ಕರ್ನಾಟಕದ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ 670 ಹುದ್ದೆಗಳಿಗೆ ನೇರ ನೇಮಕಾತಿ: ಅರ್ಜಿ ಸಲ್ಲಿಕೆ ಆರಂಭ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (Karnataka Examination Authority) ಖಾಲಿ ಇರುವ 670 ಹುದ್ದೆಗಳಿಗೆ ಹುದ್ದೆಗಗಳಿಗೆ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯದಲ್ಲಿನ ವಿವಿಧ ಸರ್ಕಾರಿ ಸಂಸ್ಥೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇರ ನೇಮಕಾತಿ ನಡೆಯುತ್ತಿದ್ದು, . ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ, ಮೈಸೂರು ಸೇಲ್ಸ್​ ಇಂಟರ್​​ನ್ಯಾಷನಲ್ ಲಿಮಿಟೆಡ್ ಸಂಸ್ಥೆಗಳಲ್ಲಿ ಒಟ್ಟು 670 ಹುದ್ದೆಗಳು(Posts) ಖಾಲಿ ಇವೆ.
ಈ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಹ ಅಭ್ಯರ್ಥಿಗಳು ನೇಮಕಾತಿಗೆ ಅರ್ಹತೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು.
ಕರ್ನಾಟಕ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ (KARBWWB) -186 ಹುದ್ದೆಗಳು
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ (KFCSC) -386 ಹುದ್ದೆಗಳು
ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ನಿಯಮಿತ (KSEDCL), ಬೆಂಗಳೂರು- 26 ಹುದ್ದೆಗಳು
ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ (MSIL), ಬೆಂಗಳೂರು- 72 ಹುದ್ದೆಗಳು
ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ:
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮ್ಯಾನೇಜರ್ (ಟೆಕ್ನಿಕಲ್-ಗ್ರೂಪ್ ಬಿ)- 4
ಅಸಿಸ್ಟೆಂಟ್ ಮ್ಯಾನೇಜರ್ (ನಾನ್​- ಟೆಕ್ನಿಕಲ್, ಗ್ರೂಪ್-ಬಿ)- 2
ಪ್ರೈವೇಟ್ ಸೆಕ್ರೆಟರಿ (ಗ್ರೂಪ್ ಸಿ)-1
ಸೀನಿಯರ್ ಅಸಿಸ್ಟೆಂಟ್ (ಟೆಕ್ನಿಕಲ್- ಗ್ರೂಪ್ ಸಿ)- 4
ಸೀನಿಯರ್ ಅಸಿಸ್ಟೆಂಟ್ (ನಾನ್​ ಟೆಕ್ನಿಕಲ್- ಗ್ರೂಪ್ ಸಿ)-3
ಅಸಿಸ್ಟೆಂಟ್ (ಟೆಕ್ನಿಕಲ್- ಗ್ರೂಪ್ ಸಿ)-6
ಅಸಿಸ್ಟೆಂಟ್ (ನಾನ್​- ಟೆಕ್ನಿಕಲ್, ಗ್ರೂಪ್ ಸಿ)- 6

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತ:
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮ್ಯಾನೇಜರ್- 10
ಸೀನಿಯರ್ ಅಸಿಸ್ಟೆಂಟ್- 57
ಸೀನಿಯರ್ ಅಸಿಸ್ಟೆಂಟ್ (ಅಕೌಂಟ್ಸ್​)- 33
ಕ್ವಾಲಿಟಿ ಇನ್ಸ್​ಪೆಕ್ಟರ್- 23
ಜೂನಿಯರ್ ಅಸಿಸ್ಟೆಂಟ್- 263
ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ:
ಹುದ್ದೆಯ ಮಾಹಿತಿ:
ವೆಲ್​ಫೇರ್ ಆಫೀಸರ್- 12
ಫೀಲ್ಡ್​ ಇನ್ಸ್​ಪೆಕ್ಟರ್- 60
ಫಸ್ಟ್​ ಡಿವಿಶನ್ ಅಸಿಸ್ಟೆಂಟ್ (FDA)- 12
ಪ್ರೈವೇಟ್ ಕನ್ಸಲ್ಟೆಂಟ್- 2
ಸೆಕೆಂಡ್ ಡಿವಿಶನ್ ಅಸಿಸ್ಟೆಂಟ್ (SDA)- 100
ಮೈಸೂರು ಸೇಲ್ಸ್​ ಇಂಟರ್​ನ್ಯಾಷನಲ್ ಲಿಮಿಟೆಡ್:
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಮ್ಯಾನೇಜರ್- 23
ಸೇಲ್ಸ್​ ಸೂಪರ್​ವೈಸರ್- 19
ಸೇಲ್ಸ್​ ಎಂಜಿನಿಯರ್- 4
ಅಕೌಂಟ್ಸ್​ ಕ್ಲರ್ಕ್ಸ್​- 6
ಕ್ಲರ್ಕ್ಸ್​- 14
ಸೇಲ್ಸ್​ ರೆಪ್ರೆಸೆಂಟೇಟಿವ್- 6

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಜುಲೈ 22, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ (Last Date). ಅಭ್ಯರ್ಥಿಗಳು ಆನ್​ಲೈನ್ (Online) ಮೂಲಕ ಅರ್ಜಿ ಸಲ್ಲಿಸಬೇಕು.
ವಿದ್ಯಾರ್ಹತೆ, ವಯೋಮಿತಿ, ವಯೋಮಿತಿ ಸಡಿಲಿಕೆ, ಅರ್ಜಿ ಶುಲ್ಕ ಇತ್ಯಾದಿ ವಿವರಗಳಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೇಮಕಾತಿ ಅಧಿಸೂಚನೆಯನ್ನು ಪರಿಶೀಲಿಸಬಹುದು. ಮಾಹಿತಿಗೆ KEA- ನೋಟಿಫಿಕೇಶನ್ ನೋಡಲು KEA-Notification  ಇಲ್ಲಿ ಕ್ಲಿಕ್‌ ಮಾಡಬಹುದು.
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಲು https://cetonline.karnataka.gov.in/kea/   ಇಲ್ಲಿ ಕ್ಲಿಕ್ ಮಾಡಬಹುದು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23-06-2023
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಜುಲೈ 22-೦7-2023
ಆನ್​ಲೈನ್ ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನ: ಜುಲೈ 25, 2023
ಇ-ಪೋಸ್ಟ್​ ಆಫೀಸ್ ಮೂಲಕ ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನ: ಜುಲೈ 26, 2023

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement