ಎಂಜಿನಿಯರ್‌ಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಶಾಸಕಿ | ವೀಕ್ಷಿಸಿ

ಮುಂಬೈ : ಮಹಾರಾಷ್ಟ್ರದ ಥಾಣೆಯಲ್ಲಿ ಮಹಿಳಾ ಶಾಸಕಿಯೊಬ್ಬರು ಸಿವಿಲ್‌ ಎಂಜಿನಿಯರ್‌ಗೆ ಸಾರ್ವಜನಿಕವಾಗಿ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದ್ದು, ವೀಡಿಯೊ ವೈರಲ್ ಆಗಿದೆ.
ಥಾಣೆ ಜಿಲ್ಲೆಯ ಮೀರಾ ಭಯಂದರ್‌ನ ಶಾಸಕಿ ಗೀತಾ ಜೈನ್ ಅವರು ಕೆಲವು ಅಕ್ರಮ ಕಟ್ಟಡಗಳನ್ನು ನೆಲಸಮಗೊಳಿಸುವ ವಿಚಾರವಾಗಿ ಮುನ್ಸಿಪಲ್ ಕಾರ್ಪೊರೇಷನ್‌ನ ಇಬ್ಬರು ಇಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಥಾಣೆ ಜಿಲ್ಲೆಯ ಮೀರಾ ಭಾಯಂದರ್‌ನ ಶಾಸಕಿ ಗೀತಾ ಜೈನ್, ಮೀರಾ ಭಾಯಂದರ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಯಾವುದೇ ಸೂಚನೆಯಿಲ್ಲದೆ ಮನೆಯೊಂದರಲ್ಲಿ ವಾಸಿಸುತ್ತಿದ್ದವರನ್ನು ಹೊರಹಾಕಿ ಕಟ್ಟಡವನ್ನು ನೆಲಸಮಗೊಳಿಸಿದ ನಂತರ ಎಂಜಿನಿಯರ್‌ಗೆ ಕಪಾಳಮೋಕ್ಷ ಮಾಡಿದ್ದಾರೆ. ಮಹಿಳೆಯರು, ಮಕ್ಕಳು ಸೇರಿದಂತೆ ನಿವಾಸಿಗಳು ರಸ್ತೆಯಲ್ಲೇ ಪರದಾಡಬೇಕಾಯಿತು ಎಂದು ಅವರಿಗೆ ದೂರು ಬಂದಿತ್ತು.
ವೀಡಿಯೊದಲ್ಲಿ, ಗೀತಾ ಜೈನ್ ಅವರು ಮನೆ ಕೆಡವುವಿಕೆಯ ಬಗ್ಗೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ಸಾರ್ವಜನಿಕವಾಗಿಯೇ ಕಿರಿಯ ಅಧಿಕಾರಿಯ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದಾಳೆ.

ಸ್ಥಳೀಯ ಸುದ್ದಿ ವಾಹಿನಿಯೊಂದರ ಜೊತೆ ಮಾತನಾಡಿದ ಗೀತಾ ಜೈನ್, ತಮ್ಮ ಮನೆ ಕೆಡವುತ್ತಿರುವಾಗ ಅಳುತ್ತಿದ್ದ ಮಹಿಳೆಯರನ್ನು ನೋಡಿ ಪೌರಕಾರ್ಮಿಕರು ನಗುತ್ತಿರುವುದನ್ನು ನೋಡಿ ನನಗೆ ಬೇಸರವಾಯಿತು ಎಂದು ಹೇಳಿದ್ದಾರೆ. ಹಾಗೂ ಆತನಿಗೆ ಕಪಾಳಮೋಕ್ಷ ಮಾಡುವ ತನ್ನ ನಡೆಯನ್ನು ಸಹಜ ಪ್ರತಿಕ್ರಿಯೆ ಎಂದು ಪ್ರತಿಪಾದಿಸಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಗೀತಾ ಜೈನ್, ಜೂನಿಯರ್ ಸಿವಿಕ್ ಎಂಜಿನಿಯರ್‌ಗಳು ನೆಲಸಮ ಮಾಡಿದ ಮನೆಯ ಒಂದು ಭಾಗ ಮಾತ್ರ ಅಕ್ರಮವಾಗಿದೆ ಮತ್ತು ಅದರ ನಿವಾಸಿಗಳು ಅಕ್ರಮ ಭಾಗವನ್ನು ತೆಗೆದುಹಾಕುವುದಾಗಿ ಭರವಸೆ ನೀಡಿದ್ದಾರೆ. “ಅಕ್ರಮ ನಿರ್ಮಾಣವು ಬಿಲ್ಡರ್‌ಗೆ ಅಡ್ಡಿಯಾಗಿದೆ ಮತ್ತು ಯಾವುದೇ ಸರ್ಕಾರಿ ಸೌಕರ್ಯ ಅಥವಾ ರಸ್ತೆಗೆ ಅಲ್ಲ ಎಂದು ಸಾಬೀತಾಗಿದೆ. ಆದರೂ, ಈ ಅಧಿಕಾರಿಗಳು ಅಲ್ಲಿಗೆ ಹೋಗಿ ಅಕ್ರಮ ಭಾಗವನ್ನು ಕೆಡವುವ ಬದಲು ಇಡೀ ಮನೆಯನ್ನು ನೆಲಸಮಗೊಳಿಸಿದ್ದಾರೆ” ಎಂದು ಅವರು ಹೇಳಿದರು.
ತಮ್ಮ ಮನೆ ಕೆಡಹುವುದನ್ನು ವಿರೋಧಿಸಿದ ಮಹಿಳೆಯರ ಜುಟ್ಟು ಎಳೆದಾಡಿದ್ದಾರೆ ಎಂದು ಶಾಸಕರು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಗಿರ್‌ ಸೋಮನಾಥದ ಹೆದ್ದಾರಿಯಲ್ಲಿ ವಾಹನಗಳನ್ನು ನಿಲ್ಲಿಸಿದ 2 ಸಿಂಹಿಣಿಗಳು, 8 ಸಿಂಹದ ಮರಿಗಳ ಗುಂಪು-ವೀಕ್ಷಿಸಿ

ಇಬ್ಬರು ಇಂಜಿನಿಯರ್‌ಗಳು ಬಿಲ್ಡರ್‌ಗಳ ಸಹಕಾರದೊಂದಿಗೆ ಖಾಸಗಿ ಜಮೀನಿನಲ್ಲಿ ನೆಲಸಮ ಕಾರ್ಯ ನಡೆಸುತ್ತಿದ್ದಾರೆ ಎಂದು ಗೀತಾ ಜೈನ್ ಹೇಳಿದ್ದಾರೆ. ತನ್ನ ಕೃತ್ಯಕ್ಕೆ ವಿಷಾದಿಸುವುದಿಲ್ಲ ಮತ್ತು ಯಾವುದೇ ಶಿಕ್ಷೆಯನ್ನು ಎದುರಿಸಲು ಸಿದ್ಧ ಎಂದು ಅವರು ಹೇಳಿದ್ದಾರೆ.
“ಈ ವಿಷಯವನ್ನು ನಾನು ವಿಧಾನಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಅವರು (ಕಪಾಳಮೋಕ್ಷ ಮಾಡಿದ ಎಂಜಿನಿಯರ್) ನನ್ನ ವಿರುದ್ಧ ಪ್ರಕರಣ ದಾಖಲಿಸಲಿ. ಅದನ್ನು ಎದುರಿಸಲು ನಾನು ಸಿದ್ಧನಿದ್ದೇನೆ. ಪೌರ ಅಧಿಕಾರಿಗಳು ಖಾಸಗಿ ಭೂಮಿಯಲ್ಲಿ ನಿರ್ಮಿಸಿದ ಕಟ್ಟಡಗಳನ್ನು ಕೆಡವುವುದನ್ನು ಹೇಗೆ ಸಹಿಸಿಕೊಳ್ಳುವುದು?” ಎಂದು ಶಾಸಕರು ಪ್ರಶ್ನಿಸಿದರು.
ಗೀತಾ ಜೈನ್ 2019 ರ ಅಸೆಂಬ್ಲಿ ಚುನಾವಣೆಯಲ್ಲಿ ಸ್ವತಂತ್ರವಾಗಿ ಗೆದ್ದರು ಆದರೆ ನಂತರ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದ ನಂತರ ಶಿವಸೇನೆಗೆ ಬೆಂಬಲ ನೀಡಿದರು. ಆದರೆ, ಕಳೆದ ವರ್ಷ ಜೂನ್‌ನಲ್ಲಿ ಏಕನಾಥ್ ಶಿಂಧೆ ಬಂಡಾಯದ ನಂತರ ಗೀತಾ ಜೈನ್ ಈಗ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪಾಳೆಯದಲ್ಲಿದ್ದಾರೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಭಾರತದ ಸೇನೆ ಬಗ್ಗೆ ಪಾಕಿಸ್ತಾನಕ್ಕೆ ಚೀನಾ ಲೈವ್‌ ಮಾಹಿತಿ ನೀಡುತ್ತಿತ್ತು ; ಉನ್ನತ ಸೇನಾ ಜನರಲ್

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement