ಕುಮಟಾ: ಬಾಳಿಗಾ ಕಾಲೇಜಿಗೆ ಆಗಮಿಸಿದ ಚಂದಾವರ ಹನುಮಂತ ದೇವರು

 ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ.ಎ.ವಿ. ಬಾಳಿಗ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯಕ್ಕೆ ಭಾನುವಾರ ಸಂಜೆ ಜಿಲ್ಲೆಯ ಹೆಸರಾಂತ ಚಂದಾವರದ ಹನುಮಂತ ದೇವರು ಆಗಮಿಸಿತ್ತು. ಕಾಲೇಜಿನ ಆವರಣದಲ್ಲಿ ಕೆನರಾ ಕಾಲೇಜು ಸೊಸೈಟಿಯ ಆಡಳಿತ ಮಂಡಳಿಯವರು ಕಾಲೇಜು ಸಿಬ್ಬಂದಿಯಿಂದ ಪೂಜೆ ನೇರವೇರಿತು,
ಕಳೆದ 75 ವರ್ಷಗಳ ಇತಿಹಾಸದಲ್ಲಿ ಬಾಳಿಗಾ ಕಾಲೇಜಿಗೆ ಚಂದಾವರದ ಹನುಮಂತ ದೇವರ ಪಲ್ಲಕ್ಕಿ ಆಗಮಿಸಿದ್ದು ಇದೇ ಮೊದಲು ಎಂದು ಆಡಳಿತ ಮಂಡಳಿಯ ವಿ.ಎಚ್. ನಾಯಕ ಬೆಣ್ಣೆ ತಿಳಿಸಿದರು.

ಬಾಳಿಗಾ ಕಾಲೇಜು ಶಿಕ್ಷಣ ಪ್ರೇಮಿಗಳ ನೆಲೆ, ಇಲ್ಲಿ ಕಲಿತ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ, ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶದಲ್ಲಿ ಪ್ರತಿಷ್ಠಿತ ಹುದ್ದೆಯಲ್ಲಿದ್ದಾರೆ, ಬಾಳಿಗಾ ಕಾಲೇಜಿನಲ್ಲಿ ಕಲಿಯುತ್ತಿರುವ ಹಾಗೂ ಕಾಲೇಜಿನ ಬಗ್ಗೆ ಪ್ರೀತಿ ಹೊಂದಿರುವ ಎಲ್ಲರಿಗೂ ಹನುಮಂತ ದೇವರು ಸುಖ-ಸಮೃದ್ಧಿ ನೀಡಲಿ. ಅವರ ಬದುಕು ಸುಂದರವಾಗಿರಲಿ ಎಂದು ಕಾಲೇಜಿಗೆ ಚಂದಾವರ ಹನುಮಂತ ದೇವರ ದರ್ಶನಕ್ಕಾಗಿ ಕಾತರಿಸಿದ್ದೆವು. ಅದು ಇಂದು ಭಾನುವಾರ ನೆರವೇರಿದೆ ಎಂದು ಆಡಳಿತ ಮಂಡಳಿಯ ವಾಸುದೇವ ನಾಯಕ ಬೆಣ್ಣೆ ಹೇಳಿದ್ದಾರೆ.

ಆಡಳಿತ ಮಂಡಳಿಯ ಕಾರ್ಯಧ್ಯಕ್ಷರಾದ ಡಿ.ಎಂ, ಕಾಮತ, ಕಾರ್ಯದರ್ಶಿ ಹನುಮಂತ ಶಾನಭಾಗ, ಕಲಾ ಮತ್ತು ವಿಜ್ಞಾನ ಕಾಲೇಜು ಪ್ರಾಚಾರ್ಯರಾದ ಡಾ. ಸೋಮಶೇಖರ ಗಾಂವ್ಕರ, ವಾಣಿಜ್ಯ ಕಾಲೇಜು ಪ್ರಾಚಾರ್ಯ, ಡಾ.ಎಸ್.ವಿ.ಶೇಣ್ವಿ , ವಾಣಿಜ್ಯ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಪ್ರೊ, ಎನ್.ಜಿ. ಹೆಗಡೆ, ಡಿಪ್ಲೋಮಾ ಕಾಲೇಜು ಪ್ರಚಾರ್ಯ ಪ್ರೊ.ಎಸ್.ಎನ್.ಹೆಗಡೆ, ಆಡಳಿತ ಮಂಡಳಿಯ ಸದಸ್ಯರು,ಕೆನರಾ ಕಾಲೇಜು ಸೊಸೈಟಿಯ ಅಡಿಯಲ್ಲಿ ಬರುವ ಎಲ್ಲ ಶಿಕ್ಷಣ ಸಂಸ್ಥೆಯ ಎಲ್ಲ ವಿದ್ಯಾಲಯಗಳ ಬೋಧಕ, ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿ ಇದ್ದರು.

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement