‘ಆದಿಪುರುಷ’ ಸಿನೆಮಾ ವಿವಾದದ ನಡುವೆ, ರಮಾನಂದ ಸಾಗರ ‘ರಾಮಾಯಣ’ ಧಾರವಾಹಿ ಈ ದಿನಾಂಕದಿಂದ ಟಿವಿಯಲ್ಲಿ ಮತ್ತೆ ಪ್ರಸಾರ

ಮುಂಬೈ: ಜೂನ್ 16 ರಂದು ಬಿಡುಗಡೆಯಾದ ಆದಿಪುರುಷ ಚಿತ್ರಕ್ಕೆ ಪ್ರೇಕ್ಷಕರಿಂದ ಸಾಕಷ್ಟು ಪ್ರತಿಕ್ರಿಯೆ ವ್ಯಕ್ತವಾಗಿದೆ. ಭರ್ಜರಿ ಪ್ರಚಾರ ಪಡೆದು ಭಾರೀ ನಿರೀಕ್ಷೆ ಮೂಡಿಸಿದ್ದ ಚಿತ್ರವು ದೇಶದಾದ್ಯಂತ ನಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು. ಕಳಪೆ ವಿಎಫ್‌ಎಕ್ಸ್‌ನಿಂದ ಹಿಡಿದು ಡೈಲಾಗ್‌ಗಳ ವರೆಗೆ ಚಿತ್ರವು ಸಿನಿಪ್ರೇಮಿಗಳ ನಿರೀಕ್ಷೆಯನ್ನು ಹುಸಿ ಮಾಡಿದೆ.
ಇದರ ಮಧ್ಯೆ, ರಮಾನಂದ್ ಸಾಗರ್ ಅವರ ಜನಪ್ರಿಯ ಟಿವಿ ಧಾರಾವಾಹಿ ʼರಾಮಾಯಣʼ ಶೀಘ್ರದಲ್ಲೇ ಟಿವಿಯಲ್ಲಿ ಮರುಪ್ರಸಾರವಾಗಲಿದೆ ಎಂದು ಪ್ರಕಟಿಸಲಾಗಿದೆ. ಜುಲೈ 3 ರಿಂದ ರಾಮಾಯಣ ಧಾರಾವಾಹಿಯು ಚಾನೆಲ್‌ನಲ್ಲಿ ಪ್ರಸಾರವಾಗಲಿದೆ ಎಂದು ಶೆಮರೂ ಟಿವಿ ಪ್ರಕಟಿಸಿದೆ.
ಪ್ರಭಾಸ್, ಕೃತಿ ಸನೋನ್ ಮತ್ತು ಸೈಫ್ ಅಲಿ ಖಾನ್ ಅಭಿನಯದ ಚಿತ್ರ ಬಿಡುಗಡೆಯಾದಾಗಿನಿಂದ ಚರ್ಚೆಯಲ್ಲಿದೆ. ಚಲನಚಿತ್ರವು ಅದರ ಸತ್ಯಾಸತ್ಯತೆ ಬಗ್ಗೆ ಪ್ರಶ್ನಿಸಲ್ಪಟ್ಟಿದೆ. ರಾಮಾಯಣ ಧಾರವಾಹಿಯಲ್ಲಿ ರಾಮ ಪಾತ್ರದಲ್ಲಿ ನಟಿಸಿದ ಅರುಣ ಗೋವಿಲ್, ಆದಿಪುರುಷನನ್ನು ‘ಹಾಲಿವುಡ್ ಕಿ ಕಾರ್ಟೂನ್’ ಎಂದೂ ಕರೆದರು.

ರಾಮಾಯಣದಲ್ಲಿ ಅರುಣ ಗೋವಿಲ್ ಮತ್ತು ದೀಪಿಕಾ ಚಿಖ್ಲಿಯಾ ಕ್ರಮವಾಗಿ ರಾಮ ಮತ್ತು ಸೀತೆಯ ಪಾತ್ರವನ್ನು ನಿರ್ವಹಿಸಿದರೆ, ಸುನಿಲ್ ಲಹಿರಿ ಲಕ್ಷ್ಮಣನಾಗಿ ನಟಿಸಿದ್ದಾರೆ. ಟಿವಿ ಕಾರ್ಯಕ್ರಮದ ವೀಡಿಯೊವನ್ನು ಹಂಚಿಕೊಂಡ ಶೆಮರೂ ಟಿವಿಯ ಇನ್‌ಸ್ಟಾಗ್ರಾಮ್ ಹ್ಯಾಂಡಲ್ಲಿನಲ್ಲಿ ಪ್ರಿಯ ವೀಕ್ಷಕರೇ, ನಾವು ನಿಮ್ಮೆಲ್ಲರಿಗೂ ವಿಶ್ವ-ಪ್ರಸಿದ್ಧ ಪೌರಾಣಿಕ ಧಾರಾವಾಹಿ “ರಾಮಾಯಣ”ವನ್ನು ತರುತ್ತಿದ್ದೇವೆ… “ರಾಮಾಯಣ”ವನ್ನು ಜುಲೈ 3 ರಿಂದ ಸಂಜೆ 7:30 ಕ್ಕೆ ನಿಮ್ಮ ನೆಚ್ಚಿನ ಚಾನಲ್ ಶೆಮರೂ ಟವಿಯಲ್ಲಿ ವೀಕ್ಷಿಸಿ” ಎಂದು ಬರೆದಿದೆ.
ಆದಿಪುರುಷ ಹಿಂದೂ ಮಹಾಕಾವ್ಯ ರಾಮಾಯಣವನ್ನು ಆಧರಿಸಿದ ಪೌರಾಣಿಕ ಸಾಹಸ ಚಿತ್ರವಾಗಿದೆ. ಚಿತ್ರವನ್ನು ಓಂ ರಾವುತ್ ಬರೆದು ನಿರ್ದೇಶಿಸಿದ್ದಾರೆ ಮತ್ತು ಟಿ-ಸೀರೀಸ್ ಮತ್ತು ರೆಟ್ರೋಫಿಲ್ಸ್ ಸಂಸ್ಥೆ ನಿರ್ಮಿಸಿದ್ದಾರೆ. ಹಿಂದಿ ಮತ್ತು ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡ ಈ ಚಿತ್ರದಲ್ಲಿ ಪ್ರಭಾಸ್, ಸೈಫ್ ಅಲಿ ಖಾನ್, ಕೃತಿ ಸನೋನ್, ಸನ್ನಿ ಸಿಂಗ್ ಮತ್ತು ದೇವದತ್ತ ನಾಗೆ ನಟಿಸಿದ್ದಾರೆ. ಈ ಚಿತ್ರವು 500 ಕೋಟಿ ರೂಪಾಯಿಗಳ ಬೃಹತ್ ಬಜೆಟ್‌ನಲ್ಲಿ ನಿರ್ಮಿಸಲ್ಪಟ್ಟಿದೆ, ಇದು ಅತ್ಯಂತ ದುಬಾರಿ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ.

ಪ್ರಮುಖ ಸುದ್ದಿ :-   ಪಿಒಕೆ ಹಿಂತಿರುಗಿಸಿ, ಉಗ್ರರನ್ನು ಹಸ್ತಾಂತರಿಸಿ ; ಇದು ಬಿಟ್ಟು ಬೇರೆ ಮಾತುಕತೆ ಇಲ್ಲ; ಡಿಜಿಎಂಒ ಸಭೆಗೂ ಮುನ್ನ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ

 

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement