಿಯ ಕುಟುಂಬದ ಆಕ್ಷೇಪಣೆ ಇತ್ತು.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

ಜೂನ್ 3 ರಿಂದ, ಹುಡುಗ ಮತ್ತು ಹುಡುಗಿ ಇಬ್ಬರೂ ನಾಪತ್ತೆಯಾಗಿದ್ದರು, ರಾಧೇಶ್ಯಾಮ್ ತೋಮರ್ ಅವರ ಕುಟುಂಬವು ಹುಡುಗಿಯ ಕುಟುಂಬದವರು ಅವರನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಪೊಲೀಸರು ಹುಡುಗಿಯ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದರು.
ಹುಡುಗಿಯ ತಂದೆ ರಾಜಪಾಲ್ ಸಿಂಗ್ ತೋಮರ್ ಮತ್ತು ಸಹಚರರು ಜೂನ್ 3 ರಂದು ಶಿವಾನಿ ಮತ್ತು ರಾಧೇಶ್ಯಾಮ್ ತೋಮರ್ ಇಬ್ಬರನ್ನೂ ಗುಂಡಿಕ್ಕಿ ಕೊಂದು ನಂತರ ಕತ್ತಲೆಯಲ್ಲಿ ಚಂಬಲ್ ನದಿಯಲ್ಲಿ ಅವರ ಶವಗಳನ್ನು ಎಸೆದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಶವಗಳನ್ನು ನದಿಯಲ್ಲಿ ಎಸೆದು ಈಗ 15 ದಿನಗಳು ಕಳೆದಿವೆ, ಮೀನು ಮತ್ತು ಮೊಸಳೆಗಳಂತಹ ಜಲಚರಗಳ ಬೇಟೆಯ ಕಾರಣದಿಂದ ಅವಶೇಷ ಸಿಗುವ ಬಗ್ಗೆ ಖಚಿತವಿಲ್ಲ. ಕಳೆದ 10 ದಿನಗಳಿಂದ ರಾಧೇಶ್ಯಾಮ್ ತೋಮರ್ ಅವರ ಕುಟುಂಬದವರು ಅಂಬಾಹ್ ಪೊಲೀಸ್ ಠಾಣೆಯಿಂದ ಹಿಡಿದು ಪೊಲೀಸ್ ಸೂಪರಿಂಟೆಂಡೆಂಟ್(ಎಸ್‌ಪಿ) ಕಚೇರಿಯವರೆಗೆ ದೂರು ನೀಡಿ ಪತ್ತೆ ಮಾಡಲು ಒತ್ತಾಯಿಸಿದ್ದರು. ಕೊಲೆ ಮಾಡಿ ಶವಗಳನ್ನು ಮೊಸಳೆಗಳಿದ್ದ ನದಿಗೆ ಎಸೆದ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement