ಕಲಬುರಗಿ: ರೈತರ ಜಮೀನಿನಲ್ಲಿ ಲ್ಯಾಂಡ್ ಆದ ತರಬೇತಿ ವಿಮಾನ

ಕಲಬುರಗಿ: ತರಬೇತಿ ನೀಡುತ್ತಿದ್ದ ವಿಮಾನವೊಂದು ಹಾರಾಟದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೈಲಟ್ ರೈತರ ಜಮೀನಿನಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಷ (Emergency Landing) ಮಾಡಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ಪೇಟ್ ಸೀರೂರ್ ಗ್ರಾಮದ ಹೊರವಲಯದಲ್ಲಿ ಈ ಘಟನೆ ನಡೆದಿದೆ. ಕಲಬುರಗಿ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿ 15 ಕಿ.ಮೀ ಸಂಚರಿಸಿದ ನಂತರ ವಿಮಾನದ ಇಂಜಿನ್‌ನಲ್ಲಿ ದಿಢೀರ್‌ ಆಗಿ ಟೆಕ್ನಿಕಲ್ ಸಮಸ್ಯೆ ಕಾಣಿಸಿಕೊಂಡಿದೆ. ತಕ್ಷಣವೇ ಎಚ್ಚೆತ್ತ ಪೈಲೆಟ್, ಪೇಟ್‌ ಸೀರೂರ್ ಗ್ರಾಮದ ಜಮೀನಿನಲ್ಲಿ ವಿಮಾನವನ್ನು ತುರ್ತು ಲ್ಯಾಂಡ್ ಮಾಡಿದ್ದಾನೆ.
ಅದೃಷ್ಟವಶಾತ್ ಪೈಲಟ್ ಹಾಗೂ ತರಬೇತಿ ಪೈಲಟ್‌ಗಳು ಅಪಾಯದಿಂದ ಪಾರಾಗಿದ್ದಾರೆ. ಘಟನೆ ಮಾಡಬೂಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಪ್ರಜ್ವಲ್‌ ಪೆನ್ ಡ್ರೈವ್ ಪ್ರಕರಣ : ಡಿಕೆ ಶಿವಕುಮಾರ ವಿರುದ್ಧ ಪೋಸ್ಟರ್‌ ಸಮರ

ನಿಮ್ಮ ಕಾಮೆಂಟ್ ಬರೆಯಿರಿ

advertisement