ನವದೆಹಲಿ: ಪ್ರಗತಿ ಮೈದಾನದ ಸುರಂಗ ಮಾರ್ಗದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರಾತ್ರಿ ಗಸ್ತಿನಲ್ಲಿ ಸುಮಾರು 1,600 ಜನರನ್ನು ಕರೆದೊಯ್ದು ವಿಚಾರಣೆ ನಡೆಸಿದ್ದು, ಅಂತಿಮವಾಗಿ ಈ ₹ 2 ಲಕ್ಷ ದರೋಡೆಗೆ ಸಂಬಂಧಿಸಿದಂತೆ ಐದು ಜನರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಾಂಡಿ ಚೌಕ್ ಮೂಲದ ಓಮಿಯಾ ಎಂಟರ್‌ಪ್ರೈಸಸ್‌ನ ಡೆಲಿವರಿ ಏಜೆಂಟ್ ಪಟೇಲ್ ಸಜನಕುಮಾರ ಮತ್ತು ಅವರ ಸಹವರ್ತಿ ಜಿಗರ್ ಪಟೇಲ್ ಶನಿವಾರ ಕ್ಯಾಬ್‌ನಲ್ಲಿ ಗುರುಗ್ರಾಮಕ್ಕೆ ತೆರಳುತ್ತಿದ್ದಾಗ ಹಾಡಹಗಲೇ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದಾರಿಯನ್ನು ತಡೆದಿದ್ದಾರೆ. ಇಬ್ಬರು ಪಿಲಿಯನ್ ರೈಡರ್‌ಗಳು ಬೈಕ್‌ನಿಂದ ಇಳಿದು ಪಿಸ್ತೂಲ್ ಹಿಡಿದು ಗನ್ ಪಾಯಿಂಟ್‌ನಲ್ಲಿ ಹೆದರಿಸಿ ₹ 2 ಲಕ್ಷ ದರೋಡೆ ಮಾಡಿದ್ದರು.
ಅವರಲ್ಲಿ ಒಬ್ಬ ಡ್ರೈವರ್ ಸೀಟ್ ಕಡೆಗೆ ತೆರಳಿದರೆ ಇನ್ನೊಬ್ಬ ಹಿಂದಿನ ಬಾಗಿಲು ತೆರೆದು ನಗದು ಚೀಲವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. 1.5-ಕಿಮೀ ಉದ್ದದ ಸುರಂಗವು ನವದೆಹಲಿಯನ್ನು ಸರೈ ಕಾಲೇ ಖಾನ್ ಮತ್ತು ನೋಯ್ಡಾದೊಂದಿಗೆ ಸಂಪರ್ಕಿಸುತ್ತದೆ ಮತ್ತು ಇದು ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿದೆ. ಹಗಲು ಹೊತ್ತಿನಲ್ಲಿ ಜನನಿಬಿಡ ಅಂಡರ್‌ಪಾಸ್‌ನಲ್ಲಿ ದರೋಡೆ ನಡೆಸಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ